Site icon Vistara News

Adipurush Movie: ಹನುಮಾನ್‌ ಜಯಂತಿ ಪ್ರಯುಕ್ತ ವಿಶೇಷ ಪೋಸ್ಟರ್‌ ಹಂಚಿಕೊಂಡ ಆದಿಪುರುಷ್‌!

New Adipursh poster on Hanuman Jayanti

ಬೆಂಗಳೂರು: ರಾಮನವಮಿಯಂದು ಆದಿಪರುಷ್‌ ಚಿತ್ರತಂಡ (Adipurush Movie) ಹೊಸ ಪೋಸ್ಟರ್‌ ಅನಾವರಣಗೊಳಿಸಿದ ನಂತರ ಇದೀಗ ಹನುಮಾನ್‌ ಜಯಂತಿಯಂದು ನಟ ದೇವದತ್ತ ನಾಗೆ ಅವರ ಫಸ್ಟ್ ಲುಕ್ ಬಿಡುಗಡೆಗೊಳಿಸಿದೆ. ನಟ ದೇವದತ್ತ ನಾಗೆ ಹನುಮಾನ್ ಆಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ದೇವದತ್ತ ನಾಗೆ ಧ್ಯಾನ ಭಂಗಿಯಲ್ಲಿ ಕುಳಿತಿರುವ ಹನುಮಂತನಂತೆ ತೋರಿಸಲಾಗಿದೆ. ಸಿನಿಮಾವನ್ನು ಚಿತ್ರವನ್ನು ʻತಾನ್ಹಾಜಿ ದಿ ಅನ್‌ಸಂಗ್ ವಾರಿಯರ್ʼ (Tanhaji The Unsung Warrior) ಖ್ಯಾತಿಯ ಓಂ ರಾವುತ್ ನಿರ್ದೇಶಿಸುತ್ತಿದ್ದಾರೆ. ರಾಮನಾಗಿ ಪ್ರಭಾಸ್‌ ಕಾಣಿಸಿಕೊಂಡರೆ, ಜಾನಕಿಯಾಗಿ ಕೃತಿ ಸನೂನ್‌, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮತ್ತು ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

ದೇವದತ್ತ ಮರಾಠಿ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಮರಾಠಿ ಧಾರಾವಾಹಿ ʻಜೈ ಮಲ್ಹಾರ್‌ನಲ್ಲಿʼ ಭಗವಾನ್ ಖಂಡೋಬಾ ಪಾತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. 2013 ರಲ್ಲಿ ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದೊಬಾರಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 2018 ರ ಸತ್ಯಮೇವ ಜಯತೆ ಚಿತ್ರದಲ್ಲಿಯೂ ಕಾಣಿಸಿಕೊಂಡರು. ಓಂ ರಾವುತ್ ಅವರ ಹಿಂದಿನ ಬ್ಲಾಕ್‌ಬಸ್ಟರ್, ತನ್ಹಾಜಿ: ದಿ ಅನ್‌ಸಂಗ್ ವಾರಿಯರ್‌ನಲ್ಲಿ ಅವರು ಸೂರ್ಯಾಜಿ ಮಾಲುಸರೆ ಪಾತ್ರವನ್ನು ನಿರ್ವಹಿಸಿದ್ದರು.

ರಾಮನವಮಿಯಂದು ಬಿಡುಗಡೆಯಾದ ಪೋಸ್ಟರ್‌ನಲ್ಲಿ ಪ್ರಭಾಸ್ ಮತ್ತು ಸನ್ನಿ ಬಿಲ್ಲು ಮತ್ತು ಬಾಣಗಳನ್ನು ಹಿಡಿದು, ರಕ್ಷಾಕವಚವನ್ನು ಧರಿಸಿದ್ದರು. ಕೃತಿ ಸರಳವಾದ ಸೀರೆಯಲ್ಲಿ ಕಾಣಿಸಿಕೊಂಡರೆ, ದೇವದತ್ತ ಅವರು ನಮಸ್ಕರಿಸುತ್ತಿರುವ ಭಂಗಿಯಲ್ಲಿ ಕಾಣಿಸಿಕೊಂಡರು.

ಆದಿಪುರುಷ ಚಿತ್ರತಂಡ ಜೂನ್ 16 ರಂದು 3Dಯಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಹೇಳಿಕೊಂಡಿದೆ. ಪ್ರಭಾಸ್, ಕೃತಿ ಸನೂನ್ ಮತ್ತು ಸನ್ನಿ ಹೊರತುಪಡಿಸಿ, ಚಿತ್ರದಲ್ಲಿ ಸೈಫ್ ಅಲಿ ಖಾನ್ ಸೇರಿದಂತೆ ಇತರರು ನಟಿಸಿದ್ದಾರೆ. ಇದು ಹಿಂದು ಮಹಾಕಾವ್ಯ ರಾಮಾಯಣ ರೂಪಾಂತರವಾಗಿದೆ. ಆದಿಪುರುಷವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಓಂ, ಪ್ರಸಾದ್ ಸುತಾರ್ ಮತ್ತು ರೆಟ್ರೋಫೈಲ್ಸ್‌ನ ರಾಜೇಶ್ ನಾಯರ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: Actor Aditya | ನಟ ಆದಿತ್ಯ ಅಭಿನಯದ ʻಟೆರರ್‌ʼ ಫಸ್ಟ್‌ ಲುಕ್‌, ಕ್ಯಾರೆಕ್ಟರ್ ಟೀಸರ್ ಔಟ್‌!

ಈ ವರ್ಷ ಜನವರಿಯಲ್ಲಿ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕಳಪೆ ಗುಣಮಟ್ಟದ VFX ಮೇಲೆ ಸಾಕಷ್ಟು ಟ್ರೋಲಿಂಗ್ ಆದ ಬಳಿಕ ಬಿಡುಗಡೆ ದಿನಾಂಕವನ್ನು ಮತ್ತಷ್ಟು ಮುಂದಕ್ಕೆ ಹಾಕಲಾಯಿತು. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಜೂನ್ 16 ರಂದು ತೆರೆಗೆ ಬರಲಿದೆ.

Exit mobile version