Site icon Vistara News

Adipurush Movie: ಆದಿ ಪುರುಷ್‌ ಪೋಸ್ಟರ್‌ ಸಖತ್‌ ಟ್ರೋಲ್‌; ಹಾಲಿವುಡ್‌ ಕಾಪಿ ಅಂದ್ರು ಫ್ಯಾನ್ಸ್‌

Adipurush Movie Poster Get Troll

ಬೆಂಗಳೂರು: ಕೃತಿ ಸನೂನ್, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ಸೇರಿದಂತೆ ಪ್ರಭಾಸ್ ನಟನೆಯ `ಆದಿಪುರುಷ್‌ ಸಿನಿಮಾ’ (Adipurush Movie) ಜೂನ್‌ 16ರಂದು ತೆರೆ ಕಾಣುತ್ತಿದೆ. ರಾಮಾಯಣ ಮಹಾಕಾವ್ಯ ಆಧರಿಸಿದ ಈ ಸಿನಿಮಾ ಟೀಸರ್‌ ಬಿಡುಗಡೆಯಾಗುತ್ತಿದ್ದಂತೆ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಓಂ ರಾವುತ್ ನಿರ್ದೇಶನದ ಈ ಸಿನಿಮಾದ ಟೀಸರ್‌ನಲ್ಲಿ ಕಳಪೆ ವಿಎಫ್‌ಎಕ್ಸ್‌ಗಾಗಿ ತೀವ್ರ ಟೀಕೆಗಳನ್ನು ಎದುರಿಸಿತ್ತು. ಆದರೀಗ ʻಆದಿಪುರುಷ್’ ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ ಎಂದು ಹೇಳಿ ಚಿತ್ರತಂಡ ಹೊಸ ಪೋಸ್ಟರ್ ಹಂಚಿಕೊಂಡಿದೆ. ಆದರೆ ಪೋಸ್ಟರ್‌ನಲ್ಲಿ ಕಟ್ಟಡ ಇರುವುದು ನೋಡಿ ಟ್ರೋಲ್‌ ಮಾಡುತ್ತಿದ್ದಾರೆ.

ಹನುಮಂತನ ಬೆನ್ನೇರಿ ರಾವಣನ ಸೈನ್ಯದ ವಿರುದ್ಧ ಶ್ರೀರಾಮ ಬಾಣ ಪ್ರಯೋಗ ಮಾಡುತ್ತಿರುವ ದೃಶ್ಯ ಇದು. ಆದರೆ ಪೋಸ್ಟರ್‌ನಲ್ಲಿ ಕಟ್ಟಡ ಇರುವುದು ನೋಡಿ ಕೆಲವರು ಅಚ್ಚರಿಗೊಂಡಿದ್ದಾರೆ. ‘ಆದಿಪರುಷ್’ ಚಿತ್ರದ ಈ ಹೊಸ ಪೋಸ್ಟರ್‌ಗೆ ಯಾವುದೋ ಹಾಲಿವುಡ್ ಪೋಸ್ಟರ್ ತೆಗೆದುಕೊಂಡಿದ್ದಾರೆ. ಆದರೆ ಎಡಿಟ್ ಮಾಡುವ ವೇಳೆ ಒರಿಜಿನಲ್ ಪೋಸ್ಟರ್‌ನಲ್ಲಿದ್ದ ಕಟ್ಟಡವನ್ನು ತೆಗೆಯಲು ಮರೆತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ರಾಮನ ಕಾಲದಲ್ಲಿ ಇಂತಹ ಕಟ್ಟಡಗಳು ಬರಲು ಹೇಗೆ ಸಾಧ್ಯ ಎಂದು ಟ್ರೋಲ್‌ ಮಾಡಲಾರಂಭಿಸಿದ್ದಾರೆ.

ಆದಿಪುರುಷವನ್ನು 700 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರ ಎಂದು ಹೇಳಲಾಗಿದೆ. ʻʻಆದಿಪುರುಷನ ಆಗಮನದ ಪ್ರತಿಧ್ವನಿಸುತ್ತಿದ್ದಂತೆಯೇ ಎಲ್ಲರ ಭಕ್ತಿ ಮುಗಿಲು ಮುಟ್ಟಿದೆ, ಇನ್ನು ಒಂದು ತಿಂಗಳು! ಜೈ ಶ್ರೀ ರಾಮ್ ,ಆದಿಪುರುಷ್ ಜೂನ್ 16 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿʼʼಎಂದು ಪೋಸ್ಟರ್‌ ಹಂಚಿಕೊಂಡಿದ್ದಾರೆ ಪ್ರಭಾಸ್‌.

Adipurush Movie Poster Get Troll

ಇದನ್ನೂ ಓದಿ: Adipurush Movie: ʻಆದಿಪುರುಷ್‌ʼ ಸಿನಿಮಾದಿಂದಾಗಿ ʻಜವಾನ್‌ʼ ರಿಲೀಸ್‌ ಆಗ್ತಾ ಇಲ್ವಾ? ಪ್ರಭಾಸ್‌ ಫಿಲ್ಮ್‌ ರಿಲೀಸ್‌ ಯಾವಾಗ?

ಜೂನ್ 16ರಂದು ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ವಿದೇಶದ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ನ್ಯೂಯಾರ್ಕ್​ನಲ್ಲಿ ಜೂನ್​ 7ರಿಂದ ಜೂನ್​ 18ರವರೆಗೆ ‘ತ್ರಿಬ್ಯಾಕಾ ಫಿಲ್ಮ್ ಫೆಸ್ಟಿವಲ್​’ (Tribeca Film Festival ) ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲು ‘ಆದಿಪುರುಷ್​’ ಸಿನಿಮಾ ಆಯ್ಕೆ ಆಗಿದೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ನಟ ದೇವದತ್ತ ನಾಗೆ ಹನುಮಾನ್ ಆಗಿ ಕಾಣಿಸಿಕೊಂಡಿದ್ದಾರೆ.ಇದು ಹಿಂದು ಮಹಾಕಾವ್ಯ ರಾಮಾಯಣ ರೂಪಾಂತರವಾಗಿದೆ. ಆದಿಪುರುಷವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಓಂ, ಪ್ರಸಾದ್ ಸುತಾರ್ ಮತ್ತು ರೆಟ್ರೋಫೈಲ್ಸ್‌ನ ರಾಜೇಶ್ ನಾಯರ್ ನಿರ್ಮಿಸಿದ್ದಾರೆ.

Exit mobile version