Site icon Vistara News

Aditi Prabhudeva | ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ

Aditi Prabhudeva

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಯಶಸ್ವಿ ಜತೆ ನವೆಂಬರ್‌ 28 ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳಗ್ಗೆ 09.30ರಿಂದ 10.32ರ ಒಳಗಿನ ಶುಭ ಲಗ್ನದಲ್ಲಿ ಮಾಂಗಲ್ಯಧಾರಣೆ ಆಗಿದೆ. ಅದ್ಧೂರಿಯಾಗಿ ವೇದಿಕೆ ಅಲಂಕಾರಗೊಂಡಿದ್ದು, ಮದುವೆಗೆ ತಾರೆಯರು ಹಾಗೂ ರಾಜಕೀಯ ಗಣ್ಯರು ಆಗಮಿಸಿದ್ದಾರೆ. ಯಶಸ್ವಿ ಅವರು ಕೊಡಗಿನ ವಿರಾಜಪೇಟೆ ಮೂಲದವರಾಗಿದ್ದು, ಉದ್ಯಮಿ ಆಗಿದ್ದಾರೆ.

ನವೆಂಬರ್‌ 27 ಭಾನುವಾರ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಆರತಕ್ಷತೆಯಲ್ಲಿ ಗುಲಾಬಿ ಬಣ್ಣದ ಲೆಹಂಗಾ ಧರಿಸಿದ್ದ ವಧು ಅದಿತಿ ಹಾಗೂ ನೀಲಿ ಬಣ್ಣದ ಶೆರ್ವಾನಿ ಸೂಟ್ ಧರಿಸಿದ್ದ ವರ ಯಶಸ್ವಿ ಮಿಂಚಿದ್ದರು. ರಾಕಿಂಗ್‌ ಸ್ಟಾರ್‌ ಯಶ್, ರಾಧಿಕಾ ಪಂಡಿತ್, ಲಹರಿ ವೇಲು , ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹಿರಿಯ ನಟಿ ತ್ರಿವೇಣಿ, ನಿರ್ಮಾಪಕ ಉದಯ್ ಕೆ. ಮೆಹ್ತಾ, ನಟ ನವೀನ್ ಕೃಷ್ಣ, ಸಚಿವ ಸೋಮಣ್ಣ ಸೇರಿ ಸಿನಿಮಾ ಹಾಗೂ ರಾಜಕೀಯ ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ | Aditi Prabhudeva | ಮದರಂಗಿ ಸಂಭ್ರಮದಲ್ಲಿ ಅದಿತಿ ಪ್ರಭುದೇವ: ರಂಗು ರಂಗಾದ ಫೋಟೊಗಳಿವೆ ನೋಡಿ!

ಅರಿಶಿಣ ಶಾಸ್ತ್ರ ಹಾಗೂ ಮೆಹೆಂದಿ ಶಾಸ್ತ್ರದ ಫೋಟೊಗಳನ್ನು ಅದಿತಿ ಅವರು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದರು. ಇದೊಂದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಮನೆಯವರೇ ತೋರಿಸಿದ ಯಶಸ್ವಿ ಜತೆ ಸಪ್ತಪದಿ ತುಳಿದಿದ್ದಾರೆ ನಟಿ ಅದಿತಿ. ‘ಧೈರ್ಯಂ’, ‘ಬಜಾರ್’, ‘ಸಿಂಗ’, ‘ರಂಗನಾಯಕಿ’, ‘ಬ್ರಹ್ಮಚಾರಿ’, ‘ಆನ’ ,‘ತೋತಾಪುರಿ’, ‘ಗಜಾನನ ಆ್ಯಂಡ್‌ ಗ್ಯಾಂಗ್’, ‘ಓಲ್ಡ್ ಮಾಂಕ್’, ‘ಚಾಂಪಿಯನ್’, ‘ತ್ರಿಬಲ್ ರೈಡಿಂಗ್’, ‘ಅಂದೊಂದಿತ್ತು ಕಾಲ’, ‘ಮಾಫಿಯಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ.

ಇದನ್ನೂ ಓದಿ | Aditi Prabhudeva | ಮದರಂಗಿ ಸಂಭ್ರಮದ ಫೋಟೊಗಳನ್ನು ಹಂಚಿಕೊಂಡ ಅದಿತಿ ಪ್ರಭುದೇವ

Exit mobile version