Site icon Vistara News

Adipurush Song : ಬಿಡುಗಡೆಯಾಯ್ತು ಆದಿಪುರುಷ್‌ ಸಿನಿಮಾದ ಮತ್ತೊಂದು ಹಾಡು: ಎಲ್ಲೆಲ್ಲೂ ರಾಮ ಭಜನೆಯೇ

#image_title

ಬೆಂಗಳೂರು: ಪ್ರಭಾಸ್‌ ನಟನೆಯ ಆದಿಪುರುಷ್‌ ಸಿನಿಮಾದ (Adipurush Song) ಮತ್ತೊಂದು ವಿಡಿಯೊ ಹಾಡನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ರಾಮ್‌ ಸೀತಾ ರಾಮ್‌ ಹೆಸರಿನ ಹಾಡು ಬಿಡುಗಡೆಯಾಗಿದ್ದು, ಸಿನಿಮಾ ಪ್ರಿಯರು ಹಾಗೂ ಸಂಗೀತ ಪ್ರಿಯರಿಂದ ಮೆಚ್ಚುಗೆ ಪಡೆದುಕೊಳ್ಳಲಾರಂಭಿಸಿದೆ.

ಈ ಹಾಡಿನಲ್ಲಿ ರಾಮ ಸೀತೆ ವನವಾಸದಲ್ಲಿ ಕಳೆದ ಸುಂದರ ಕ್ಷಣಗಳು, ಹಾಗೆಯೇ ಸೀತೆಯನ್ನು ರಾವಣ ಹೊತ್ತೊಯ್ದಾಗ ರಾಮ ಅನುಭವಿಸಿದ ಸಂಕಟ, ಸೀತೆಯನ್ನು ವಾಪಸು ಕರೆದುಕೊಂಡು ಬರಲೆಂದು ಹನುಮಂತನ ಸಹಾಯ ಪಡೆದುಕೊಳ್ಳುವುದು, ಸೀತೆಗೆಂದು ಉಂಗುರ ಕೊಟ್ಟುಕಳುಹಿಸುವುದು ಸೇರಿ ಅನೇಕ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಸೀತೆ ರಾವಣನ ಸೆರೆಯಲ್ಲಿದ್ದುಕೊಂಡು ರಾಮನನ್ನೇ ಸ್ಮರಿಸುವುದನ್ನೂ ಇಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: Adipurush Trailer: ಆದಿಪುರುಷ್‌ ಟ್ರೈಲರ್‌ ಔಟ್‌; ಪ್ರಭಾಸ್‌ ರಾಮನ ಅವತಾರಕ್ಕೆ ಫ್ಯಾನ್ಸ್‌ ಫುಲ್‌ ಖುಷ್‌
ಈ ಹಾಡಿಗೆ ಸಚೇತ್‌ ತಂಡನ್‌ ಮತ್ತು ಪರಂಪರಾ ತಂಡನ್‌ ಅವರು ಸಂಗೀತ ನಿರ್ದೇಶನ ಮಾಡಿದ್ದು, ಧ್ವನಿ ನೀಡಿದ್ದಾರೆ. ಹಿಂದಿಯಲ್ಲಿ ಮನೋಜ್‌ ಮೌಂತಶಿರ್‌ ಶುಕ್ಲಾ ಅವರು ಸಾಹಿತ್ಯ ಬರೆದಿದ್ದರೆ ಕನ್ನಡದಲ್ಲಿ ʼಸಿಂಗಾರ ಸಿರಿಯೇʼ ಖ್ಯಾತಿಯ ಪರಮೋದ್‌ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ.


ಆದಿಪುರುಷ ಸಿನಿಮಾ ಜೂನ್‌ ತಿಂಗಳಲ್ಲಿ ತೆರೆ ಕಾಣಲಿದೆ. ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದೆ ಸಿನಿಮಾದ ಮೊದಲನೇ ಹಾಡಾಗಿ ಜೈ ಶ್ರೀ ರಾಮ್‌ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಟ್ರೇಲರ್‌ ಬಿಡುಗಡೆ ಸಮಯದಲ್ಲಿ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ನಟಿಸಿರುವ ಕೃತಿ ಸನಾನ್‌ ಅವರು ಸಿನಿಮಾದ ಬಗ್ಗೆ ಮಾತನಾಡಿದ್ದು, “ನಾನು ತುಂಬಾ ಭಾವುಕನಾಗಿದ್ದೇನೆ. ಟ್ರೇಲರ್ ನೋಡುವಾಗ ನನಗೆ ಮೈ ರೋಮಾಂಚನವಾಯಿತು. ಏಕೆಂದರೆ ಇದು ಕೇವಲ ಸಿನಿಮಾವಲ್ಲ, ಆದರೆ ಅದಕ್ಕಿಂತ ಹೆಚ್ಚಿನದು. ಈ ಸಿನಿಮಾದಲ್ಲಿ ವಿಶೇಷ ಅನುಭವ ನನಗಾಗಿದೆ. ನನ್ನನ್ನು ಜಾನಕಿಯಾಗಿ ನಂಬಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದಗಳು” ಎಂದು ಹೇಳಿದ್ದರು.

Exit mobile version