Site icon Vistara News

Adipurush Movie : ಐಮ್ಯಾಕ್ಸ್‌ನಲ್ಲಿ ಬಿಡುಗಡೆಯಾಗುತ್ತಿಲ್ಲ ಆದಿಪುರುಷ್‌; ಏನು ಕಾರಣ?

Adipurush Movie will not release in IMAX in India. This is why

ಬೆಂಗಳೂರು: ಟಾಲಿವುಡ್‌ ನಟ ಪ್ರಭಾಸ್ ಅವರ ಬಹು ನಿರೀಕ್ಷಿತ ಚಿತ್ರ ʻಆದಿಪುರುಷ್‌ʼ ಸಿನಿಮಾ (Adipurush Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಆದಿಪುರುಷ್‌ ಜೂನ್ 16ರಂದು ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಚಿತ್ರ ಗ್ರ್ಯಾಂಡ್ ರಿಲೀಸ್‌ಗೂ ಮುನ್ನ ಐಮ್ಯಾಕ್ಸ್‌ಗಳಲ್ಲಿ ಬಿಡುಗಡೆಯಾಗುತ್ತಿಲ್ಲ ಎಂಬ ಸುದ್ದಿ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದು ಅಭಿಮಾನಿಗಳನ್ನು ಕೆರಳಿಸಿದೆ. ಸರಿಯಾಗಿ ಯೋಜಿಸದ ಪ್ರೊಡಕ್ಷನ್ ಹೌಸ್ ಟಿ-ಸೀರೀಸ್‌ ವಿರುದ್ಧ ಇದೀಗ ಪ್ರಭಾಸ್‌ ಫ್ಯಾನ್ಸ್‌ ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.

ಓಂ ರಾವುತ್ ನಿರ್ದೇಶನದ ಈ ಸಿನಿಮಾ ಘೋಷಿಸಿದ್ದಾಗಲಿಂದಲೂ ಒಂದಲ್ಲ ಒಂದು ಸುದ್ದಿಗಳಿಗೆ ಚರ್ಚೆಯಾಗುತ್ತಲೇ ಇದೆ. ಐಮ್ಯಾಕ್ಸ್‌ನಲ್ಲಿ ಚಿತ್ರ ಬಿಡುಗಡೆಯಾಗುತ್ತಿಲ್ಲ ಎಂಬ ಸುದ್ದಿ ವೈರಲ್‌ ಆಗುತ್ತಿದ್ದಂತೆ ಪ್ರಭಾಸ್‌ ಫ್ಯಾನ್ಸ್‌ ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾರ್ನರ್ ಬ್ರದರ್ಸ್ ಪಿಕ್ಚರ್ಸ್ ನಿರ್ಮಾಣದ ʼದಿ ಫ್ಲ್ಯಾಶ್ʼ ಚಿತ್ರ ಅದೇ ದಿನ ಬಿಡುಗಡೆಯಾಗುತ್ತಿದೆ. ವಾರ್ನರ್ ಬ್ರದರ್ಸ್ ಪಿಕ್ಚರ್ಸ್ ಸಂಸ್ಥೆ ಸಾಕಷ್ಟು ಮೊದಲೇ ಭಾರತದಲ್ಲಿ IMAX ಸ್ಕ್ರೀನ್‌ಗಳನ್ನು ಕಾದಿರಿಸಿದೆ. ಹಾಗಾಗಿ ಭಾರತದಲ್ಲಿ ಐಮ್ಯಾಕ್ಸ್‌ ಸ್ಕ್ರೀನ್‌ನಲ್ಲಿ ಆದಿಪುರುಷ್‌ ಚಿತ್ರವನ್ನು ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಇದರಿಂದಾಗಿ, ಭಾರಿ ನಿರೀಕ್ಷೆಯೊಂದಿಗೆ ಕಾಯುತ್ತಿರುವ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅನೇಕ ಅಭಿಮಾನಿಗಳು ಟ್ವಿಟ್ಟರ್‌ ಮೂಲಕ ಈ ಬಗ್ಗೆ ನಿರ್ದೇಶಕ ಓಂ ರಾವುತ್ ಮತ್ತು ಟಿ-ಸಿರೀಸ್‌ನ ನಿರ್ಮಾಪಕ ಭೂಷಣ್ ಕುಮಾರ್ ಅವರಿಗೆ ಸಂದೇಶ ಕಳುಹಿಸಿ, ಆದಿಪುರುಷ್‌ ಚಿತ್ರವನ್ನು ಹೇಗಾದರು ಮಾಡಿ ಐಮ್ಯಾಕ್ಸ್‌ನಲ್ಲಿ ಬಿಡುಗಡೆ ಮಾಡಬೇಕೆಂದು ಮನವಿ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಅಪ್‌ಡೇಟ್‌ ನೀಡಿಲ್ಲ.

ಇದನ್ನೂ ಓದಿ: Wrestlers Protest: ಏಷ್ಯನ್​ ಗೇಮ್ಸ್​ ಆಡುತ್ತೇವೆ ಆದರೆ… ಸರ್ಕಾರಕ್ಕೆ ವಾರ್ನಿಂಗ್​​ ಕೊಟ್ಟ ಕುಸ್ತಿಪಟುಗಳು

ಆದಿಪುರುಷ್‌ ಚಿತ್ರವನ್ನು 700 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರ ಇದೆಂದು ಹೇಳಲಾಗಿದೆ. ಜೂನ್ 16ರಂದು ಈ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ವಿದೇಶದ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ನ್ಯೂಯಾರ್ಕ್​ನಲ್ಲಿ ಜೂನ್​ 7ರಿಂದ ಆರಂಭವಾಗಿರುವ ‘ತ್ರಿಬ್ಯಾಕಾ ಫಿಲ್ಮ್ ಫೆಸ್ಟಿವಲ್​’ (Tribeca Film Festival ) ಜೂನ್​ 18ರವರೆಗೆ ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲು ‘ಆದಿಪುರುಷ್​’ ಸಿನಿಮಾ ಆಯ್ಕೆ ಆಗಿದೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ನಟ ದೇವದತ್ತ ನಾಗೆ ಹನುಮಾನ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಹಿಂದು ಮಹಾಕಾವ್ಯ ರಾಮಾಯಣದ ರೂಪಾಂತರವಾಗಿದೆ. ಆದಿಪುರುಷವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಓಂ, ಪ್ರಸಾದ್ ಸುತಾರ್ ಮತ್ತು ರೆಟ್ರೋಫೈಲ್ಸ್‌ನ ರಾಜೇಶ್ ನಾಯರ್ ನಿರ್ಮಿಸಿದ್ದಾರೆ.

Exit mobile version