Site icon Vistara News

Adipurush Movie: ಬ್ಲಾಕ್‌ ಬಸ್ಟರ್‌ ಸಿನಿಮಾ ಇದು; ವದಂತಿಗಳನ್ನು ನಂಬಬೇಡಿ ಎಂದ ನೆಟ್ಟಿಗರು!

Adipurush first reviews out

ಬೆಂಗಳೂರು: ಸದಾ ವಿವಾದಗಳಿಂದ ಸದ್ದು ಮಾಡುತ್ತಿದ್ದ ಪ್ರಭಾಸ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ಆದಿಪುರುಷ್‌ (Adipurush Movie) ಜೂನ್‌ 16ರಂದು ವಿಶ್ವಾದ್ಯಂತ ತೆರೆ ಕಂಡಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬೆಳಗ್ಗೆ 4 ಗಂಟೆಗೆ ಶೋಗಳು ಪ್ರಾರಂಭಗೊಂಡಿವೆ. ಮೊದಲ ಶೋ ಮುಗಿದಿದ್ದು, ಪ್ರೇಕ್ಷಕರು ಟ್ವಿಟರ್ ಮೂಲಕ ವಿಮರ್ಶೆಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ‘ರಾಮಾಯಣದ ಆಧುನಿಕ ಪುನರಾವರ್ತನೆ’ ಎಂದು ಅಭಿಮಾನಿಗಳು ಸಿನಿಮಾವನ್ನು ಕೊಂಡಾಡಿದ್ದಾರೆ.

ಓಂ ರಾವುತ್ ನಿರ್ದೇಶನದ ಈ ಚಿತ್ರ ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ 2ಡಿ ಮತ್ತು 3ಡಿಯಲ್ಲಿ ಬಿಡುಗಡೆಯಾಗಿದೆ. ಮೊದಲ ದಿನದ ಮೊದಲ ಪ್ರದರ್ಶನಗಳು ಮುಕ್ತಾಯವಾಗುತ್ತಿದ್ದಂತೆ, ಟ್ವಿಟರ್‌ ಮೂಲಕ ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲವರುಈ ಸಿನಿಮಾ ಮೂಲಕ ಮತ್ತೆ ಪ್ರಭಾಸ್‌ ಕಮ್ ಬ್ಯಾಕ್ ಆಗಿದ್ದಾರೆ. ಆದಿಪುರುಷದಂತಹ ಚಿತ್ರಗಳನ್ನು “ಪ್ರಶಂಸಿಸಬೇಕು’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಬ್ಬರು ಟ್ವೀಟ್‌ನಲ್ಲಿ ʻʻಬ್ಲಾಕ್‌ ಬಸ್ಟರ್‌ ಸಿನಿಮಾ. ಹುಡುಗರೇ ವದಂತಿಗಳನ್ನು ನಂಬಬೇಡಿ‼️ 1000 ಕೋಟಿ ರೂ. ಕಲೆಕ್ಷನ್‌ ಗ್ಯಾರಂಟಿ. ಈ ಪ್ರದರ್ಶನದ ನಂತರ ನಾನು 2D XD ವೀಕ್ಷಿಸಲಿದ್ದೇನೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Adipurush Movie: ನೇಪಾಳದಿಂದ ಆಕ್ಷೇಪ; ಆದಿಪುರುಷ್​ ಸಿನಿಮಾದಿಂದ​ ಜಾನಕಿ ಭಾರತದ ಪುತ್ರಿ ಎಂಬ ಡೈಲಾಗ್​ ಮಾಯ

3D ಅದ್ಭುತವಾಗಿದೆ. ಪ್ರಭಾಸ್ ಮತ್ತು ಕೃತಿ ಸನೂನ್‌ ನಟನೆ ಅದ್ಭುತ. ಹಾಡುಗಳು ತುಂಬಾ ಚೆನ್ನಾಗಿವೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ VFX ಕಳಪೆಯಾಗಿದೆ. ದೊಡ್ಡ ಪರದೆಯಲ್ಲಿ ಸಿನಿಮಾ ನೋಡಬೇಕುʼʼಎಂದು ಬರೆದುಕೊಂಡಿದ್ದಾರೆ.

ʻʻಕೆಲವು ಚಲನಚಿತ್ರಗಳನ್ನು ಮುಂಚೆಯೇ ನಿರ್ಣಯಿಸಬಾರದು. ಆದರೆ ಪ್ರಶಂಸಿಸಬೇಕು. ಸಿನಿಮಾದ ಎರಡನೇ ಪಾರ್ಟ್‌ ಹೊರತಾಗಿ, ಚಲನಚಿತ್ರವು ಅಭಿಮಾನಿಗಳಿಗೆ ಸಾಕಷ್ಟು ಗೂಸ್‌ಬಂಪ್ಸ್ ಕ್ಷಣಗಳನ್ನು ಹೊಂದಿದೆ. ಸಂಗೀತ, ಚಿತ್ರಕಥೆ ಅದ್ಭುತʼʼ ಎಂದು ಬರೆದುಕೊಂಡಿದ್ದಾರೆ.


ʻʻಹಾಡುಗಳು ಮತ್ತು ಬಿಜಿಎಂ ಪ್ರಮುಖ ಹೈಲೈಟ್‌ʼʼಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಹಲವು ಥಿಯೇಟರ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಮುಂಜಾನೆ 5 ಗಂಟೆಗೆ ಶೋ ಆರಂಭ ಆಗಿದೆ.

ಪ್ರಭಾಸ್, ಕೃತಿ ಸನೂನ್, ಸೈಫ್ ಅಲಿ ಖಾನ್ ಅಭಿನಯಿಸಿರುವ ಸಿನಿಮಾ ಕಾವೇರಿ, ಪ್ರಸನ್ನ, ವೀರೇಶ್, ಊರ್ವಶಿ, ಭೂಮಿಕಾ ಸೇರಿದಂತೆ ಹಲವು ಥೀಯೇಟರ್‌ಗಳಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. ಪಿವಿಆರ್‌, ಐನಾಕ್ಸ್‌ ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲೂ ತೆರೆದುಕೊಂಡಿದೆ. 2ಡಿ ಮತ್ತು 3ಡಿ ವರ್ಷನ್‌ಗಳಲ್ಲಿ ಈ ಸಿನಿಮಾ ತೆರೆಗೆ ಬಂದಿದೆ.

ಬೆಂಗಳೂರಿನಲ್ಲಿ ಸಿನಿಮಾಗೆ ಭರ್ಜರಿ ಶೋಗಳು ಸಿಕ್ಕಿದೆ. ʼಆದಿಪುರುಷ್’ ತೆಲುಗು ಆವೃತ್ತಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಸಿನಿಮಾದ ತೆಲುಗು ವರ್ಷನ್‌ಗೆ ಸುಮಾರು 400ಕ್ಕೂ (2ಡಿ+3ಡಿ) ಅಧಿಕ ಶೋಗಳು ಸಿಕ್ಕಿದ್ದು, ಕನ್ನಡ ವರ್ಷನ್‌ಗೆ 25+ ಶೋಗಳು ಮಾತ್ರ ದೊರೆತಿವೆ. ಹಿಂದಿ ವರ್ಷನ್‌ಗೆ ಕನ್ನಡಕ್ಕಿಂತ ಅಧಿಕ, 50+ ಶೋ ಸಿಕ್ಕಿದೆ. ಕರ್ನಾಟಕದಲ್ಲಿ ಕನ್ನಡ ವರ್ಷನ್‌ಗೆ ಜಾಸ್ತಿ ಶೋ ನೀಡಬೇಕು ಎಂಬ ಒತ್ತಾಯ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿದೆ.

ʼಆದಿಪುರುಷ್‌’ ಚಿತ್ರದ ಕರ್ನಾಟಕದ ವಿತರಣೆ ಹಕ್ಕನ್ನು ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್‌ ಗೌಡ ಪಡೆದುಕೊಂಡಿದ್ದಾರೆ. ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಅದ್ಧೂರಿ ಪ್ರೀಮಿಯರ್‌ ಶೋವನ್ನು ಹಂಚಿಕೆದಾರರು ಆಯೋಜಿಸಿದ್ದಾರೆ. ಸಿನಿಮಾ ರಿಲೀಸ್‌ಗೂ ಮುನ್ನವೇ ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ 100 ಕೋಟಿ ವ್ಯಾಪಾರ ಮಾಡಿ ಆದಿಪುರುಷ್ ದಾಖಲೆ ಮಾಡಿತ್ತು.

ಬೆಂಗಳೂರಿನ ಕಾವೇರಿ ಥೀಯೇಟರ್‌ನಲ್ಲಿ ಆದಿಪುರುಷ್ ತೆಲುಗು ವರ್ಷನ್‌ಗೆ ಇಂದು 5 ಶೋ ಸಿಕ್ಕಿದೆ. ನಾಲ್ಕು ಶೋ ತೆಲುಗು, ಒಂದು ಶೋ ಹಿಂದಿ ವರ್ಷನ್. ಹೆಚ್ಚಿನ ಕನ್ನಡಿಗರು ತೆಲುಗು ವರ್ಷನ್ ಆದಿಪುರುಷ್ ನೋಡಲು ಥಿಯೇಟರ್‌ಗೆ ಆಗಮಿಸಿದ್ದಾರೆ. ಸದ್ಯ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಿನಿಮಾ ನೋಡಲು ಆಗಮಿಸಿದ್ದಾರೆ.

Exit mobile version