Site icon Vistara News

Adipurush Movie : ಉಚಿತವಾಗಿ ಸಿಗುತ್ತಿದೆ ‘ಆದಿಪುರುಷ್‌’ ಸಿನಿಮಾದ ಟಿಕೆಟ್‌! ಪಡೆಯುವುದು ಹೇಗೆ?

Adipurush Movie

#image_title

ಮುಂಬೈ: ನಟ ಪ್ರಭಾಸ್‌ ಅವರ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್‌(Adipurush Movie). ರಾಮಾಯಣದ ರಾಮನ ಕಥೆಯನ್ನು ಆಧರಿಸಿ ಮಾಡಿರುವ ಈ ಸಿನಿಮಾದ ಹಾಡುಗಳು ಹಾಗೂ ಟ್ರೇಲರ್‌ ಈಗಾಗಲೇ ಸಾಕಷ್ಟು ಜನರ ಮೆಚ್ಚುಗೆ ಪಡೆದುಕೊಂಡಿವೆ. ಸಿನಿಮಾ ಬಿಡುಗಡೆಗೂ ದಿನಗಣನೆ ಆರಂಭವಾಗಿದೆ. ಹೀಗಿರುವಾಗ ಸಿನಿಮಾದ ಟಿಕೆಟ್‌ ಅನ್ನು ದಾನ ಮಾಡುವುದಕ್ಕೆ ಒಬ್ಬ ಗಣ್ಯರು ಮುಂದಾಗಿದ್ದಾರೆ.

ಹೌದು. ಕಾರ್ತಿಕೇಯ 2 ಸಿನಿಮಾದ ನಿರ್ಮಾಪಕರಾಗಿರುವ ಅಭಿಷೇಕ್‌ ಅಗರ್ವಾಲ್‌ ಅವರು ಆದಿಪುರುಷ್‌ ಸಿನಿಮಾದ ಟಿಕೆಟ್‌ಗಳನ್ನು ದಾನ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ 10,000 ಟಿಕೆಟ್‌ಗಳನ್ನು ದಾನ ಮಾಡುವುದಾಗಿ ಅವರು ಹೇಳಿದ್ದಾರೆ. ಈ ಕುರಿತಾಗಿ ಟ್ವೀಟ್‌ ಮಾಡಿರುವ ಅವರು, “ಆದಿಪುರುಷ ಸಿನಿಮಾ ಎಲ್ಲರೂ ತಮ್ಮ ಜೀವಮಾನದಲ್ಲಿ ನೋಡಬೇಕಾದ ಸಿನಿಮಾ. ಎಲ್ಲರೂ ಈ ಸಿನಿಮಾವನ್ನು ಆಚರಿಸಬೇಕು. ಭಗವಾನ್‌ ಶ್ರೀ ರಾಮನ ಮೇಲೆ ನನ್ನ ಭಕ್ತಿಯಿರುವ ಹಿನ್ನೆಲೆ ತೆಲಂಗಾಣದಾದ್ಯಂತ ಟಿಕೆಟ್‌ ದಾನ ಮಾಡುತ್ತಿದ್ದೇನೆ. ರಾಜ್ಯದ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮದಲ್ಲಿರುವವರಿಗೆ ಟಿಕೆಟ್‌ ದಾನ ಮಾಡಲಿದ್ದೇನೆ” ಎಂದು ಹೇಳಿದ್ದಾರೆ. ಹಾಗೆಯೇ ಈ ಉಚಿತ ಟಿಕೆಟ್‌ ಬಯಸುವ ಅರ್ಹರು ಗೂಗಲ್‌ ಫಾರ್ಮ್‌ ಭರ್ತಿ ಮಾಡಿ ಎಂದು ಗೂಗಲ್‌ ಫಾರ್ಮ್‌ ಒಂದನ್ನು ಕೊಟ್ಟಿದ್ದಾರೆ.


ಓಂ ರಾವುತ್ ನಿರ್ದೇಶಿಸಿರುವ ಆದಿಪುರುಷ ರಾಮಾಯಣದ ಪೌರಾಣಿಕ ಕಥೆಯ ರೂಪಾಂತರವಾಗಿದೆ. ರಾಮನ ಪಾತ್ರದಲ್ಲಿ ಪ್ರಭಾಸ್, ಸೀತೆ ಪಾತ್ರವನ್ನು ಕೃತಿ ಸನೊನ್‌ ಮತ್ತು ರಾವಣನ ಮಾತ್ರದಲ್ಲಿ ಸೈಫ್ ಅಲಿ ಖಾನ್‌ ನಟಿಸಿದ್ದಾರೆ. ಇತ್ತೀಚೆಗೆ, ಚಿತ್ರದ ಎರಡನೇ ಟ್ರೇಲರ್ ಅನ್ನು ತಿರುಪತಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: Adipurush Movie: ಆದಿಪುರುಷ್ ಸಿನ್ಮಾನ ಹನುಮಂತ ಬಂದು ನೋಡುತ್ತಾನಂತೆ! ಅವನಿಗಾಗಿ ಥಿಯೇಟರ್‌ನಲ್ಲಿ 1 ಸೀಟ್ ಖಾಲಿ
ಆದಿಪುರುಷ ಸಿನಿಮಾವನ್ನು ಕಳೆದ ವರ್ಷ ಆಗಸ್ಟ್ 11ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೆಲ ಕಾರಣಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಈ ವರ್ಷದ ಜನವರಿ 12ಕ್ಕೆ ಮುಂದೂಡಲಾಯಿತು. ಆಗಲೂ ಬಿಡುಗಡೆ ಸಾಧ್ಯವಾಗದ ಹಿನ್ನೆಲೆ ಈ ಜೂನ್‌ 16ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.

Exit mobile version