ಬೆಂಗಳೂರು : ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ʻಆದಿಪುರುಷ್ ಸಿನಿಮಾʼ (Adipurush Film) ಟೀಸರ್ ಭಾರಿ ಚರ್ಚೆಗೆ ಒಳಗಾಗಿತ್ತು. ಇದರ ಗ್ರಾಫಿಕ್ ಮತ್ತು ಪಾತ್ರಚಿತ್ರಣಗಳಿಂದಾಗಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿತ್ತು. ಟೀಸರ್‌ನಲ್ಲಿರುವ ರಾಮ, ಸೀತೆ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬುದು ಚಿತ್ರತಂಡದ ಮೇಲಿರುವ ಆರೋಪ. ಇದೀಗ ಕಾನೂನು ಸಮರಕ್ಕೂ ಚಿತ್ರತಂಡ ತಯಾರಾಗಬೇಕಿದೆ. ನಟ ಪ್ರಭಾಸ್, ಸೈಫ್ ಅಲಿಖಾನ್ ಹಾಗೂ ನಿರ್ದೇಶಕ ಓಂ ರಾವತ್ ಸೇರಿ ಚಿತ್ರತಂಡದ ಐವರ ವಿರುದ್ಧ ಕೇಸ್ ದಾಖಲಾಗಿದೆ.
ಆದಿಪುರುಷ್ ಟೀಸರ್ ನೋಡಿದಾಗ ರಾಮ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ನೈಜವಾಗಿ ತೋರಿಸಿಲ್ಲ. ಆ ಪಾತ್ರಗಳನ್ನು ಅವಮಾನ ಮಾಡಲಾಗಿದೆ ಎಂದು ಉತ್ತರಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿರುವ ನ್ಯಾಯಾಲಯವು ಅಕ್ಟೋಬರ್ 27ರಂದು ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಈ ಹಿಂದೆಯೂ ದೆಹಲಿಯಲ್ಲೂ ಮತ್ತೊಂದು ದೂರು ಚಿತ್ರತಂಡದ ವಿರುದ್ಧ ದಾಖಲಾಗಿತ್ತು.
ಇದನ್ನೂ ಓದಿ | Adipurush | ಆಕ್ಷೇಪಾರ್ಹ ದೃಶ್ಯ ತೆಗೆಯಿರಿ ಇಲ್ಲದಿದ್ದರೆ ಕ್ರಮ ನಿಶ್ಚಿತ: ಆದಿಪುರುಷ ನಿರ್ದೇಶಕರಿಗೆ ಎಂಪಿ ಗೃಹ ಸಚಿವ
ಹೈ ಬಜೆಟ್ ಸಿನಿಮಾ
ನೂರು ಕೋಟಿಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. 3ಡಿಯಲ್ಲೂ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ʻʻಗ್ರಾಫಿಕ್ಸ್ ಕಳಪೆಯಾಗಿಲ್ಲ. 3ಡಿ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವುದರಿಂದ ಮಸುಕಾಗಿ ಕಾಣಿಸುತ್ತಿದೆʼʼ ಎಂದು ನಿರ್ದೇಶಕ ಓಂ ರಾವತ್ ಸ್ಪಷ್ಟನೆ ನೀಡಿದ್ದರು.
ಟ್ರೋಲ್ ಆಯ್ತು ಆದಿ ಪುರುಷ್
ರಾಮಾಯಣವನ್ನೇ ಆಧಾರವಾಗಿಸಿಕೊಟ್ಟುಕೊಂಡು ಓಂ ರಾವತ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹಿಂದಿ ಹಾಗೂ ತೆಲುಗಿನಲ್ಲಿ ಚಿತ್ರ ತೆರೆಗೆ ಬರಲಿದೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ‘ಆದಿಪುರುಷ್’ ಸಿನಿಮಾ ಮೂಲಕ ಪೌರಾಣಿಕ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಜನವರಿ 12ಕ್ಕೆ ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಆದಿಪುರ್ ಟೀಸರ್ ಬಿಡುಗಡೆಯಾದಾಗಿನಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ‘ಗೇಮ್ ಆಫ್ ಥ್ರೋನ್’ನ ಕೆಲವು ದೃಶ್ಯಗಳಿಗೂ ಹಾಗೂ ‘ಆದಿಪುರುಷ್’ ಟೀಸರ್‌ಗೂ ಸಾಮ್ಯತೆ ಇದೆ ಎನ್ನಲಾಗಿತ್ತು.