Site icon Vistara News

Aditi Rao Hydari: ಸಿದ್ಧಾರ್ಥ್ ಜತೆಗಿನ ಸಂಬಂಧದ ವದಂತಿಗಳ ಬೆನ್ನಲ್ಲೇ ಅನಾರ್ಕಲಿಯಂತಹ ಪ್ರೀತಿ ಇನ್ನೂ ಇದೆ ಎಂದ ಅದಿತಿ ರಾವ್ ಹೈದರಿ!

Aditi Rao Hydari says that there is still love like Anarkali behind the rumors of her relationship with Siddharth

ಬೆಂಗಳೂರು: `ತಾಜ್​: ಡಿವೈಡೆಡ್​​ ಬೈ ಬ್ಲಡ್​’ (Taj: Divided By Blood) ವೆಬ್​ ಸಿರೀಸ್‌ನಲ್ಲಿ ಅನಾರ್ಕಲಿ ಪಾತ್ರದಲ್ಲಿ ಅದಿತಿ ರಾವ್ ಹೈದರಿ (Aditi Rao Hydari) ನಟಿಸಲು ಸಿದ್ಧರಾಗಿದ್ದಾರೆ. ಜೀ 5ನಲ್ಲಿ ಸಿರೀಸ್‌ ಮೊದಲ ಸೀಸನ್ ಮಾರ್ಚ್ 3, 2023 ರಂದು ಪ್ರೀಮಿಯರ್ ಆಗಲಿದೆ. ಸಿರೀಸ್‌ನಲ್ಲಿ ನಾಸಿರುದ್ದೀನ್ ಶಾ (Naseeruddin Shah) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ಸಿದ್ಧಾರ್ಥ್ (siddharth) ಜತೆಗಿನ ಸಂಬಂಧದ ವದಂತಿಗಳ ನಡುವೆ ಅದಿತಿ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಸಿರೀಸ್‌ ಕುರಿತು ಮಾತನಾಡಿದ ನಟಿ ʻಕಥೆಯ ಹೊಸ ದೃಷ್ಟಿಕೋನದ ಬಗ್ಗೆ ನಾನು ತುಂಬಾ ಉತ್ಸುಕನಾಗಿರುವೆʼʼ ಎಂದು ಮಾಧ್ಯಮದವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಅದಿತಿ ರಾವ್ ಹೇಳಿದ್ದೇನು?

‘ಅನಾರ್ಕಲಿ ದುರಂತ ನಾಯಕಿಯಾಗಿರಲಿಲ್ಲ’!
“ನಾವು (ಮೊಘಲರ) ಕಥೆಯೊಂದಿಗೆ ಹೆಚ್ಚು ಸಾಂಸ್ಕೃತಿಕವಾಗಿ ಸಂಪರ್ಕ ಹೊಂದಿದ್ದೇವೆ. ನಿರ್ದೇಶಕ ರೊನಾಲ್ಡ್ ಸ್ಕಾಲ್ಪೆಲೋ ಯಾವಾಗಲೂ ‘ಅನಾರ್ಕಲಿ ದುರಂತ ನಾಯಕಿ’ ಎಂದು ಹೇಳುತ್ತಿರುತ್ತಾರೆ. ಒಂದು ಹಂತದಲ್ಲಿ ನಾನು ಇಲ್ಲ ಎಂದಿದ್ದೆ. ಅವಳು ನಮಗೆ ದುರಂತ, ಆದರೆ ಅವಳಿಗೆ ಅವಳು ದುರಂತ ನಾಯಕಿ ಅಲ್ಲ. ಗೋಡೆಯೊಂದರಲ್ಲಿ ಬಂಧಿಯಾಗಿರುವಾಗ ತನ್ನ ಪ್ರೀತಿಗೆ ಬೆಂಬಲವಾಗಿ ನಿಂತಿರುವ ನಿರ್ಭೀತ ಹುಡುಗಿ ಅವಳು. ಎಂತಹ ಅದ್ಭುತ ಹುಡುಗಿ, ಮತ್ತು ಅದು ಎಂತಹ ಪ್ರೀತಿ ʼಎಂದರು.

ಇದನ್ನೂ ಓದಿ: Aditi Rao Hydari: ಅದಿತಿ ರಾವ್ ಹೈದರಿ, ಯಾರು ಗೊತ್ತಾ ಈ ನಟಿ?

‘ಅನಾರ್ಕಲಿಯಂತಹ ಪ್ರೀತಿ ಇನ್ನೂ ಇದೆ

ನಿಜ ಜೀವನದಲ್ಲಿ ಅಂತಹ ಪ್ರೀತಿ ಇದೆಯಾ ಎಂಬ ಪ್ರಶ್ನೆಗೆ ನಟಿ ಉತ್ತರಿಸಿ ʻʻಸಿನಿಮಾ ಎಲ್ಲಿಂದಲೋ ಬರುತ್ತದೆ. ಪ್ರೀತಿ (ಹಾಗೆ) ಇನ್ನೂ ಅಸ್ತಿತ್ವದಲ್ಲಿದೆ ಎಂದು ನಾನು ನಂಬುತ್ತೇನೆʼʼಎಂದರು. ನಟ ಸಿದ್ಧಾರ್ಥ್ ಜತೆಗಿನ ಸಂಬಂಧದ ವದಂತಿಗಳ ನಡುವೆ ಅದಿತಿ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಜೋಡಿ ಒಟ್ಟಿಗೆ ಡ್ಯಾನ್ಸ್‌ ಮಾಡಿರುವ ವಿಡಿಯೊ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ನಟಿ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Actor Siddharth | ಮುಂಬೈ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಸಿದ್ಧಾರ್ಥ್‌-ಅದಿತಿ ರಾವ್ ಹೈದರಿ: ಫೋಟೊ ವೈರಲ್‌

ಬಿಡುವಿನ ಸಮಯದಲ್ಲಿ ಒಟ್ಟಾಗಿ ಕಾಲ ಕಳೆದಿರುವ ಅದಿತಿ ರಾವ್​ ಹೈದರಿ ಮತ್ತು ಸಿದ್ದಾರ್ಥ್​ ಅವರು ‘ಟಮ್​ ಟಮ್​..’ ಹಾಡಿಗೆ ಹೆಜ್ಜೆ ಹಾಕಿದ್ದರು. ಶೀಘ್ರದಲ್ಲೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ʻಮಹಾ ಸಮುದ್ರಮ್‌ʼ ಚಿತ್ರದಲ್ಲಿ ಸಿದ್ಧಾರ್ಥ್‌ ಮತ್ತು ಅದಿತಿ ಒಟ್ಟಾಗಿ ಅಭಿನಯಿಸಿದ್ದರು. ಅಲ್ಲಿಂದ ಈ ಜೋಡಿ ಮಧ್ಯೆ ಆಪ್ತತೆ ಹೆಚ್ಚಾಗಿತ್ತು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದರು. ಈ ಹಿಂದೆ ರಾಜಕುಮಾರ್‌ ರಾವ್‌ ಅವರ ಮದುವೆಯಲ್ಲಿ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್‌ ಹುಟ್ಟುಹಬ್ಬಕ್ಕೆ ಅತ್ಯಂತ ಪ್ರೀತಿಯಿಂದ ಹಾರೈಸಿದ್ದರು ಅದಿತಿ.

Exit mobile version