Site icon Vistara News

Adipurush Movie: ಆದಿಪುರುಷ್‌ ಶೋನಲ್ಲಿ ಹನುಮಂತನಿಗೆ ಸಪರೇಟ್‌ ಸೀಟ್‌; ಕೇಸರಿ ಶಾಲುಗಳಿಂದ ಭರ್ಜರಿ ಅಲಂಕಾರ!

Lord Hanuman idol, placed on Adipurush screenings

ಬೆಂಗಳೂರು: ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾ (Adipurush Movie) ಜೂನ್‌ 16ರಂದು ತೆರೆ ಕಂಡಿದೆ. ಹಲವು ಬಾರಿ ಪೋಸ್ಟ್‌ಪೋನ್‌ ಹಾಗೂ ವಿವಾದಗಳ ಬಳಿಕ ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬೆಳಗಿನ ಜಾವ 4 ಗಂಟೆಯ ಪ್ರದರ್ಶನಗಳು ಶುರುವಾಗಿವೆ. ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ನಟಿಸಿದ್ದಾರೆ. ಈ ಹಿಂದೆ, ಚಿತ್ರದ ನಿರ್ದೇಶಕ ಓಂ ರಾವುತ್, ಆದಿಪುರುಷ್‌ ಸಿನಿಮಾದ ಪ್ರತಿ ಥಿಯೇಟರ್‌ನಲ್ಲಿ ಒಂದು ಆಸನವನ್ನು ಭಗವಾನ್ ಹನುಮಂತನಿಗೆ ಮೀಸಲಿಡುವಂತೆ ವಿತರಕರನ್ನು ಒತ್ತಾಯಿಸಿದ್ದರು. ಇದೀಗ ಹನುಮಂತ ದೇವರಿಗೆ ಒಂದು ಆಸನವನ್ನು ಮೀಸಲಿಟ್ಟಿರುವ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗುತ್ತಿವೆ.

ಚಿತ್ರಮಂದಿರಗಳಲ್ಲಿ ಹನುಮಂತನಿಗಾಗಿ ಮೀಸಲಿಟ್ಟಿರು ಆಸನವನ್ನು ಹೂವಿನಿಂದ ಅಲಂಕರಿಸಲಾಗಿದೆ. ‘ಆದಿಪುರುಷ’ ತಂಡವು ಪ್ರೇಕ್ಷಕರ ನಂಬಿಕೆ ಮತ್ತು ನಂಬಿಕೆಯನ್ನು ಗೌರವಿಸಲು ಪ್ರತಿ ಚಿತ್ರಮಂದಿರದಲ್ಲಿ ಹನುಮಂತನಿಗಾಗಿ ಒಂದು ಸೀಟನ್ನು ಮೀಸಲಿಡುವುದಾಗಿ ಈ ಹಿಂದೆ ಹೇಳಿಕೊಂಡಿತ್ತು. ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್‌ ಮಾಡುವ ಎಲ್ಲ ಅವಕಾಶಗಳನ್ನು ಆದಿಪುರುಷ ಹೊಂದಿದೆ. ಭಾರೀ ನಿರೀಕ್ಷೆಗಳ ನಡುವೆ ಜೂನ್ 16 ರಂದು ಚಿತ್ರ ಥಿಯೇಟರ್‌ಗಳಲ್ಲಿ ಬಂದಿದೆ.

ಇದೀಗ, ಹನುಮಂತ ದೇವರಿಗೆ ಸಮರ್ಪಿತವಾದ ಆಸನಗಳ ಫೋಟೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಬರೋಡಾದ ಥಿಯೇಟರ್‌ವೊಂದರಲ್ಲಿ ಭಗವಾನ್ ಹನುಮಾನ್‌ಗಾಗಿ ಸೀಟ್‌ ಬಿಟ್ಟಿರುವ ಫೋಟೊ ವೈರಲ್‌ ಆಗಿದೆ. ಗೌರವಾರ್ಥವಾಗಿ ಹೂವುಗಳಿಂದ ಅಲಂಕರಿಸಲ್ಪಟ್ಟಿದೆ. ಕೆಲವರು ಹೂಮಾಲೆ, ಕೇಸರಿ ಶಾಲು ಫೋಟೊಗೆ ಹೊದಿಸಿದ್ದಾರೆ.

ನಿರ್ದೇಶಕ ಓಂ ರಾವುತ್ ಜೂನ್ 9 ರಂದು ತಿರುಪತಿಯಲ್ಲಿ ನಡೆದ ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ತುಂಬಾ ಭಾವುಕರಾಗಿ ಕಣ್ಣೀರು ಹಾಕಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಓಂ ರಾವುತ್, ಪ್ರತಿ ಥಿಯೇಟರ್‌ನಲ್ಲಿ ಒಂದು ಆಸನವನ್ನು ಹನುಮಂತ ದೇವರಿಗೆ ಆದಿಪುರುಷನಿಗೆ ಮೀಸಲಿಡುವಂತೆ ನಿರ್ಮಾಪಕರು ಮತ್ತು ವಿತರಕರನ್ನು ಒತ್ತಾಯಿಸಿದರು. ʻʻಎಲ್ಲೆಲ್ಲಿ ರಾಮಾಯಣ ಪಾರಾಯಣ ನಡೆದರೂ ಹನುಮಂತನು ಕಾಣಿಸಿಕೊಳ್ಳುತ್ತಾನೆ ಎಂಬುದು ನಮ್ಮ ನಂಬಿಕೆ. ಈ ನಂಬಿಕೆಯನ್ನು ಗೌರವಿಸಿ ಪ್ರತಿ ಥಿಯೇಟರ್‌ನಲ್ಲಿ ಹನುಮಂತನಿಗೆ ಒಂದೊಂದು ಸೀಟು ಮೀಸಲಿಡಲಾಗುತ್ತದೆ. ಹನುಮಂತನಿಗೆ ನಮನ ಸಲ್ಲಿಸಿದ ಇತಿಹಾಸವನ್ನು ಕೇಳಿ. ನಾವು ಈ ಮಹತ್ಕಾರ್ಯವನ್ನು ಅಜ್ಞಾತ ರೀತಿಯಲ್ಲಿ ಪ್ರಾರಂಭಿಸಿದ್ದೇವೆ. ಭಗವಾನ್ ಹನುಮಂತನ ಸನ್ನಿಧಿಯಲ್ಲಿ ಅತ್ಯಂತ ವೈಭವದಿಂದ ನಿರ್ಮಿಸಲಾದ ಆದಿಪುರುಷ ಸಿನಿಮಾವನ್ನು ನಾವೆಲ್ಲರೂ ನೋಡಬೇಕುʼʼಎಂದು ಹೇಳಿದ್ದರು.

ಇದನ್ನೂ ಓದಿ: Adipurush Movie: ಬ್ಲಾಕ್‌ ಬಸ್ಟರ್‌ ಸಿನಿಮಾ ಇದು; ವದಂತಿಗಳನ್ನು ನಂಬಬೇಡಿ ಎಂದ ನೆಟ್ಟಿಗರು!

ಈ ಬಗ್ಗೆ ಚಿತ್ರತಂಡ ಪೋಸ್ಟ್‌ ಶೇರ್‌ ಮಾಡಿದ್ದೇನು?

“ಹನುಮಂತನಿಗಾಗಿ ಪ್ರತಿ ಚಿತ್ರಮಂದಿರದಲ್ಲಿ ಒಂದು ಆಸನವನ್ನು ಮೀಸಲಿಡುತ್ತಿದ್ದೇವೆ. ಜೈ ಶ್ರೀ ರಾಮ್. ಆದಿಪುರುಷ್ ಜೂನ್ 16ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ. ರಾಮಾಯಣವನ್ನು ಪಠಿಸುವಲ್ಲೆಲ್ಲಾ ಭಗವಾನ್ ಹನುಮಂತನು ಕಾಣಿಸಿಕೊಳ್ಳುತ್ತಾನೆ. ಇದು ನಮ್ಮ ನಂಬಿಕೆ. ಈ ನಂಬಿಕೆಯನ್ನು ಗೌರವಿಸಿ, ಪ್ರಭಾಸ್ ಅವರ ನಟನೆಯ ಆದಿಪುರುಷ ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್‌ಗಳಲ್ಲಿ ಒಂದು ಸೀಟನ್ನು ರಿಸರ್ವ್‌ ಮಾಡಲಾಗುತ್ತಿದೆ. ಅದು ಕೂಡ ಭಗವಂತ ಹನುಮಂತನಿಗಾಗಿ. ರಾಮನ ಶ್ರೇಷ್ಠ ಭಕ್ತನಿಗೆ ಗೌರವ ಸಲ್ಲಿಸಿದ ಇತಿಹಾಸವನ್ನು ಕೇಳಿ. ಅಜ್ಞಾತ ರೀತಿಯಲ್ಲಿ ಈ ಮಹತ್ಕಾರ್ಯವನ್ನು ಆರಂಭಿಸಿದ್ದೇವೆ. ಭಗವಾನ್ ಹನುಮಂತನ ಸನ್ನಿಧಿಯಲ್ಲಿ ಅತ್ಯಂತ ವೈಭವ ಮತ್ತು ವೈಭವದಿಂದ ನಿರ್ಮಿಸಲಾದ ಆದಿಪುರುಷನನ್ನು ನಾವೆಲ್ಲರೂ ನೋಡಬೇಕು” ಎಂದು ಟ್ವೀಟ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿತ್ತು ಚಿತ್ರತಂಡ.

ಆದಿಪುರುಷ’ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ನಾಟಕವಾಗಿದೆ. ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೂನ್‌ ಸೀತೆಯಾಗಿ ಮತ್ತು ಸನ್ನಿ ಸಿಂಗ್ ಲಕ್ಷ್ಮಣನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.

Exit mobile version