Site icon Vistara News

Adivi Sesh | ಅಡಿವಿ ಶೇಷ್ ನಟನೆಯ ʻಗೂಢಚಾರಿ-2ʼ ಫಸ್ಟ್ ಲುಕ್ ರಿಲೀಸ್!

Adivi Sesh

ಬೆಂಗಳೂರು: ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ ‘ಗೂಢಚಾರಿ’ ಅಡಿವಿ ಶೇಷ್ (Adivi Sesh) ನಟನೆಯಲ್ಲಿ ಮೂಡಿ ಬಂದ ಆ್ಯಕ್ಷನ್ ಆ್ಯಂಡ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಸಿನಿಮಾ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಗಳಿಕೆ ಕಂಡಿತ್ತು. ಇದೀಗ ಈ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಮತ್ತೊಮ್ಮೆ ತೆರೆ ಮೇಲೆ ಕಮಾಲ್ ಮಾಡಲು ಸಜ್ಜಾಗಿದೆ. ‘ಗೂಢಚಾರಿ 2’ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಜನವರಿ 9ರಂದು ಪ್ರಿ ವಿಷನ್ ವಿಡಿಯೊ ಬಿಡುಗಡೆಯಾಗುತ್ತಿದೆ.

ಮೇಜರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸೂಪರ್ ಸಕ್ಸಸ್ ಕಂಡಿದ್ದು, ಭಾರತದಾದ್ಯಂತ ಇವರ ಸಿನಿಮಾಗಳಿಗೆ ಅಭಿಮಾನಿಗಳಿದ್ದಾರೆ. ಶಶಿ ಕಿರಣ್ ಟಿಕ್ಕ ನಿರ್ದೇಶನದಲ್ಲಿ ಮೂಡಿ ಬಂದ ‘ಗೂಢಚಾರಿ’ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಬಂದ ಪ್ಯಾನ್ ಇಂಡಿಯಾ ಸಿನಿಮಾ ಮೇಜರ್ ಕೂಡ ಸೂಪರ್ ಸಕ್ಸೆಸ್ ಕಂಡಿದೆ. ಇತ್ತೀಚೆಗೆ ತೆರೆಕಂಡ ‘ಹಿಟ್ 2’ ಕೂಡ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದು ಇದೀಗ ‘ಗೂಢಚಾರಿ 2’ ಸೀಕ್ವೆಲ್ ಗೆ ರೆಡಿಯಾಗಿದ್ದಾರೆ ಅಡಿವಿ ಶೇಷ್.

ಇದನ್ನೂ ಓದಿ | Adivi Sesh | ಮೇಜರ್‌ ಖ್ಯಾತಿಯ ಅಡವಿ ಶೇಷ್‌ ʻಹಿಟ್‌-2ʼ ಡಿಸೆಂಬರ್‌ 2ಕ್ಕೆ ತೆರೆಗೆ

‘ಗೂಢಚಾರಿ 2’ ’ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರದ ಎಡಿಟರ್ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು AK ಎಂಟ‌ರ್‌ಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ನಡಿ ಟಿಜಿ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ ವಾಲ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಜನವರಿ 9ರಂದು ನವದೆಹಲಿ ಹಾಗೂ ಮುಂಬೈನಲ್ಲಿ ಚಿತ್ರದ ಪ್ರಿ ವಿಷನ್ ವಿಡಿಯೊ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಮೊದಲ ಸೀಕ್ವೆಲ್‌ನಲ್ಲಿದ್ದ ಕಲಾವಿದರ ಜತೆಗೆ ಒಂದಿಷ್ಟು ಹೊಸ ಪಾತ್ರವರ್ಗ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಕಥೆಗೆ ತಕ್ಕಂತೆ ಸಿನಿಮಾ ಮೇಕಿಂಗ್, ತಾಂತ್ರಿಕ ವರ್ಗ, ಆ್ಯಕ್ಷನ್ ಸೀನ್‌ಗಳು ದೊಡ್ಡ ಮಟ್ಟದಲ್ಲಿ ಮೂಡಿ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ | Actor Adivi Sesh | ಪೂಜಾ ಹೆಗ್ಡೆ ಜತೆ ಕಿಸ್‌ ಮಾಡಲ್ಲ: ನಟ ಅಡವಿ ಶೇಷ್‌!

Exit mobile version