Site icon Vistara News

Adipurush Movie : ಆದಿಪುರುಷ ಸಿನಿಮಾ ಬಿಡುಗಡೆಗೆ ಮೊದಲೇ 4.7 ಲಕ್ಷ ಟಿಕೆಟ್‌ ಮಾರಾಟ! ಹೊಸ ದಾಖಲೆ?

adipurush movie tickets sold out

#image_title

ಮುಂಬೈ: ಪ್ರಭಾಸ್‌ ನಟನೆಯ ಆದಿಪುರುಷ ಸಿನಿಮಾ (Adipurush Movie) ತೆರೆ ಕಾಣುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಬಿಡುಗಡೆಯಾಗಲಿರುವ ಸಿನಿಮಾಕ್ಕೆ ಈಗಾಗಲೇ ಭರದಿಂದ ಮುಂಗಡ ಬುಕ್ಕಿಂಗ್‌ ಕೆಲಸ ನಡೆಯುತ್ತಿದೆ. ವಿಶೇಷವೆಂದರೆ ಈ ಸಿನಿಮಾದ 4.7 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆಯಂತೆ!

ಹೌದು. ಸಿನಿಮಾ ವಿಮರ್ಶಕರಾಗಿರುವ ತರಣ್‌ ಆದರ್ಶ್‌ ಅವರು ನೀಡಿರುವ ಮಾಹಿತಿ ಪ್ರಕಾರ ದೇಶಾದ್ಯಂತ ಈ ಸಿನಿಮಾದ ಟಿಕೆಟ್‌ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಗುರುವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಆದಿಪುರುಷ ಸಿನಿಮಾದ ಹಿಂದಿ ಮತ್ತು ತೆಲುಗು ಎರಡೇ ಭಾಷೆಯಲ್ಲಿ ಒಟ್ಟು 4,79,811 ಟಿಕೆಟ್‌ ಮಾರಾಟವಾಗಿದೆ. ಅದರಲ್ಲೀ ಸಿನಿಪೊಲಿಸ್‌ನ ಟಿಕೆಟ್‌ಗಳ ಸಂಖ್ಯೆ ಸೇರಿಲ್ಲವಂತೆ.

ಇದನ್ನೂ ಓದಿ: Viral Video: ಕೋಚಿಂಗ್​ ಸೆಂಟರ್​ನಲ್ಲಿ ಬೆಂಕಿ; ಅವಸರದಲ್ಲಿ ಕಿಟಕಿಯಿಂದ ಹೊರಬಿದ್ದ ವಿದ್ಯಾರ್ಥಿಗಳು
ಬಿಡುಗಡೆ ದಿನವಾದ ಶುಕ್ರವಾರದ ಶೋಗೆ ಪಿವಿಆರ್‌ನಲ್ಲಿ 1,26,050, ಐನೊಕ್ಸ್‌ನಲ್ಲಿ 96,502 ಟಿಕೆಟ್‌ ಸೇರಿ ಒಟ್ಟು 2,22,552 ಟಿಕೆಟ್‌ ಬುಕ್ಕಿಂಗ್‌ ಆಗಿದೆ. ಶನಿವಾರ ಶೋಗಳಿಗೆ ಪಿವಿಆರ್‌ನಲ್ಲಿ 83,596, ಐನೊಕ್ಸ್‌ನಲ್ಲಿ 55,438 ಸೇರಿ ಒಟ್ಟು 1,39,034 ಟಿಕೆಟ್‌ ಬುಕ್ಕಿಂಗ್‌ ಆಗಿದೆ. ಹಾಗೆಯೇ ಭಾನುವಾರದ ಶೋಗೆ ಪಿವಿಆರ್‌ನಲ್ಲಿ 69,279, ಐನೊಕ್ಸ್‌ನಲ್ಲಿ 48,946 ಸೇರಿ ಒಟ್ಟು 1,18,225 ಟಿಕೆಟ್‌ಗಳು ಬುಕ್ಕಿಂಗ್‌ ಆಗಿವೆ.

ಆದಿಪುರುಷ ಸಿನಿಮಾ ಪೋಸ್ಟರ್‌


ಆದಿಪುರುಷ ಚಿತ್ರವನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ. ʼನ್ಹಾಜಿ- ದಿ ಅನ್‌ಸಂಗ್ ವಾರಿಯರ್ʼ ಸಿನಿಮಾದ ಅದ್ಭುತ ಯಶಸ್ಸಿನ ನಂತರ ಇದು ಓಂ ಅವರ ಎರಡನೇ ನಿರ್ದೇಶನದ ಚಿತ್ರವಾಗಿದೆ. ಆದಿಪುರುಷ ಸಿನಿಮಾ ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಪ್ರಭಾಸ್‌ ರಾಮನ ಪಾತ್ರದಲ್ಲಿದ್ದರೆ, ಕೃತಿ ಸೀತೆಯ ಪಾತ್ರ ಹಾಗೂ ಸೈಫ್‌ ಅಲಿ ಖಾನ್‌ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 300 ಕಿ.ಮೀ, 400 ಕಾರುಗಳ ಬೆಂಗಾವಲು; ಇದು ತೆಲುಗು ಸಿನಿಮಾ ಅಲ್ಲ, ಕಾಂಗ್ರೆಸ್‌ ಸೇರಿದ ನಾಯಕನ ದೌಲತ್ತು
ಆದಿಪುರುಷ ಸಿನಿಮಾ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು ಭಾರೀ ಮೆಚ್ಚುಗೆ ಪಡೆದುಕೊಂಡಿವೆ. ಇತ್ತೀಚೆಗೆ ಬಿಡುಗಡೆಯಾದ ರಾಮ್‌ ಸೀತಾ ರಾಮ್‌ ಹಾಡಂತೂ ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು. ಹಾಗೆಯೇ ಸಿನಿಮಾದ ಟ್ರೇಲರ್‌ ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಿನಿಮಾ ಇದೇ 16ರಂದು ತೆರೆ ಕಾಣಲಿದ್ದು, ವೀಕ್ಷಕರು ಅದನ್ನು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Exit mobile version