Site icon Vistara News

Aditi Rao Hydari: ಸಿದ್ಧಾರ್ಥ್ ಪೋಸ್ಟ್‌ ಹಂಚಿಕೊಂಡು ʻಜಸ್ಟ್‌ ಲುಕಿಂಗ್‌ ಲೈಕ್‌ ಎ ವಾವ್‌ʼ ಎಂದ ಅದಿತಿ!

Aditi Rao Hydari post siddharth

ಬೆಂಗಳೂರು: ಅದಿತಿ ರಾವ್ ಹೈದರಿ (Aditi Rao Hydari) ಮತ್ತು ಸಿದ್ಧಾರ್ಥ್ (Siddharth) ಕೆಲವು ಸಮಯದಿಂದ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿಗಳು ಇವೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದು ಹೊಸತೇನಲ್ಲ. ತಮ್ಮ ಸಂಬಂಧವನ್ನು ಇದುವೆರೆಗೂ ಎಲ್ಲಿಯೂ ಜೋಡಿ ಅಧಿಕೃತಗೊಳಿಸಿಲ್ಲ. ಇದೀಗ ಅದಿತಿ ಅವರು ಸಿದ್ಧಾರ್ಥ್ ಅವರ ಒಟ್ಟೂ ಸಿನಿಮಾ ಜರ್ನಿಯ ಹಾಡುಗಳನ್ನು ಒಳಗೊಂಡ ವಿಡಿಯೊವನ್ನು ಡಿಸ್ನಿ ಹಾಟ್‌ಸ್ಟಾರ್‌ ಹಂಚಿಕೊಂಡಿತ್ತು. ಇದನ್ನು ತಮ್ಮ ಸ್ಟೋರಿಯಲ್ಲಿ ಅದಿತಿ ಹಂಚಿಕೊಂಡು ʻʻಜಸ್ಟ್‌ ಲುಕಿಂಗ್‌ ಲೈಕ್‌ ಎ ವಾವ್‌ʼʼಎಂದು ಬರೆದುಕೊಂಡಿದ್ದಾರೆ.

ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ʻಮಹಾ ಸಮುದ್ರಮ್‌ʼ ಚಿತ್ರದಲ್ಲಿ ಸಿದ್ಧಾರ್ಥ್‌ ಮತ್ತು ಅದಿತಿ ಒಟ್ಟಾಗಿ ಅಭಿನಯಿಸಿದ್ದರು. ಅಲ್ಲಿಂದ ಈ ಜೋಡಿ ಮಧ್ಯೆ ಆಪ್ತತೆ ಹೆಚ್ಚಾಗಿತ್ತು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದರು. ಈ ಮೊದಲು ಅದಿತಿ ರಾವ್​ ಹೈದರಿ ಅವರು ನಟ ಸತ್ಯದೀಪ್​ ಮಿಶ್ರಾ ಜತೆ ಮದುವೆ ಆಗಿದ್ದರು. ಆದರೆ 2013ರಲ್ಲಿ ಅವರು ವಿಚ್ಛೇದನ ಪಡೆದರು. ಅದೇ ರೀತಿ, ಸಿದ್ದಾರ್ಥ್​ ಕೂಡ ಮೇಘನಾ ನಾರಾಯಣ್​ ಜತೆ 2003ರಲ್ಲಿ ಮದುವೆಯಾಗಿ 2007ರಲ್ಲಿ ಡಿವೋರ್ಸ್​ ಪಡೆದರು.

ಅರುಣ್ ಕುಮಾರ್ ನಿರ್ದೇಶನದ ಚಿತ್ತಾ ಚಿತ್ರದಲ್ಲಿ ಸಿದ್ಧಾರ್ಥ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ನಿಮಿಷಾ ಸಜಯನ್, ಅಂಜಲಿ ನಾಯರ್ ಮತ್ತು ಸಹಸ್ರ ಶ್ರೀ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಟಕಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸಿದ್ಧಾರ್ಥ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮುಂದೆ ನಟ ಎಸ್ ಶಂಕರ್ ನಿರ್ದೇಶನದ ಇಂಡಿಯನ್ 2 ಚಿತ್ರದಲ್ಲಿ ಕಮಲ್ ಹಾಸನ್ ಜತೆಗೆ ಕಾಣಿಸಿಕೊಳ್ಳಲು ಸಹ ಸಿದ್ಧರಾಗಿದ್ದಾರೆ.

ಸಿದ್ಧಾರ್ಥ್ ಇಂಡಿಯನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್‌ ಸಿನಿಮಾದಲ್ಲಿ ಸಿದ್ಧಾರ್ಥ್‌ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್‌ ಹಾಗೂ ಸಿದ್ಧಾರ್ಥ್‌ ಒಟ್ಟಿಗೆ ಕೆಲಸ ಮಾಡುವಂತಾಗಿದೆ.

ಇದನ್ನೂ ಓದಿ: Aditi Rao Hydari: ʻಲವ್ಲಿ ಜೋಡಿ’ ಎನ್ನುತ್ತಿದ್ದಂತೆ ನಾಚಿ ನೀರಾದ ಅದಿತಿ ರಾವ್ ಹೈದರಿ

ಮತ್ತೊಂದೆಡೆ, ಅದಿತಿ ರಾವ್ ಹೈದರಿ ಕೊನೆಯದಾಗಿ ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶಿಸಿದ ಜುಬಿಲಿ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಂಡರು. ಈ ಸಿರೀಸ್‌ನಲ್ಲಿ ಅಪರಶಕ್ತಿ ಖುರಾನಾ, ವಾಮಿಕಾ ಗಬ್ಬಿ, ಸಿದ್ದಾಂತ್ ಗುಪ್ತಾ ಮತ್ತು ಇನ್ನೂ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಮುಂದಿನ ಸಂಜಯ್ ಲೀಲಾ ಬನ್ಸಾಲಿಯವರ ನೆಟ್‌ಫ್ಲಿಕ್ಸ್ ಸಿರೀಸ್‌ ಹೀರಾಮಂಡಿಯಲ್ಲಿ ಸೋನಾಕ್ಷಿ ಸಿನ್ಹಾ, ಮನಿಶಾ ಕೊಯಿರಾಲಾ ಮತ್ತು ಇನ್ನೂ ಅನೇಕರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಕಜ್ರಿ ಬಬ್ಬರ್ ನಿರ್ದೇಶನದ ಲಯನೆಸ್ ಎಂಬ ಇಂಗ್ಲಿಷ್ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ.

Exit mobile version