Site icon Vistara News

Adipurush Box Office Day 1: ಆದಿಪುರುಷ್‌ಗೆ ವಿಶ್ವಾದ್ಯಂತ ಭರ್ಜರಿ ಓಪನಿಂಗ್ ; ಯಾವ ವಿವಾದ, ಟೀಕೆಗೂ‌ ಕ್ಯಾರೇ ಇಲ್ಲ!

Adipurush Box Office Day 1

ಬೆಂಗಳೂರು : ʻಆದಿಪುರುಷ್‌ʼ ಸಿನಿಮಾ ಜೂನ್‌ 16ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ, ಜೂನ್‌ 16ರ ಶುಕ್ರವಾರ ಬಾಕ್ಸ್ ಆಫೀಸ್‌ನಲ್ಲಿ (Adipurush Box Office Day 1) ಭಾರಿ ಓಪನಿಂಗ್ ಪಡೆದಿದೆ. ಆರಂಭಿಕ ಅಂದಾಜಿನ ಪ್ರಕಾರ ಹಿಂದಿ ಆವೃತ್ತಿ ಸುಮಾರು 36-38 ಕೋಟಿ ರೂ. ಹಣ ಗಳಿಸಿದೆ ಮತ್ತು ಎಲ್ಲಾ ಭಾಷೆಗಳಲ್ಲಿ 90 ಕೋಟಿ ರೂ. ಸಂಗ್ರಹವಾಗಿದೆ. ಪಠಾಣ್ ಮತ್ತು ಕೆಜಿಎಫ್ 2 ನಂತರ ಹಿಂದಿಯಲ್ಲಿ ಮೂರನೇ ಅತಿದೊಡ್ಡ ಓಪನಿಂಗ್ ಪಡೆದ ಸಿನಿಮಾವಾಗಿ ಇದು ಹೊರಹೊಮ್ಮಿದೆ.

ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೂನ್ ಜಾನಕಿಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿದ್ದಾರೆ. ಓಂ ರಾವುತ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇನ್ನೊಂದು ವರದಿಯ ಪ್ರಕಾರ, ಭಾರತದಲ್ಲಿ ಈ ಚಿತ್ರ 110-112 ಕೋಟಿ ರೂ. ಬಾಚಿಕೊಂಡಿದೆ. ಹಿಂದಿ ವರ್ಷನ್​ನ ಒಂದರಲ್ಲೇ ಈ ಚಿತ್ರದ ಗಳಿಕೆ 36-38 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ ಈ ಚಿತ್ರ 150 ಕೋಟಿ ರೂಪಾಯಿ ಗಳಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಮತ್ತಷ್ಟು ಏರಿಕೆ ಆಗಬಹುದು ಎನ್ನಲಾಗಿದೆ.

ಆದಿಪುರುಷ್‌ ಚಿತ್ರವನ್ನು 700 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರ ಇದೆಂದು ಹೇಳಲಾಗಿದೆ.

ಇದನ್ನೂ ಓದಿ: Adipurush Movie: ಹನುಮನಿಗೆ ಮೀಸಲಿಟ್ಟ ಸೀಟಿನಲ್ಲಿ ಕುಳಿತ ವ್ಯಕ್ತಿಗೆ ಥಳಿಸಿದ ಪ್ರಭಾಸ್‌ ಅಭಿಮಾನಿಗಳು

ನೇಪಾಳದಿಂದ ಆಕ್ಷೇಪ

ಕಾಟ್ಠಂಡು ಮೆಟ್ರೋಪಾಲಿಟಿನ್​ ಸಿಟಿ ಮೇಯರ್​ ಬಾಲೆನ್​ ಶಾ ಅವರು ಗುರುವಾರ ‘ಆದಿಪುರುಷ್​’ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ‘ಜಾನಕಿ(ಸೀತಾಮಾತೆ) ಭಾರತದ ಪುತ್ರಿ’ ಎಂಬ ಒಂದು ಡೈಲಾಗ್ ಇದೆ. ಆದರೆ ಸೀತಾ ನಿಜಕ್ಕೂ ಜನಿಸಿದ್ದು ಈಗಿನ ನೇಪಾಳದಲ್ಲಿ. ಸಿನಿಮಾದಲ್ಲಿರುವ ಈ ಸಂಭಾಷಣೆಯನ್ನು ತೆಗೆಯದ ಹೊರತು ಆದಿಪುರುಷ್ ಸಿನಿಮಾವನ್ನು ನೇಪಾಳದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದರು. ‘ಈ ಅನಗತ್ಯ ಡೈಲಾಗ್​ ತೆಗೆಯುವವರೆಗೂ ಭಾರತದ ಯಾವುದೇ ಹಿಂದಿ ಸಿನಿಮಾಗಳನ್ನೂ ನೇಪಾಳದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದೂ ತಿಳಿಸಿದ್ದರು. ಹಾಗೇ, ಆದಿಪುರುಷ್​ ಬಿಡುಗಡೆಗೆ ನೀಡಿದ್ದ ಒಪ್ಪಿಗೆಯನ್ನು ನೇಪಾಳ ಸೆನ್ಸಾರ್ ಬೋರ್ಡ್​ ತಡೆಹಿಡಿದಿತ್ತು. ಇಷ್ಟೆಲ್ಲ ಆದಮೇಲೆ ಈಗ ಸಿನಿಮಾದಲ್ಲಿದ್ದ ‘ಜಾನಕಿ ಭಾರತದ ಮಗಳು’ ಎಂಬ ಡೈಲಾಗ್​ನ್ನು ತೆಗೆದುಹಾಕಲಾಗಿದೆ.

Exit mobile version