Site icon Vistara News

Adipurush Movie : ಆದಿಪುರುಷನಿಗೆ ಸಿಕ್ಕ ಸರ್ಟಿಫಿಕೇಟ್‌ ಯಾವುದು? ಎಷ್ಟೊಂದು ತಾಸು ಇರಲಿದೆ ಗೊತ್ತಾ ಈ ಸಿನಿಮಾ?

adipurush movie got u certificate

#image_title

ಮುಂಬೈ: ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್‌ (Adipurush Movie) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅದರ ಬೆನ್ನಲ್ಲೇ ಸಿನಿಮಾವನ್ನು ಸೆನ್ಸಾರ್‌ ಮಂಡಳಿ ವೀಕ್ಷಣೆ ಮಾಡಿ ಸರ್ಟಿಫಿಕೇಟ್‌ ಕೊಟ್ಟಿದೆ. ಹಾಗಾದರೆ ಈ ಸಿನಿಮಾಕ್ಕೆ ಸಿಕ್ಕ ಸರ್ಟಿಫಿಕೇಟ್‌ ಯಾವುದು? ಸಿನಿಮಾ ಒಟ್ಟಾಗಿ ಎಷ್ಟು ಸಮಯ ಇರಲಿದೆ ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಭಾರತದ ಸಿನಿಮಾ ವಿಶ್ಲೇಷಕರಾಗಿರುವ ತರಣ್‌ ಆದರ್ಶ್‌ ಅವರು ಆದಿಪುರುಷ್‌ ಸಿನಿಮಾಕ್ಕೆ ಸಿಕ್ಕ ಸರ್ಟಿಫಿಕೇಟ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸೆನ್ಸಾರ್‌ ಮಂಡಳಿ ಪೂರ್ತಿ ಸಿನಿಮಾ ವೀಕ್ಷಣೆ ಮಾಡಿ ʼU’ ಸರ್ಟಿಫಿಕೇಟ್‌ ಅನ್ನು ಕೊಟ್ಟಿದೆ. ಅಂದರೆ ಭಾರತದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಈ ಸಿನಿಮಾ ನೋಡುವುದಕ್ಕೆ ಅವಕಾಶವಿರಲಿದೆ. ಅದಷ್ಟೇ ಅಲ್ಲದೆ ಸಿನಿಮಾ ನೋಡಿರುವ ಮಂಡಳಿ ಸಿನಿಮಾದ ಒಂದೇ ಒಂದು ಸೀನ್‌ ಅನ್ನೂ ಕತ್ತರಿಸುವುದಕ್ಕೆ ಸೂಚನೆ ನೀಡಿಲ್ಲವಂತೆ.

ಇದನ್ನೂ ಓದಿ: Adipurush Movie : ಉಚಿತವಾಗಿ ಸಿಗುತ್ತಿದೆ ‘ಆದಿಪುರುಷ್‌’ ಸಿನಿಮಾದ ಟಿಕೆಟ್‌! ಪಡೆಯುವುದು ಹೇಗೆ?

ಸಿನಿಮಾದ ಯಾವ ಸೀನ್‌ಗೂ ಕತ್ತರಿ ಬೀಳುತ್ತಿಲ್ಲವಾದ್ದರಿಂದ ಸಿನಿಮಾದ ಸಮಯ ಕೂಡ ಹೆಚ್ಚೇ ಇರಲಿದೆ. ಒಟ್ಟಾಗಿ ಈ ಸಿನಿಮಾದ ಸಮಯ 179 ನಿಮಿಷ ಇರಲಿದೆ. ಅಂದರೆ 2 ಗಂಟೆ 59 ನಿಮಿಷ. ಈ ಬಗ್ಗೆಯೂ ತರಣ್‌ ಆದರ್ಶ್‌ ಅವರು ಟ್ವೀಟ್‌ನಲ್ಲಿ ಮಾಹಿತಿ ಕೊಟ್ಟಿದ್ದಾರೆ.

ಓಂ ರಾವುತ್ ನಿರ್ದೇಶಿಸಿರುವ ಆದಿಪುರುಷ ರಾಮಾಯಣದ ಪೌರಾಣಿಕ ಕಥೆಯ ರೂಪಾಂತರವಾಗಿದೆ. ರಾಮನ ಪಾತ್ರದಲ್ಲಿ ಪ್ರಭಾಸ್, ಸೀತೆ ಪಾತ್ರವನ್ನು ಕೃತಿ ಸನೊನ್‌ ಮತ್ತು ರಾವಣನ ಮಾತ್ರದಲ್ಲಿ ಸೈಫ್ ಅಲಿ ಖಾನ್‌ ನಟಿಸಿದ್ದಾರೆ. ಇತ್ತೀಚೆಗೆ, ಚಿತ್ರದ ಎರಡನೇ ಟ್ರೇಲರ್ ಅನ್ನು ತಿರುಪತಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. 300 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿರುವ ಈ ಸಿನಿಮಾ ಇದೇ ತಿಂಗಳ 16ರಂದು ತೆರೆ ಕಾಣಲಿದೆ.

Exit mobile version