Site icon Vistara News

Adivi Sesh | ಮೇಜರ್‌ ಖ್ಯಾತಿಯ ಅಡವಿ ಶೇಷ್‌ ʻಹಿಟ್‌-2ʼ ಡಿಸೆಂಬರ್‌ 2ಕ್ಕೆ ತೆರೆಗೆ

Adivi Sesh (hit-2)

ಬೆಂಗಳೂರು: ‘ಮೇಜರ್’ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ತೆಲುಗು ನಟ ಅಡವಿ ಶೇಷ್ (Adivi Sesh) ಅವರ ‘ಹಿಟ್-2’ ಸಿನಿಮಾ ಡಿಸೆಂಬರ್ 2ರಂದು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಡಾ. ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿದ್ದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಚಿತ್ರದ ನಿರ್ದೇಶಕ ಶೈಲೇಶ್ ಮಾತನಾಡಿ ʻʻ’ಹಿಟ್ 1’ಗೆ ಬಹಳ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು. ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದ ಮೇಲೆ ಹೆಚ್ಚಿನ ಜನತೆ ಚಿತ್ರವನ್ನು ನೋಡಿ, ಮೆಚ್ಚುಗೆ ಸೂಚಿಸಿದ್ದಾರೆ. ಅದರಲ್ಲೂ ಕರ್ನಾಟಕದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸಿನಿಮಾ ನೋಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಆ ಕಾರಣಕ್ಕೆ ಕರ್ನಾಟಕ ಜನತೆ ಆಶೀರ್ವಾದ ಪಡೆಯಲು ನಾವು ಇಲ್ಲಿಗೆ ಬಂದಿದ್ದೇವೆ. ವಿಶಾಖಪಟ್ಟಣದ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕ್ರೈಂ ಘಟನೆಗಳು ಹೇಗೆ ಒಬ್ಬ ಪೊಲೀಸ್ ಆಫೀಸರ್ ನಿದ್ದೆಗೆಡಿಸುತ್ತದೆ. ಆತ ಅದನ್ನು ಹೇಗೆ ಬಗೆಹರಿಸುತ್ತಾನೆ ಎನ್ನುವುದು ‘ಹಿಟ್ 2’ ಸಿನಿಮಾ ಒನ್ ಲೈನ್ ಕಥೆʼʼ ಎಂದು ಹೇಳಿದ್ದಾರೆ.

‘ಹಿಟ್’ ನಲ್ಲಿ ಒಟ್ಟು 7 ಸಿರೀಸ್‌ಗಳಿವೆ ‘ಹಿಟ್ 2’ ನಂತರ ಇನ್ನೂ ಐದು ಸಿರೀಸ್‌ಗಳು ಬರಲಿವೆ. ಪ್ರತಿ ಸಿರೀಸ್‌ನಲ್ಲಿಯೂ ಬೇರೆ ಬೇರೆ ನಟರು ಲೀಡ್‌ನಲ್ಲಿ ನಟಿಸಲಿದ್ದಾರೆ ಎಂದು ನಿರ್ದೇಶಕ ಶೈಲೇಶ್ ಕೊಲನು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | The Kashmir Files | ಆಕ್ರೋಶದ ಬೆನ್ನಲ್ಲೇ ಲ್ಯಾಪಿಡ್‌ ಯುಟರ್ನ್‌, ದಿ ಕಾಶ್ಮೀರ್‌ ಫೈಲ್ಸ್‌ ‘ಅದ್ಭುತ ಸಿನಿಮಾ’ ಎಂದು ಬಣ್ಣನೆ

ನಾಯಕಿ ಮೀನಾಕ್ಷಿ ಚೌಧರಿ ಮಾತನಾಡಿ ʻʻನಾನು ಈ ಚಿತ್ರದಲ್ಲಿ ಆರ್ಯ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಸಿನಿಮಾ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಪ್ರತಿರೂಪ ಎನ್ನಬಹುದು. ಇದು ನನ್ನ ಮೂರನೇ ತೆಲುಗು ಸಿನಿಮಾ. ಖಂಡಿತ ನೀವೆಲ್ಲರೂ ಚಿತ್ರದಲ್ಲಿ ನನ್ನ ಪಾತ್ರವನ್ನು ಎಂಜಾಯ್ ಮಾಡುತ್ತೀರಿ. ಈ ಚಿತ್ರವನ್ನು ನೋಡಿ ಖುಷಿ ಪಡುತ್ತೀರಿ ಎಂಬ ಭರವಸೆ ನನಗಿದೆʼʼ ಎಂದು ಸಂತಸ ಹಂಚಿಕೊಂಡಿದ್ದಾರೆ.

ಅಡವಿ ಶೇಷ್ ಮಾತನಾಡಿ ʻʻನನ್ನ ಲಾಸ್ಟ್ ಐದು ಸಿನಿಮಾಗಳಿಗೆ ಹೈದರಾಬಾದ್‌ ನಂತರ ಹೆಚ್ಚಿನ ಪ್ರೇಕ್ಷಕರ ಪ್ರೀತಿ ಸಿಕ್ಕಿದ್ದು ಬೆಂಗಳೂರಿನಿಂದ. ಮೇಜರ್ ಸಿನಿಮಾ ನಂತರ ಬೆಂಗಳೂರು ನನಗೆ ಎರಡನೇ ಮನೆಯಂತಾಗಿದೆ. ಇಲ್ಲಿಯೇ ಒಂದು ಮನೆ ಖರೀದಿ ಮಾಡಲು ನಾನು ಪ್ಲ್ಯಾನ್ ಮಾಡಿದ್ದೇನೆ. ‘ಹಿಟ್ 2’ ಚಿತ್ರಕ್ಕೆ ನಾನು ಹೊಸ ಎಂಟ್ರಿ. ಒಂದು ಚಿಕ್ಕ ಹಳ್ಳಿಯಲ್ಲಿರುವ ತನ್ನ ಊರಿನಲ್ಲಿ ಏನ್ ಆಗುತ್ತಿದೆ ಎಂದು ಗೊತ್ತೇ ಇಲ್ಲದ ಒಬ್ಬ ಲೇಜಿ ಪೊಲೀಸ್ ಆಫೀಸರ್‌ಗೆ ಒಂದು ದೊಡ್ಡ ಸೀರಿಯಲ್ ಕಿಲ್ಲರ್ ಕೇಸ್ ಸಿಕ್ಕಾಗ ಆತ ಅದನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದು ಈ ಚಿತ್ರದ ಕಥಾಹಂದರ. ಕನ್ನಡದಲ್ಲೂ ‘ಹಿಟ್ 2’ ಸಿನಿಮಾ ಡಬ್ ಆಗಲಿದೆ. ಡಿಸೆಂಬರ್ 2ಕ್ಕೆ ತೆಲುಗಿನಲ್ಲಿ ಮೊದಲು ರಿಲೀಸ್ ಮಾಡಿ ನಂತರ ದಿನಗಳಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಡೇಟ್ ಅನೌನ್ಸ್ ಮಾಡಲಿದ್ದೇವೆʼʼ ಎಂದು ಹೇಳಿದರು.

ಚಿತ್ರದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸಿದ್ದು, ರಾವ್ ರಮೇಶ್, ಶ್ರೀಕಾಂತ್ ಮಗಂಟಿ, ಕೋಮಲಿ ಪ್ರಸಾದ್, ಪೋಸನಿ ಕೃಷ್ಣ ಮುರಳಿ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ವಾಲ್‌ ಪೋಸ್ಟರ್ ಬ್ಯಾನರ್ ನಡಿ ಪ್ರಶಾಂತಿ ತ್ರಿಪಿರನೆನಿ ಚಿತ್ರವನ್ನು ನಿರ್ಮಾಣ ಮಾಡಿದ್ದು, ಮಣಿಕಾಂದನ್ ಎಸ್ ಕ್ಯಾಮೆರಾ ವರ್ಕ್, ಜಾನ್ ಸ್ಟಿವರ್ಟ್ ಎಡುರಿ ಸಂಗೀತ ನಿರ್ದೇಶನ, ಗ್ರಾರಿ ಬಿ.ಎಚ್ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Movie 2022 | ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬರ!

Exit mobile version