Site icon Vistara News

Aditi Prabhudeva | ನಟಿ ಅದಿತಿ ಪ್ರಭುದೇವ ಕಲ್ಯಾಣಕ್ಕೆ ಮುಹೂರ್ತ ಫಿಕ್ಸ್: ಯಾವಾಗ ಮದುವೆ?

Aditi Prabhudeva

ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಮುಂಚೂಣಿ ನಾಯಕಿಯರ ಪೈಕಿ ಅದಿತಿ ಪ್ರಭುದೇವ (Aditi Prabhudeva) ಕೂಡ ಒಬ್ಬರು. ಇದೀಗ ಅವರ ಕಲ್ಯಾಣಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಇದೇ ನವೆಂಬರ್‌ 27 ಭಾನುವಾರ ಯಶಸ್ವಿ (ಯಶಸ್‌) ಜತೆ ಅದಿತಿ ಪ್ರಭುದೇವ ಸಪ್ತಪದಿ ತುಳಿಯಲಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ವಿವಾಹ ಜರುಗಲಿದೆ.

ಅದಿತಿ ಪ್ರಭುದೇವ ಅವರ ಭಾವಿ ಪತಿ ಯಶಸ್ವಿ ಅವರು ಕಾಫಿ ಎಸ್ಟೇಟ್‌ನ ಮಾಲೀಕ ಹಾಗೂ ಬಿಸಿನೆಸ್‌ಮ್ಯಾನ್. ಡಿ.26ರಂದು ಅದಿತಿ ಪ್ರಭುದೇವ ಅವರು ಯಶಸ್ವಿ ಅವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ʻʻನಮ್ಮಿಬ್ಬರದ್ದೂ ಅರೆಂಜ್ಡ್ ಮದುವೆ. ನನಗೆ ಪ್ರಾಣಿ, ಪಕ್ಷಿ, ಪ್ರಕೃತಿಯೆಂದರೆ ತುಂಬಾ ಇಷ್ಟ. ನನ್ನ ವೃತ್ತಿ ಜೀವನಕ್ಕೆ ಯಶಸ್ ಹಾಗೂ ಅವರ ಕುಟುಂಬದವರು ಬೆಂಬಲ ನೀಡಿದ್ದಾರೆʼʼ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಅದಿತಿ ಹೇಳಿಕೊಂಡಿದ್ದರು.

ʻʻಯಶಸ್ವಿ ಅವರು ಪರ್ಫೆಕ್ಟ್ ಗರ್ಲ್ ಆಲ್ಬಂ ಸಾಂಗ್‌ನಲ್ಲಿ ನನ್ನನ್ನು ಮೊದಲ ಬಾರಿ ನೋಡಿದ್ದರು. ನನ್ನನ್ನು ಇಷ್ಟಪಟ್ಟಿರುವ ವಿಚಾರವನ್ನು ಅವರ ಮನೆಯವರಿಗೆ ತಿಳಿಸಿದ್ದರು. ನಂತರ ಯಶಸ್ವಿ ಪೋಷಕರು ನನಗೂ ಹುಡುಗನನ್ನು ಹುಡುಕುತ್ತಿರುವ ವಿಷಯ ತಿಳಿದು ಮದುವೆ ಪ್ರಸ್ತಾಪ ಮಾಡಿದರು. ನಂತರ ನಿಶ್ಚಿತಾರ್ಥ ಮಾಡಿಕೊಂಡೆವುʼʼ ಎಂದು ಈ ಹಿಂದೆ ಅದಿತಿ ಹೇಳಿಕೊಂಡಿದ್ದರು.

ಇದನ್ನೂ ಓದಿ | Actor Siddharth | ʻಹೃದಯದ ರಾಜಕುಮಾರಿʼ ಅದಿತಿ ಎಂದು ವಿಶ್‌ ಮಾಡಿದ ನಟ ಸಿದ್ಧಾರ್ಥ್‌: ವೈರಲ್‌ ಆಯ್ತು ಪೋಸ್ಟ್‌!

‘ಧೈರ್ಯಂ’, ‘ಬಜಾರ್’, ‘ಸಿಂಗ’, ‘ರಂಗನಾಯಕಿ’, ‘ಬ್ರಹ್ಮಾಚಾರಿ’, ‘ಆನ’ ,‘ತೋತಾಪುರಿ’, ‘ಗಜಾನನ ಆ್ಯಂಡ್‌ ಗ್ಯಾಂಗ್’, ‘ಓಲ್ಡ್ ಮಾಂಕ್’, ‘ಚಾಂಪಿಯನ್’, ‘ತ್ರಿಬಲ್ ರೈಡಿಂಗ್’, ‘ಅಂದೊಂದಿತ್ತು ಕಾಲ’, ‘ಮಾಫಿಯಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಮುಗ್ಧ ನಟನೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಅದಿತಿ ಪ್ರಭುದೇವ ʼಅಲೆಕ್ಸಾʼ ಸಿನಿಮಾ ತೆರೆಗೆ ಬರಬೇಕಾಗಿದೆ. ಅಲೆಕ್ಸಾʼ ಚಿತ್ರೀಕರಣ ಮುಕ್ತಾಯ ಹಂತದಲ್ಲಿದ್ದು, ಹಾಡು ಸೇರಿದಂತೆ ಕೆಲವು ಭಾಗಗಳ ಚಿತ್ರೀಕರಣ ಬಾಕಿ ಇದೆ ಎಂದು ಚಿತ್ರತಂಡ ಈ ಹಿಂದೆ ಮಾಹಿತಿ ನೀಡಿತ್ತು.

ಜೀವ ಅವರು ಈ ಚಿತ್ರದ ನಿರ್ದೇಶಕರಾಗಿದ್ದು, ಇತ್ತೀಚೆಗೆ ಸಾಹಸ ದೃಶ್ಯಗಳ ಶೂಟಿಂಗ್‌ ಕೂಡ ಮಾಡಲಾಗಿತ್ತು. ಅದಿತಿ ಪ್ರಭುದೇವ ಅದ್ಭುತವಾಗಿ ಫೈಟಿಂಗ್‌ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ನವರಸ ನಾಯಕ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ತೋತಾಪುರಿ ಭಾಗ-1 ಸೆ.30ಕ್ಕೆ ವಿಶ್ವಾದ್ಯಂತ ತೆರೆ ಕಂಡು ಮೆಚ್ಚುಗೆಗೆ ಪಾತ್ರವಾಗಿತ್ತು.

ಇದನ್ನೂ ಓದಿ | Alexa Movie: ಅದಿತಿ ಪ್ರಭುದೇವ ಈಗ ತನಿಖಾಧಿಕಾರಿ

Exit mobile version