ಬೆಂಗಳೂರು : ಕೆಜಿಎಫ್ ಸಿನಿಮಾದಲ್ಲಿ (KGF 2) ಕುರುಡ ಮುದುಕನ ಪಾತ್ರ ನಿಭಾಯಿಸಿದ ಹಿರಿಯ ನಟ ಕೃಷ್ಣ ಜಿ ರಾವ್ ಆಸ್ಪತ್ರೆಗೆ ಡಿಸೆಂಬರ್ 1 ಗುರುವಾರ ದಾಖಲಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಯಲ್ಲಿ ತೀವ್ರ ನಿಘಾಘಟಕದಲ್ಲಿ ಇರಿಸಲಾಗಿದೆ. ಕೆಜಿಎಫ್ ತಾತ ಎಂದೇ ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣ ಜಿ ರಾವ್ ಈ ಹಿಂದೆ ಅಷ್ಟೇ ಕೆಮಿಸ್ಟ್ರೀ ಆಫ್ ಕರಿಯಪ್ಪ ಸಿನಿಮಾದ ಸಾರಥಿ ಕುಮಾರ್ ನಿರ್ದೇಶನದ ಹೊಸ ಸಿನಿಮಾ ʼನ್ಯಾನೋ ನಾರಾಯಣಪ್ಪʼ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.
ಇದನ್ನೂ ಓದಿ | Forced conversion | ಮಂಗಳೂರಿನಲ್ಲಿ ಇಸ್ಲಾಂಗೆ ಹಿಂದೂ ಯುವತಿಯ ಬಲವಂತದ ಮತಾಂತರ ಆರೋಪ, ಕೇಸ್ ದಾಖಲು
ಹತ್ತು ತಲೆಯುಳ್ಳ ರಾವಣನ ಅವತಾರದಲ್ಲಿ ರಿಲೀಸ್ ಆಗಿರುವ ಫಸ್ಟ್ ಲುಕ್ನಲ್ಲಿ ಕೃಷ್ಣ ಜಿ ರಾವ್ ಕಿರೀಟ, ಗ್ಲಾಸ್ ಹಾಕಿ ಫೋಸ್ ಕೊಟ್ಟಿದ್ದು, ನ್ಯಾನೋ ಕಾರು ಕೂಡ ಹೈಲೈಟ್ ಆಗಿತ್ತು. ಕೆಜಿಎಫ್ ನಂತರ ಕೃಷ್ಣ ಜಿ ರಾವ್ ಅವರಿಗೆ ಹಲವಾರು ಅವಕಾಶಗಳು ಒದಗಿ ಬಂದವು. ಇದೀಗ ಈ ಚಿತ್ರದ ಜತೆ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿಯೂ ಅವಕಾಶ ಸಿಕ್ಕಿದೆ. ಕೆಜಿಎಫ್ 2 ಬಿಡುಗಡೆಯ ನಂತರ 15 ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ | ನ್ಯಾನೋ ನಾರಾಯಣಪ್ಪ | ರಾವಣನ ಅವತಾರದಲ್ಲಿ ಕೆಜಿಎಫ್ ತಾತ