Site icon Vistara News

Adipurush Film | ಬಾಯ್ಕಾಟ್ ಎಫೆಕ್ಟ್, ಆದಿಪುರುಷ್‌ ಚಿತ್ರ ಬಿಡುಗಡೆ ಮುಂದೂಡಿಕೆ!

Adipurush Film

ಬೆಂಗಳೂರು : ಪ್ರಭಾಸ್‌ ನಟನೆಯ (Adipurush Film ) ಆದಿಪುರುಷ್‌ ಸಿನಿಮಾ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಸಕ್ರಾಂತಿಗೆ ರಿಲೀಸ್‌ ಆಗಬೇಕಿದ್ದ ಚಿತ್ರ ಜೂನ್ 16, 2023ಕ್ಕೆ ರಿಲೀಸ್ ಆಗಲಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಓಂ ರಾವತ್‌ ಟ್ವೀಟ್‌ ಮೂಲಕ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರವನ್ನು ಬಹಿಷ್ಕರಿಸುವಂತೆ ಕ್ಯಾಂಪೇನ್ ಮಾಡಲಾಗಿತ್ತು.

ಅಕ್ಟೋಬರ್​ 2ರಂದು ಅಯೋಧ್ಯೆಯಲ್ಲಿ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿತ್ತು. ನೋಡಿದ ಪ್ರೇಕ್ಷಕರು ಕಳಪೆ ಗ್ರಾಫಿಕ್ಸ್‌ ಎಂದು ಕಮೆಂಟ್‌ ಮಾಡಿದ್ದರು. ಇದನ್ನು ತಂಡ ಗಂಭೀರವಾಗಿ ಪರಿಗಣಿಸಿದೆ. ಓಂ ರಾವತ್‌ ಟ್ವೀಟ್‌ ಮಾಡಿದ್ದು ʻʻಆದಿಪುರುಷ್​ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ಇರುವ ಭಕ್ತಿ. ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯ ವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಬೇಕಾಗಿದೆ. ಹಾಗಾಗಿ ಆದಿಪುರುಷ್ ಚಿತ್ರ ಜೂನ್​ 16ರಂದು ರಿಲೀಸ್​ ಆಗಲಿದೆ. ಹೆಮ್ಮೆ ಪಡುವಂತಹ ಸಿನಿಮಾ ಮಾಡಲು ನಾವು ಪಣತೊಟ್ಟಿದ್ದೇವೆ. ನಾವು ಮುಂದುವರಿಯಲು ನಿಮ್ಮ ಪ್ರೀತಿ, ಬೆಂಬಲ ಇರಲಿʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Adipurush Film | ಆದಿಪುರುಷ್‌ ಚಿತ್ರತಂಡದ ಐವರ ವಿರುದ್ಧ ಕೇಸ್: ಅ. 27ರಂದು ವಿಚಾರಣೆ

ಈ ಚಿತ್ರದಲ್ಲಿ ಪ್ರಭಾಸ್‌ ರಾಮನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಫ್‌ ಅಲಿ ಖಾನ್‌ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೃತಿ ಸನೋನ್ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

ಟೀಸರ್‌ ವಿವಾದ!
ʻಆದಿಪುರುಷ್‌ ಸಿನಿಮಾʼ (Adipurush Film) ಟೀಸರ್‌ ಭಾರಿ ಚರ್ಚೆಗೆ ಒಳಗಾಗಿತ್ತು. ಇದರ ಗ್ರಾಫಿಕ್‌ ಮತ್ತು ಪಾತ್ರಚಿತ್ರಣಗಳಿಂದಾಗಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿತ್ತು. ಟೀಸರ್‌ನಲ್ಲಿರುವ ರಾಮ, ಸೀತೆ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬುದು ಚಿತ್ರತಂಡದ ಮೇಲಿರುವ ಆರೋಪ. ನಟ ಪ್ರಭಾಸ್, ಸೈಫ್‌ ಅಲಿಖಾನ್‌ ಹಾಗೂ ನಿರ್ದೇಶಕ ಓಂ ರಾವತ್ ಸೇರಿ ಚಿತ್ರತಂಡದ ಐವರ ವಿರುದ್ಧ ಕೇಸ್ ದಾಖಲಾಗಿತ್ತು. 

ಆದಿಪುರುಷ್‌ ಟೀಸರ್‌ ನೋಡಿದಾಗ ರಾಮ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ನೈಜವಾಗಿ ತೋರಿಸಿಲ್ಲ. ಆ ಪಾತ್ರಗಳನ್ನು ಅವಮಾನ ಮಾಡಲಾಗಿದೆ ಎಂದು ಉತ್ತರಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು.

ಹೈ ಬಜೆಟ್‌ ಸಿನಿಮಾ
4 ನೂರು ಕೋಟಿಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. 3ಡಿಯಲ್ಲೂ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ಹಿಂದಿ ಹಾಗೂ ತೆಲುಗಿನಲ್ಲಿ ಚಿತ್ರ ತೆರೆಗೆ ಬರಲಿದೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ‘ಆದಿಪುರುಷ್’ ಸಿನಿಮಾ ಮೂಲಕ ಪೌರಾಣಿಕ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Actor Prabhas | ಪ್ರಭಾಸ್‌ ನಟನೆಯ ಆದಿಪುರುಷ್‌ ಟೀಸರ್‌ ಲಾಂಚ್‌ ಮಾಡಲಿದ್ದಾರಾ ಯೋಗಿ ಆದಿತ್ಯನಾಥ್‌?

Exit mobile version