Site icon Vistara News

Adivi Sesh | ಅಡಿವಿ ಶೇಷ್ ನಟನೆಯ ʻಗೂಢಚಾರಿ-2ʼ ಪ್ರಿ ವಿಷನ್ ವಿಡಿಯೊ ಔಟ್‌!

adivi sesh

ಬೆಂಗಳೂರು : ‘ಮೇಜರ್’, ‘ಹಿಟ್ 2’ ಮೂಲಕ ಸಾಲು ಸಾಲು ಸಿನಿಮಾಗಳನ್ನು ನೀಡಿರುವ ತೆಲುಗು ನಟ ಅಡಿವಿ ಶೇಷ್ (Adivi Sesh) ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ ‘ಗೂಢಚಾರಿ’ ಸೀಕ್ವೆಲ್‌ನಲ್ಲಿ ಅಡಿವಿ ಶೇಷ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ‘ಗೂಢಚಾರಿ 2’ ಫಸ್ಟ್ ಲುಕ್ ಹಾಗೂ ಪ್ರಿ ವಿಷನ್ ವಿಡಿಯೊ ಬಿಡುಗಡೆಯಾಗಿದೆ.

ಬಿಗ್ ಬಜೆಟ್‌ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರ ಅಧಿಕೃತವಾಗಿ ಸೆಟ್ಟೇರಿದ್ದು ಫಸ್ಟ್ ಲುಕ್ ಹಾಗೂ ಪ್ರಿ ವಿಷನ್ ವೀಡಿಯೊವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಇದನ್ನೂ ಓದಿ | Adivi Sesh | ಅಡಿವಿ ಶೇಷ್ ನಟನೆಯ ʻಗೂಢಚಾರಿ-2ʼ ಫಸ್ಟ್ ಲುಕ್ ರಿಲೀಸ್!

ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರದ ಎಡಿಟರ್ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಚಿತ್ರಕ್ಕೆ ಅಡಿವಿ ಶೇಷ್ ಕಥೆ ಬರೆದಿದ್ದು, ಕಾರ್ತೀಕೇಯ2, ಮೇಜರ್ ಹಾಗೂ ಕಾಶ್ಮೀರಿ ಫೈಲ್ಸ್ ನಂತಹ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಣ ಸಂಸ್ಥೆಗಳು ‘ಗೂಢಚಾರಿ 2’ಗೆ ಬಂಡವಾಳ ಹೂಡುತ್ತಿರುವುದು ವಿಶೇಷ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ ವಾಲ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಮೊದಲ ಸೀಕ್ವೆಲ್ ನಲ್ಲಿದ್ದ ಕಲಾವಿದರ ಜತೆಗೆ ಒಂದಿಷ್ಟು ಹೊಸ ಪಾತ್ರವರ್ಗ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಸದ್ಯದಲ್ಲೇ ಚಿತ್ರದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

ಇದನ್ನೂ ಓದಿ | Adivi Sesh | ಮೇಜರ್‌ ಖ್ಯಾತಿಯ ಅಡವಿ ಶೇಷ್‌ ʻಹಿಟ್‌-2ʼ ಡಿಸೆಂಬರ್‌ 2ಕ್ಕೆ ತೆರೆಗೆ

Exit mobile version