ಬೆಂಗಳೂರು: ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ (Adipurush Movie) ಇನ್ನೂ ಎರಡು ತಿಂಗಳೊಳಗೆ ಬಿಡುಗಡೆಯಾಗುತ್ತದೆ. ಅವರ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಆಗಾಗ ಹೊಸ ಅಪ್‌ಡೇಟ್ ನೀಡುತ್ತಿರುವ ಚಿತ್ರತಂಡ ಅಕ್ಷಯ ತೃತೀಯ ಶುಭ ಸಂದರ್ಭದಲ್ಲಿ, ಹೊಸ ಪೋಸ್ಟರ್ ಜತೆ ಜೈ ಶ್ರೀರಾಮ್ ಲಿರಿಕಲ್ ಮೋಷನ್ ಪೋಸ್ಟರ್ ಶೇರ್ ಮಾಡಿಕೊಂಡಿದೆ. ಐದು ವಿಭಿನ್ನ ಭಾಷೆಗಳಲ್ಲಿನ ಜೈ ಶ್ರೀ ರಾಮ್ ಹಾಡಿನ 60 ಸೆಕೆಂಡ್‌ಗಳ ಆಡಿಯೊ ಕ್ಲಿಪ್ ಹಂಚಿಕೊಂಡಿದೆ. ಇದನ್ನು ಅಜಯ್-ಅತುಲ್ ಸಂಯೋಜಿಸಿರುವುದು ವಿಶೇಷ.
ಅಕ್ಷಯ ತೃತೀಯ ಸಂದರ್ಭದಲ್ಲಿ, ಆದಿಪುರುಷ ತಂಡವು ಪ್ರಭಾಸ್ ಅವರ ಹೊಸ ಪೋಸ್ಟರ್ ಹಂಚಿಕೊಂಡಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ – 5 ವಿಭಿನ್ನ ಭಾಷೆಗಳಲ್ಲಿ ಜೈ ಶ್ರೀ ರಾಮ್ ಪ್ರತಿಧ್ವನಿಸುವ ಸಾಹಿತ್ಯದ ಆಡಿಯೊ ಕ್ಲಿಪ್ ಜತೆ ಮೋಷನ್ ಪೋಸ್ಟರ್ ಹಂಚಿಕೊಂಡಿದೆ. ಅಜಯ್-ಅತುಲ್ ಸಂಯೋಜಿಸಿದ್ದಾರೆ. ರಾಘವ್ ಪಾತ್ರದಲ್ಲಿ ಪ್ರಭಾಸ್ ಅವರ ಹೊಸ ಪೋಸ್ಟರ್ ಅದ್ಭುತವಾಗಿದೆ.
ಮೂರು ಗಂಟೆ ಮೀರಲಿದೆ ಸಿನಿಮಾ
ಈ ಚಿತ್ರದ ಅವಧಿ ಬರೋಬ್ಬರಿ 174 ನಿಮಿಷ ಇದೆ. ಅಂದರೆ 3 ಗಂಟೆಗೆ ಕೇವಲ 6 ನಿಮಿಷ ಮಾತ್ರ ಬಾಕಿ. ಇಂಟರ್ವಲ್ ಸಮಯವನ್ನೂ ಸೇರಿದರೆ ಮೂರು ಗಂಟೆ ಮೀರಲಿದೆ. ಜೂನ್ 16ರಂದು ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ವಿದೇಶದ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ನ್ಯೂಯಾರ್ಕ್ನಲ್ಲಿ ಜೂನ್ 7ರಿಂದ ಜೂನ್ 18ರವರೆಗೆ ‘ತ್ರಿಬ್ಯಾಕಾ ಫಿಲ್ಮ್ ಫೆಸ್ಟಿವಲ್’ (Tribeca Film Festival ) ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲು ‘ಆದಿಪುರುಷ್’ ಸಿನಿಮಾ ಆಯ್ಕೆ ಆಗಿದೆ.
ಪ್ರಭಾಸ್ ಈ ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ‘ಆದಿಪುರುಷ್’ ನಂತರ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಬಿಡುಗಡೆಯಾಗಲಿದೆ. ಸಂಕ್ರಾಂತಿಗೆ ‘ಪ್ರಾಜೆಕ್ಟ್ K’ ಸಿನಿಮಾ ತೆರೆಗೆ ಬರುತ್ತಿದೆ.
ಜೂನ್ 16ರಂದು ತೆರೆಗೆ
ಸಿನಿಮಾವನ್ನು ಚಿತ್ರವನ್ನು ʻತಾನ್ಹಾಜಿ ದಿ ಅನ್‌ಸಂಗ್ ವಾರಿಯರ್ʼ (Tanhaji The Unsung Warrior) ಖ್ಯಾತಿಯ ಓಂ ರಾವುತ್ ನಿರ್ದೇಶಿಸುತ್ತಿದ್ದಾರೆ. ರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ, ಜಾನಕಿಯಾಗಿ ಕೃತಿ ಸನೂನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮತ್ತು ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ನಟ ದೇವದತ್ತ ನಾಗೆ ಹನುಮಾನ್ ಆಗಿ ಕಾಣಿಸಿಕೊಂಡಿದ್ದಾರೆ. ರಾಮನವಮಿಯಂದು ಬಿಡುಗಡೆಯಾದ ಪೋಸ್ಟರ್‌ನಲ್ಲಿ ಪ್ರಭಾಸ್ ಮತ್ತು ಸನ್ನಿ ಬಿಲ್ಲು ಮತ್ತು ಬಾಣಗಳನ್ನು ಹಿಡಿದು, ರಕ್ಷಾಕವಚವನ್ನು ಧರಿಸಿದ್ದರು. ಕೃತಿ ಸರಳವಾದ ಸೀರೆಯಲ್ಲಿ ಕಾಣಿಸಿಕೊಂಡರೆ, ದೇವದತ್ತ ಅವರು ನಮಸ್ಕರಿಸುತ್ತಿರುವ ಭಂಗಿಯಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: Adipurush Movie: 3 ಗಂಟೆ ಸಿನಿಮಾ ಆದಿಪುರುಷ್: ವಿದೇಶದಲ್ಲಿ 3 ದಿನ ಮೊದಲೇ ಬಿಡುಗಡೆ!
ಪ್ರಭಾಸ್, ಕೃತಿ ಸನೂನ್ ಮತ್ತು ಸನ್ನಿ ಹೊರತುಪಡಿಸಿ, ಚಿತ್ರದಲ್ಲಿ ಸೈಫ್ ಅಲಿ ಖಾನ್ ಸೇರಿದಂತೆ ಇತರರು ನಟಿಸಿದ್ದಾರೆ. ಇದು ಹಿಂದು ಮಹಾಕಾವ್ಯ ರಾಮಾಯಣ ರೂಪಾಂತರವಾಗಿದೆ. ಆದಿಪುರುಷವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಓಂ, ಪ್ರಸಾದ್ ಸುತಾರ್ ಮತ್ತು ರೆಟ್ರೋಫೈಲ್ಸ್‌ನ ರಾಜೇಶ್ ನಾಯರ್ ನಿರ್ಮಿಸಿದ್ದಾರೆ.
ಈ ವರ್ಷ ಜನವರಿಯಲ್ಲಿ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕಳಪೆ ಗುಣಮಟ್ಟದ VFX ಮೇಲೆ ಸಾಕಷ್ಟು ಟ್ರೋಲಿಂಗ್ ಆದ ಬಳಿಕ ಬಿಡುಗಡೆ ದಿನಾಂಕವನ್ನು ಮತ್ತಷ್ಟು ಮುಂದಕ್ಕೆ ಹಾಕಲಾಯಿತು. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಜೂನ್ 16ರಂದು ತೆರೆಗೆ ಬರಲಿದೆ.