ಬೆಂಗಳೂರು: ಪ್ರಭಾಸ್ ನಟನೆಯ ʻಆದಿಪುರುಷ’ (Adipurush Movie) ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದಿನದಿಂದಲೂ ಡೈಲಾಗ್ ರೈಟರ್ ಮನೋಜ್ ಮುಂತಶಿರ್ ಹಿನ್ನೆಡೆ ಎದುರಿಸುತ್ತಿದ್ದಾರೆ. ಕಳಪೆ ವಿಎಫ್‌ಎಕ್ಸ್‌ಗಿಂತ ಹೆಚ್ಚಿನ ಪ್ರೇಕ್ಷಕರು ಡೈಲಾಗ್‌ಗಳಿಗೆ ಆಕ್ರೋಶ ಹೊರ ಹಾಕಿದ್ದರು. ಅದರಲ್ಲೂ ಆಂಜನೇಯ ಸಂಭಾಷಣೆಗಳು ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಇದೀಗ ಮನೋಜ್ ಮುಂತಶಿರ್ ಸೋಷಿಯಲ್ ಮೀಡಿಯಾ ಮೂಲಕ ಪ್ರೇಕ್ಷಕರಿಗೆ ಕ್ಷಮೆಯಾಚಿಸಿದ್ದಾರೆ.
ಆದಿಪುರುಷ್ ಸಿನಿಮಾ ರಿಲೀಸ್ ಆದಾಗ ಒಂದು ವರ್ಗದ ಪ್ರೇಕ್ಷಕರು ಚಿತ್ರದ ಸಂಭಾಷಣೆಗಳನ್ನು ಕಟ್ಟುನಿಟ್ಟಾಗಿ ವಿರೋಧಿಸಿದರು. ಬಳಿಕ ಬದಾವಣೆಯನ್ನು ಚಿತ್ರತಂಡ ತಂದಿತು. ಹಲವಾರು ಟೀಕೆ ಎದುರಿಸಿದ ಬಳಿಕ ಮನೋಜ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. “ಆದಿಪುರುಷ್ ಸಿನಿಮಾದಿಂದ ಜನರ ಭಾವನೆಗಳಿಗೆ ನೋವುಂಟಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಕೈ ಮುಗಿದು, ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಬಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ. ನಮ್ಮ ಪವಿತ್ರ ಸನಾತನ ಮತ್ತು ನಮ್ಮ ಮಹಾನ್ ರಾಷ್ಟ್ರದ ಸೇವೆಯನ್ನು ಮಾಡಲು ನಮಗೆ ಶಕ್ತಿಯನ್ನು ನೀಡಲಿ” ಎಂದು ಟ್ವೀಟ್ ಮಾಡಿದ್ದಾರೆ.
ಆಜ್‌ತಕ್‌ಗೆ ನೀಡಿದ ಸಂದರ್ಶನದಲ್ಲಿ, ಮನೋಜ್ ಮುಂತಶಿರ್ ‘ಆದಿಪುರುಷ’ ಚಿತ್ರದ ಸಂಭಾಷಣೆಗಳನ್ನು ಸಮರ್ಥಿಸಲು ಪ್ರಯತ್ನಿಸಿದ್ದರು. ಅದೇ ರೀತಿ, ಭಜರಂಗಬಲಿ ಅಥವಾ ಭಗವಾನ್ ಹನುಮಂತನು ‘ದೇವರಲ್ಲ’ ಆದರೆ ಭಗವಾನ್ ರಾಮನ ಮೇಲಿನ ಅವನ ‘ಭಕ್ತಿ’ಯ ಶಕ್ತಿಯಿಂದಾಗಿ ಒಬ್ಬನಾಗಿ ಪರಿಗಣಿಸಲ್ಪಟ್ಟಿದ್ದಾನೆ ಎಂದು ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆ ಹಲವರಿಗೆ ಬೇಸರ ತಂದಿದೆ. ಇದೀಗ ಅವರ ಟ್ವೀಟ್‌ಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ತುಂಬ ತಡವಾಯಿತು ಎಂದು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: Adipurush Movie: ಪ್ರಭಾಸ್ ಅಭಿನಯದ ‘ಆದಿಪುರುಷ್’ ಸಿನಿಮಾ ಆಟ ಇನ್ನು ಮುಗಿದಂತೆ!
ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೂನ್ ಜಾನಕಿಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿದ್ದರು. ಓಂ ರಾವುತ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಆದಿಪುರುಷ್ ಚಿತ್ರವನ್ನು 700 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರ ಇದೆಂದು ಹೇಳಲಾಗಿದೆ.