Site icon Vistara News

Adipurush Movie : ‘ಆದಿಪುರುಷ’ನ ಬಗ್ಗೆ ಹಳೆಯ ರಾಮಾಯಣದ ನಟ, ನಟಿಯರ ಅಭಿಪ್ರಾಯ ಏನಿದೆ?

ramayana actress react to adipurush

#image_title

ಮುಂಬೈ: ಪ್ರಭಾಸ್‌ ನಟನೆಯ ಆದಿಪುರುಷ ಸಿನಿಮಾ (Adipurush Movie) ಬಿಡುಗಡೆಗೊಂಡಿದ್ದು, ವೀಕ್ಷಕರಿಗೆ ಬೇಸರವನ್ನು ತಂದಿದೆ. ಪ್ರಸಿದ್ಧ ರಾಮಾಯಣದ ಕಥೆಯಾಗಿರುವ ಈ ಸಿನಿಮಾದಲ್ಲಿ ಅನೇಕ ಲೋಪದೋಷಗಳಿವೆ ಎಂದು ಸಿನಿಮಾ ನೋಡಿದವರು ಬೇಸರವನ್ನು ಹೊರಹಾಕುತ್ತಿದ್ದಾರೆ. ರಾಮಾಯಣದ ಕಥೆಯನ್ನು ದೂರದರ್ಶನದಲ್ಲಿ 1987ರ ಕಾಲದಲ್ಲಿ ಧಾರಾವಾಹಿ ಮಾಡಿದ್ದೇ ತುಂಬಾ ಸುಂದರವಾಗಿತ್ತು ಎಂದು ಜನ ಹೇಳುತ್ತಿದ್ದಾರೆ. ಇದೀಗ ಈ ಆದಿಪುರುಷನ ಕುರಿತಾಗಿ 1987ರ ರಾಮಾಯಣದ ತಂಡದವರು ಕೂಡ ಪ್ರತಿಕ್ರಿಯಿಸಿದ್ದಾರೆ.

ಈ ಆದಿಪುರುಷ ಸಿನಿಮಾದ ಕುರಿತಾಗಿ ರಮಾನಂದ ಸಾಗರ ನಿರ್ದೇಶನದ ರಾಮಾಯಣದಲ್ಲಿ ಸೀತೆಯಾಗಿ ನಟಿಸಿದ್ದ ದೀಪಿಕಾ ಚಿಕಿಲಿಯಾ ಪ್ರತಿಕ್ರಿಯಿಸಿ “ಪ್ರತಿ ಬಾರಿ ರಾಮಾಯಣ ಧಾರಾವಾಹಿಯಾಗಿ ಅಥವಾ ಚಲನಚಿತ್ರವಾಗಿ ಬಂದಾಗಲೂ ಅದು ಜನರಿಗೆ ನೋವುಂಟು ಮಾಡುತ್ತಿದೆ. ಏಕೆಂದರೆ ಅಲ್ಲಿ ರಾಮಾಯಣದ ಕಥೆಯನ್ನು ಸರಿಯಾಗಿ ತೋರಿಸಲಾಗುತ್ತಿಲ್ಲ. ರಾಮಾಯಣ ಮನೋರಂಜನೆಯ ವಸ್ತುವಲ್ಲ. ಇದು ನಮಗೆ ತಲೆಮಾರುಗಳಿಂದ ರವಾನೆಯಾಗುತ್ತಿರುವ ಸಂಸ್ಕೃತಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Adipurush Movie Collection: ವಾರಾಂತ್ಯದಲ್ಲಿ ವಿಶ್ವಾದ್ಯಂತ 300 ಕೋಟಿ ರೂ. ಗಳಿಕೆ ಕಂಡ ಆದಿಪುರುಷ್‌!
ಆದಿಪುರುಷ ಸಿನಿಮಾ ನೋಡುತ್ತೀರಾ ಎನ್ನುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, “ಸಿನಿಮಾದ ಬಗ್ಗೆ ಸಾಕಷ್ಟು ಋಣಾತ್ಮಕ ವಿಮರ್ಶೆಗಳು ಕೇಳಿಬರುತ್ತಿವೆ. ಹಾಗೆಯೇ ನಾನು ಕೂಡ ಚಿತ್ರೀಕರಣದಲ್ಲಿ ಬಿಜಿ ಇರುವ ಕಾರಣ ಸದ್ಯದಲ್ಲಿ ಆದಿಪುರುಷ ಸಿನಿಮಾ ನೋಡುವುದು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

1987ರ ರಾಮಾಯಣ ಧಾರಾವಾಹಿಯ ದೃಶ್ಯ


ಇನ್ನು ಈ ಸಿನಿಮಾದ ಬಗ್ಗೆ 1987ರಲ್ಲಿ ರಾಮಾಯಣ ಧಾರಾವಾಹಿ ನಿರ್ದೇಶನ ಮಾಡಿದ್ದ ನಿರ್ದೇಶಕ ರಮಾನಂದ ಸಾಗರ್ ಅವರ ಪುತ್ರ ಪ್ರೇಮ್‌ ಸಾಗರ್‌ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. “ಆದಿಪುರುಷ ಸಿನಿಮಾದ ಡೈಲಾಗ್‌ ಬರೆದಿರುವ ಮನೋಜ್‌ ಮುಂತಶಿರ್‌ ಅವರು ಹಿಂದೂ ಧರ್ಮದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಆದರೂ ಸಿನಿಮಾದಲ್ಲಿ ಕೆಲವು ಡೈಲಾಗ್‌ಗಳನ್ನು ಏಕೆ ಹೀಗೆ ಬರೆದಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಯುವ ಪೀಳಿಗೆ ಅದನ್ನು ಇಷ್ಟಪಡಬಹುದು ಎಂದು ಅವರು ಎಂದುಕೊಂಡಿದ್ದರೆ ಅದು ತಪ್ಪು. ಪ್ರೇಕ್ಷಕರೊಂದಿಗೆ ಇಂತಹ ದೊಡ್ಡ ತಪ್ಪು ಮಾಡಬಾರದು. ಫ್ಯಾಂಟಸಿ ಚಿತ್ರವಾದರೆ ಸರಿ. ಆದರೆ ರಾಮಾಯಣ ಮಾಡುತ್ತೇವೆ ಎಂದು ಹೇಳಿ ಈ ರೀತಿ ಜನರ ಭಾವನೆಗಳಿಗೆ ಧಕ್ಕೆ ತರಬಾರದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Road accident: ಲಾರಿ, ಬೈಕ್‌ ಮುಖಾಮುಖಿ ಡಿಕ್ಕಿ; ಬೈಕ್‌ನಲ್ಲಿದ್ದ ಯುವಕ, ಯುವತಿ ಸ್ಥಳದಲ್ಲೇ ಸಾವು
ಹಾಗೆಯೇ, “ನಾನು ಆದಿಪುರುಷ ಸಿನಿಮಾದ ಕೆಲವು ತುಣುಕನ್ನು ನೋಡಿದ್ದೇನೆ. 1987ರ ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರ ನಿಭಾಯಿಸಿದ ಸುನಿಲ್‌ ಲೆಹ್ರಿ ಅವರೊಂದಿಗೆ ಆ ಬಗ್ಗೆ ಚರ್ಚೆಯನ್ನೂ ಮಾಡಿದ್ದೇನೆ. ರಾವಣ ಚಿನ್ನದ ಅರಮನೆಯಲ್ಲಿ ಇರುತ್ತಾನೆ. ಆದರೆ ಈ ಸಿನಿಮಾದಲ್ಲಿ ಅದನ್ನು ಕಪ್ಪಾಗಿಸಲಾಗಿದೆ. ಹಾಗೆಯೇ ಐದು ತಲೆಗಳ ಮೇಲೆ ಐದು ತಲೆ ಕೂರಿಸಿ ವಿಚಿತ್ರಗೊಳಿಸಲಾಗಿದೆ. ಹಾಗಾಗಿ ಬಹುಶಃ ನಾನು ಆದಿಪುರುಷ ಸಿನಿಮಾವನ್ನು ನೋಡುವುದಿಲ್ಲ” ಎಂದು ಅವರು ಹೇಳಿದ್ದಾರೆ.

Exit mobile version