ವಾಷಿಂಗ್ಟನ್: ನೀಲಿ ಚಿತ್ರಗಳ ತಾರೆ ಸೋಫಿಯಾ ಲಿಯೋನ್ (Sophia Leone) ಅನುಮಾನಾಸ್ಪದವಾಗಿ ಅಮೆರಿಕದ ಅಪಾರ್ಟ್‌ಮೆಂಟ್‌ನಲ್ಲಿ (ಮಾ.1) ನಿಧನರಾಗಿದ್ದಾರೆ ಎಂದು ಅವರ ಮಲತಂದೆ ಮೈಕ್ ರೊಮೆರೊ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಸೋಫಿಯಾ ಲಿಯೋನ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ. ಲಿಯೋನ್‌ಗೆ ಕೇವಲ 26 ವರ್ಷ ವಯಸ್ಸಾಗಿತ್ತು. ಇದೀಗ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಮಾರ್ಚ್ 1ರಂದು ಅಮೆರಿಕಾದಲ್ಲಿ ಸೋಫಿಯಾ ಲಿಯೋನ್ ಅನುಮಾನಾಸ್ಪದವಾಗಿ ಅಪಾರ್ಟ್‌ಮೆಂಟ್‌ನಲ್ಲಿ ನಿಧನರಾದರು. ಸೋಫಿಯಾ ಅವರ ಹಠಾತ್ ನಿಧನಕ್ಕೆ ಕುಟುಂಬ ಆಘಾತಕ್ಕೊಳಗಾಗಿದೆ. ಆದರೆ ಕುಟುಂಬಸ್ಥರು ಸೋಫಿಯಾ ಲಿಯೋನ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಪೊಲೀಸರು ಹಲವು ವಿಚಾರದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸೋಫಿಯಾ ಲಿಯೋನ್ ಮಾಡೆಲಿಂಗ್ ಏಜೆನ್ಸಿ, ಕೂಡ ಸುದ್ದಿಯನ್ನು ದೃಢಪಡಿಸಿದೆ “ನಮ್ಮ ಪ್ರೀತಿಯ ಸೋಫಿಯಾ ಲಿಯೋನ್ ಅವರ ಮರಣದ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. RIP ಸ್ವೀಟ್ ಏಂಜೆಲ್ʼʼಎಂದು ಬರೆದುಕೊಂಡಿದೆ.
ಇದನ್ನೂ ಓದಿ: Big Boss OTT 2: ಬಿಗ್‌ಬಾಸ್ ಮನೆ ಇನ್ನು ಫುಲ್ ಬಿಸಿ; ಯಾಕಂದ್ರೆ ಬರ್ತಿದ್ದಾಳೆ ನೀಲಿ ತಾರೆ ಮಿಯಾ ಖಲೀಫಾ!
ಸೋಫಿಯಾ ಲಿಯೋನ್ 18ನೇ ವಯಸ್ಸಿನಲ್ಲಿಯೇ ನೀಲಿ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದರು.
ಸೋಫಿಯಾ ಲಿಯೋನ್ 1997ರ ಜೂನ್ 10ರಂದು ಅಮೆರಿಕದ ಮಿಯಾಮಿಯಲ್ಲಿ ಜನಿಸಿದರು. ಕಾಗ್ನಿ ಲಿನ್ ಕಾರ್ಟರ್, ಜೆಸ್ಸಿ ಜೇನ್ ಮತ್ತು ಥೈನಾ ಫೀಲ್ಡ್ಸ್ ನಂತರ ಈ ಉದ್ಯಮದಿಂದ ಪ್ರಸಕ್ತ ವರ್ಷ ನಾಲ್ಕನೇ ಮರಣ ಇದಾಗಿದೆ.