Site icon Vistara News

Adipurush Movie Collection: ವಾರಾಂತ್ಯದಲ್ಲಿ ವಿಶ್ವಾದ್ಯಂತ 300 ಕೋಟಿ ರೂ. ಗಳಿಕೆ ಕಂಡ ಆದಿಪುರುಷ್‌!

Adipurush Movie worldwide in first weekend

ಬೆಂಗಳೂರು: ಪ್ರಭಾಸ್‌ ನಟನೆಯ ಆದಿಪುರುಷ್‌ ಸಿನಿಮಾ ಸಾಕಷ್ಟು (Adipurush Movie Collection) ಟೀಕೆಗೆ ಗುರಿಯಾಗುತ್ತಲೇ ಇದೆ. ಓಂ ರಾವುತ್ ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ ಈ ಚಿತ್ರ ಮೊದಲ ದಿನ 140 ಕೋಟಿ ರೂಪಾಯಿ ಗಳಿಸಿತು. ಪ್ರಭಾಸ್ ಮತ್ತು ಕೃತಿ ಸನೂನ್‌ ಒಟ್ಟಿಗೆ ತೆರೆ ಹಂಚಿಕೊಂಡಿರುವ ಸಿನಿಮಾ ಜೂನ್ 16 ರಂದು ಬಿಡುಗಡೆಯಾಯಿತು ಮತ್ತು ವ್ಯಾಪಕವಾಗಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಟೀಕೆ, ಟ್ರೋಲ್‌ಗಳು ಚಿತ್ರದ ಬಾಕ್ಸ್ ಆಫೀಸ್ ಮೇಲೆ ಪರಿಣಾಮ ಬೀರಲಿಲ್ಲ. ಜೂನ್‌ 18ರ ಭಾನುವಾರ, 3 ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ 65 ಕೋಟಿ (ನೆಟ್‌) ರೂಪಾಯಿ ಆಗಿದೆ. ಈ ಮೂಲಕ ಸಿನಿಮಾದ ಗಳಿಕೆ 300 ಕೋಟಿ ರೂಪಾಯಿ ಆಗಿದೆ.

ಇದಕ್ಕೂ ಮೊದಲು, ಅದರ ತಯಾರಕರು ಜೂನ್‌ 18ರ ಮಧ್ಯಾಹ್ನ ಅದರ ಬಾಕ್ಸ್ ಆಫೀಸ್ ಅಂಕಿ-ಅಂಶಗಳನ್ನು ಟ್ವೀಟ್ ಮಾಡಿದ್ದರು. “ಆದಿಪುರುಷ್ ವಿಶ್ವಾದ್ಯಂತ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವುದನ್ನು ಮುಂದುವರಿಸಿದೆ, ಮೊದಲ ದಿನದಂದು 140 ಕೋಟಿ ರೂ. ಆಗಿದ್ದು, ನಿರೀಕ್ಷೆಗಳನ್ನು ಮೀರಿಸಿದೆ. 2 ನೇ ದಿನದಂದು 100 ಕೋಟಿ ರೂ. ಕೇವಲ ಎರಡು ದಿನಗಳಲ್ಲಿ 240 ಕೋಟಿ ರೂ. ಕಲೆಕ್ಷನ್‌ ಆಗಿದೆ. ಜೈ ಶ್ರೀ ರಾಮ್” ಎಂದು ಟಿ ಸಿರೀಸ್‌ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ಇದನ್ನೂ ಓದಿ: Adipurush Movie: ಸೀತೆ ಭಾರತದವಳಲ್ಲ, ನೇಪಾಳದ ಕ್ಯಾತೆ; ಇದು ಆದಿಪುರುಷ್​ ಎಫೆಕ್ಟ್​!

ಭಾರತದ ಹಲವು ಭಾಗಗಳಲ್ಲಿ ಆಕ್ರೋಶಕ್ಕೆ ಕಾರಣವಾದ ಕೆಲವು ಡೈಲಾಗ್‌ಗಳನ್ನು ತೆಗೆದುಹಾಕುವುದಾಗಿ ಚಿತ್ರತಂಡ ಘೋಷಿಸಿದೆ. ಮಹಾಕಾವ್ಯ ರಾಮಾಯಣಕ್ಕೆ ಅಗೌರವ ತೋರಿದ್ದಕ್ಕಾಗಿ ಹಲವರು ಸಿನಿಮಾ ಬಗ್ಗೆ ಆಕ್ರೋಶ ಹೊರ ಹಾಕಿದ್ದರು.

ಆದಿಪುರುಷ ತನ್ನ ವಿಷ್ಯುವಲ್‌ ಎಫೆಕ್ಟ್‌ಗಳಿಗಾಗಿ ಟೀಕೆಗಳನ್ನು ಎದುರಿಸಿದೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾದ ನಂತರ ಟ್ರೋಲ್‌ಗೆ ಗುರಿಯಾಯಿತು. ಬಳಿಕ ಚಿತ್ರತಂಡವು ಕೆಲವು ತಿಂಗಳುಗಳ ಕಾಲ ಚಿತ್ರವನ್ನು ಮುಂದೂಡಬೇಕಾಯಿತು.

ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೂನ್‌ ಜಾನಕಿಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಆದಿಪುರುಷ್‌ ಚಿತ್ರವನ್ನು 700 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರ ಇದೆಂದು ಹೇಳಲಾಗಿದೆ.

Exit mobile version