ಬೆಂಗಳೂರು: ಪ್ರಭಾಸ್ ನಟನೆಯ ʻಆದಿಪುರುಷ’ (Adipurush Movie) ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದಿನದಿಂದಲೂ ಡೈಲಾಗ್ ರೈಟರ್ ಮನೋಜ್ ಮುಂತಶಿರ್ ಹಿನ್ನೆಡೆ ಎದುರಿಸಿದ್ದರು. ಕಳಪೆ ವಿಎಫ್‌ಎಕ್ಸ್‌ಗಿಂತ ಹೆಚ್ಚಿನ ಪ್ರೇಕ್ಷಕರು ಡೈಲಾಗ್‌ಗಳಿಗೆ ಆಕ್ರೋಶ ಹೊರ ಹಾಕಿದ್ದರು. ಅದರಲ್ಲೂ ಆಂಜನೇಯ ಸಂಭಾಷಣೆಗಳು ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಬಳಿಕ ಮನೋಜ್ ಮುಂತಶಿರ್ ಸೋಷಿಯಲ್ ಮೀಡಿಯಾ ಮೂಲಕ ಪ್ರೇಕ್ಷಕರಿಗೆ ಕ್ಷಮೆಯಾಚಿಸಿದ್ದರು. ಇದೀಗ ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ʻʻತಪ್ಪುಗಳಿರಬಹುದು ಆದರೆ ಯಾವುದೂ ಉದ್ದೇಶಪೂರ್ವಕವಾಗಿಲ್ಲʼʼಎಂದು ಹೇಳಿದ್ದಾರೆ.
ಮನೋಜ್ ಮುಂತಶಿರ್ ಮಾತನಾಡಿ ʻನಾನು ಚೆನ್ನಾಗಿ ಬರೆದಿದ್ದೇನೆ ಎಂದು ಹೇಳುವ ಮೂಲಕ ನನ್ನ ಬರವಣಿಗೆಯ ಕೌಶಲವನ್ನು ಸಮರ್ಥಿಸಿಕೊಳ್ಳುವಷ್ಟು ಅಸುರಕ್ಷಿತ ವ್ಯಕ್ತಿ ನಾನು ಅಲ್ಲ. ಇದು 100 ಪರ್ಸೆಂಟ್ ತಪ್ಪು. ನಾನು ದೊಡ್ಡ ತಪ್ಪು ಮಾಡಿದೆ. ಆ ತಪ್ಪಿನ ಹಿಂದಿರುವ ಉದ್ದೇಶ ಕೆಟ್ಟದ್ದಾಗಿರಲಿಲ್ಲ. ಧರ್ಮವನ್ನು ನೋಯಿಸುವ ಮತ್ತು ಸನಾತನಕ್ಕೆ ತೊಂದರೆ ಕೊಡುವ, ಶ್ರೀರಾಮನ ಮಾನಹಾನಿ ಮಾಡುವ, ಹನುಮಾನ್ ಜಿ ಬಗ್ಗೆ ಇಲ್ಲಸಲ್ಲದ ಏನನ್ನಾದರೂ ಹೇಳುವ ಉದ್ದೇಶ ನನಗಿರಲಿಲ್ಲʼʼಎಂದಿದ್ದಾರೆ. ಇದು ಕಲಿಕೆಯ ಪ್ರಕ್ರಿಯೆ, ಧರ್ಮವನ್ನು ನೋಯಿಸಬೇಕೆಂಬ ಉದ್ದೇಶ ಇರಲಿಲ್ಲʼʼಎಂದರು. “ಜನರು ಕೋಪಗೊಂಡ ಸಮಯದಲ್ಲಿ ಈ ಬಗ್ಗೆ ನಾನು ಸ್ಪಷ್ಟೀಕರಣ ಕೊಡಬಾರದಿತ್ತು. ಇದು ನಾನು ಮಾಡಿದ ದೊಡ್ಡ ತಪ್ಪು.ಇಂದು ನಾನು ಆ ತಪ್ಪನ್ನು ಅರ್ಥಮಾಡಿಕೊಂಡಿದ್ದೇನೆʼʼಎಂದರು .
ಆದಿಪುರುಷ್ ಸಿನಿಮಾ ರಿಲೀಸ್ ಆದಾಗ ಒಂದು ವರ್ಗದ ಪ್ರೇಕ್ಷಕರು ಚಿತ್ರದ ಸಂಭಾಷಣೆಗಳನ್ನು ಕಟ್ಟುನಿಟ್ಟಾಗಿ ವಿರೋಧಿಸಿದ್ದರು. ಬಳಿಕ ಬದಾವಣೆಯನ್ನು ಚಿತ್ರತಂಡ ತಂದಿತು. ಹಲವಾರು ಟೀಕೆ ಎದುರಿಸಿದ ಬಳಿಕ ಮನೋಜ್ ಅವರು ಪೋಸ್ಟ್ ಹಂಚಿಕೊಂಡಿದ್ದರು. “ಆದಿಪುರುಷ್ ಸಿನಿಮಾದಿಂದ ಜನರ ಭಾವನೆಗಳಿಗೆ ನೋವುಂಟಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಕೈ ಮುಗಿದು, ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಬಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ. ನಮ್ಮ ಪವಿತ್ರ ಸನಾತನ ಮತ್ತು ನಮ್ಮ ಮಹಾನ್ ರಾಷ್ಟ್ರದ ಸೇವೆಯನ್ನು ಮಾಡಲು ನಮಗೆ ಶಕ್ತಿಯನ್ನು ನೀಡಲಿ” ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: Adipurush Movie: ಪ್ರೇಕ್ಷಕರಿಗೆ ಕ್ಷಮೆಯಾಚಿಸಿದ ʻಆದಿಪುರುಷ್ʼ ಡೈಲಾಗ್ ರೈಟರ್ ಮನೋಜ್ ಮುಂತಶಿರ್
ಓಂ ರಾವುತ್ ನಿರ್ದೇಶಿಸಿದ, ಆದಿಪುರುಷ್ ಸಿನಿಮಾದಲ್ಲಿ ಕೃತಿ ಸನೋನ್, ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದಿಪುರುಷ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾದ ತಕ್ಷಣ, ಚಲನಚಿತ್ರ ನಿರ್ಮಾಪಕರು ಟ್ರೋಲ್‌ಗೆ ಗುರಿಯಾಗಿದ್ದರು.