ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ಅಭಿನಯದ ʻಆದಿಪುರುಷ್ʼ (Adipurush Movie) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನೆಗೆಟಿವ್ ವಿಮರ್ಶೆಗಳನ್ನು ಪಡೆಯುತ್ತಲೇ ಇದೆ. ಇದೇ ಟ್ರೆಂಡ್ ಮುಂದುವರಿದರೆ, ಈ ವಾರದ ಅಂತ್ಯದ ವೇಳೆಗೆ ಬಹುತೇಕ ಥಿಯೇಟರ್‌ಗಳಿಂದ ಚಿತ್ರವನ್ನು ತೆಗೆದುಹಾಕಬಹುದು ಎಂದು ವರದಿಯಾಗಿದೆ. ಮೂರನೇ ವಾರದಲ್ಲಿದೆ 300 ಕೋಟಿ ರೂ.-ಕ್ಲಬ್‌ಗೆ ಪ್ರವೇಶಿಸಲು ಇನ್ನೂ ಹೆಣಗಾಡುತ್ತಿದೆ. ಕೇವಲ 17 ದಿನಕ್ಕೆ ತನ್ನ ಆಟ ಮುಗಿಸಲಿದೆ ಎಂದು ಹೇಳಲಾಗುತ್ತಿದೆ.
ಆದಿಪುರುಷ್ ಜೂನ್ 16ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ 3D ಚಲನಚಿತ್ರವಾಗಿದೆ. 500 ಕೋಟಿ ರೂ. ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರ ಎಂದು ಆದಿಪುರುಷ್‌ವನ್ನು ಬಿಂಬಿಸಲಾಯಿತು. ಜುಲೈ 2ರಂದು ಈ ಚಿತ್ರ ಭಾರತದಲ್ಲಿ ಸುಮಾರು 1 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದೆ. ಒಟ್ಟಿ 17 ದಿನಗಳಲ್ಲಿ 284-285 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ.
ಆದಿಪುರುಷ್ ತನ್ನ ವಿಷ್ಯುವಲ್ ಎಫೆಕ್ಟ್‌ಗಳಿಗಾಗಿ ಟೀಕೆಗಳನ್ನು ಎದುರಿಸಿದೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾದ ನಂತರ ಟ್ರೋಲ್‌ಗೆ ಗುರಿಯಾಯಿತು. ಬಳಿಕ ಚಿತ್ರತಂಡವು ಕೆಲವು ತಿಂಗಳುಗಳ ಕಾಲ ಚಿತ್ರವನ್ನು ಮುಂದೂಡಬೇಕಾಯಿತು.
ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೂನ್ ಜಾನಕಿಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Adipurush Movie: ಕಟ್ಟಪ್ಪ ಬಾಹುಬಲಿ ಕೊಂದಿದ್ದು ಯಾಕೆ ಅಂತ ಗೊತ್ತಾಯ್ತು; ಸೆಹ್ವಾಗ್ ಟ್ವೀಟ್ ವೈರಲ್!
Adipurush: Movie sad😒😒https://t.co/X8x0N39Cgh#Adipurush pic.twitter.com/nyh1jQ5QU3
— Mrindian Boi (@mrindianboi) July 3, 2023
ಓಂ ರಾವುತ್ ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ ಈ ಚಿತ್ರ ಮೊದಲ ದಿನ 140 ಕೋಟಿ ರೂಪಾಯಿ ಗಳಿಸಿತು. ಪ್ರಭಾಸ್ ಮತ್ತು ಕೃತಿ ಸನೂನ್ ಒಟ್ಟಿಗೆ ತೆರೆ ಹಂಚಿಕೊಂಡಿರುವ ಸಿನಿಮಾ ಜೂನ್ 16 ರಂದು ಬಿಡುಗಡೆಯಾಯಿತು ಮತ್ತು ವ್ಯಾಪಕವಾಗಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಟೀಕೆ, ಟ್ರೋಲ್‌ಗಳು ಚಿತ್ರದ ಬಾಕ್ಸ್ ಆಫೀಸ್ ಮೇಲೆ ಪರಿಣಾಮ ಬೀರಲಿಲ್ಲ.