Site icon Vistara News

Adipurush Movie : ಆದಿಪುರುಷನ ನೋಡೋಕೆ 2,200 ರೂ. ಟಿಕೆಟ್‌! ಆದರೂ ಸಿನಿಮಾ ಹೌಸ್‌ಫುಲ್‌!

Adipurush Movie ticket rate

Adipurush Movie ticket rate is 2,200 in delhi

ನವದೆಹಲಿ: ದಕ್ಷಿಣ ಭಾರತದ ಖ್ಯಾತ ನಟ ಪ್ರಭಾಸ್‌ ಹಾಗೂ ಕೃತಿ ಸನೋನ್‌ ನಟಿಸಿರುವ ಆದಿಪುರುಷ (Adipurush Movie) ಸಿನಿಮಾ ಇದೇ ಶುಕ್ರವಾರ ತೆರೆ ಕಾಣಲಿದೆ. ಸಿನಿಮಾ ಟಿಕೆಟ್‌ನ ಮುಂಗಡ ಬುಕ್ಕಿಂಗ್‌ ಈಗಾಗಲೇ ಆರಂಭವಾಗಿದ್ದು, ಭಾರೀ ಪ್ರಮಾಣದಲ್ಲಿ ಬುಕ್ಕಿಂಗ್‌ ಆಗುತ್ತಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಂತೂ ಆದಿಪುರುಷನಿಗೆ ಭಾರೀ ಬೇಡಿಕೆಯುಂಟಾಗಿದೆ.

ಹೌದು. ದೆಹಲಿಯ ಎಲ್ಲ ಸಿನಿಮಾ ಮಂದಿರಗಳಲ್ಲಿ ಅತಿ ವೇಗವಾಗಿ ಆದಿಪುರುಷ ಟಿಕೆಟ್‌ ಮುಂಗಡ ಬುಕ್ಕಿಂಗ್‌ ಆಗುತ್ತಿದೆ. ಹಲವಾರು ಮಲ್ಟಿಫ್ಲೆಕ್ಸ್‌ಗಳಲ್ಲಿ ಈಗಾಗಲೇ ಟಿಕೆಟ್‌ಗಳು ಖಾಲಿಯಾಗಿ ಹೌಸ್‌ ಫುಲ್‌ ಆಗಿವೆ. ಅಂದ ಹಾಗೆ ದೆಹಲಿಯ ಮಲ್ಟಿಫ್ಲೆಕ್ಸ್‌ಗಳಲ್ಲಿ ಈ ಆದಿಪುರುಷ ಸಿನಿಮಾದ ಟಿಕೆಟ್‌ಗಳ ಬೆಲೆ ಬರೋಬ್ಬರಿ 2,200 ರೂ.ವರೆಗಿದೆ. ಟಿಕೆಟ್‌ ಇಷ್ಟೊಂದು ದುಬಾರಿಯಾಗಿದ್ದರೂ ಜನರು ಅದನ್ನು ಲೆಕ್ಕಿಸದೆ ಶ್ರೀರಾಮನ ಕಥೆಯನ್ನು ತೆರೆ ಮೇಲೆ ನೋಡುವುದಕ್ಕೆ ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳುತ್ತಿದ್ದಾರೆ.

ವೇಗಾಸ್‌ ಮಲ್ಟಿಫ್ಲೆಕ್ಸ್‌ನಲ್ಲಿ ಆದಿಪುರುಷ ಟಿಕೆಟ್‌ ದರ

ಇದನ್ನೂ ಓದಿ: Viral Video: ಮೊಸಳೆ ಕ್ರೂರಿಯೋ? ಮಾನವ ಕಟುಕನೋ?-ಗಂಗಾನದಿ ತಟದಲ್ಲಿ ಭಯಾನಕ ಘಟನೆ!
ಆದಿಪುರುಷ ಚಿತ್ರವನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ. ʼನ್ಹಾಜಿ- ದಿ ಅನ್‌ಸಂಗ್ ವಾರಿಯರ್ʼ ಸಿನಿಮಾದ ಅದ್ಭುತ ಯಶಸ್ಸಿನ ನಂತರ ಇದು ಓಂ ಅವರ ಎರಡನೇ ನಿರ್ದೇಶನದ ಚಿತ್ರವಾಗಿದೆ. ಆದಿಪುರುಷ ಸಿನಿಮಾ ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಪ್ರಭಾಸ್‌ ರಾಮನ ಪಾತ್ರದಲ್ಲಿದ್ದರೆ, ಕೃತಿ ಸೀತೆಯ ಪಾತ್ರ ಹಾಗೂ ಸೈಫ್‌ ಅಲಿ ಖಾನ್‌ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ.

ಆದಿಪುರುಷ ಸಿನಿಮಾ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು ಭಾರೀ ಮೆಚ್ಚುಗೆ ಪಡೆದುಕೊಂಡಿವೆ. ಇತ್ತೀಚೆಗೆ ಬಿಡುಗಡೆಯಾದ ರಾಮ್‌ ಸೀತಾ ರಾಮ್‌ ಹಾಡಂತೂ ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು. ಹಾಗೆಯೇ ಸಿನಿಮಾದ ಟ್ರೇಲರ್‌ ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಿನಿಮಾ ಇದೇ 16ರಂದು ತೆರೆ ಕಾಣಲಿದ್ದು, ವೀಕ್ಷಕರು ಅದನ್ನು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Exit mobile version