ಆನೇಕಲ್: ನಂದಮೂರಿ ತಾರಕ ರತ್ನ (Taraka Ratna) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ ಮೂರು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತಾರಕ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಾಣುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದೀಗ ತಾರಕ ರತ್ನ ಆರೋಗ್ಯದ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ಬಗ್ಗೆ ಬಿಟ್ಟುಕೊಡುತ್ತಿಲ್ಲ.
ನಾರಾಯಣ ಹೃದಯಾಲಯ ಆಸ್ಪತ್ರೆಯ ಐಸಿಯುನಲ್ಲಿ ನಂದಮೂರಿ ತಾರಕ ರತ್ನ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾರಕ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಾಣುತ್ತಿದ್ದು, ಕಣ್ಣು ಮಿಟುಕಿಸುವುದು, ದೇಹ ಅಲುಗಾಟ ಕಂಡು ಬಂದಿತ್ತು. ಇಂದು ಸಹ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ನಿಮಾನ್ಸ್ ವೈದ್ಯರ ತಂಡದಿಂದಲೂ ಮಾರ್ಗದರ್ಶನ ನೀಡಲಾಗುತ್ತಿದೆ. ಸದ್ಯ ಯಾವುದೇ ಹೆಲ್ತ್ ಬುಲೆಟಿನ್ ವೈದ್ಯರು ರಿಲೀಸ್ ಮಾಡಿಲ್ಲ. ತಾರಕ ರತ್ನ ಆರೋಗ್ಯದ ಬಗ್ಗೆ ಮಾಹಿತಿ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಬಿಟ್ಟುಕೊಡುತ್ತಿಲ್ಲ. ಕುಟುಂಬಸ್ಥರು ಹಾಗೂ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: Taraka Ratna: ತಾರಕ ರತ್ನ ಅಪಾಯದಿಂದ ಸಂಪೂರ್ಣ ಹೊರ ಬಂದಿಲ್ಲ: ಸಚಿವ ಸುಧಾಕರ್
ಇದನ್ನೂ ಓದಿ: Taraka Ratna: ನಂದಮೂರಿ ತಾರಕ ರತ್ನ ಬೆಂಗಳೂರಿಗೆ ಶಿಫ್ಟ್: ನಟ ಬಾಲಕೃಷ್ಣ ಹೇಳಿದ್ದೇನು?
ಆರೋಗ್ಯ ಸಚಿವ ಡಾ ಕೆ ಸುಧಾಕರ್ ಈಗಾಗಲೇ ʻʻತಾರಕ ಅವರು ಅಪಾಯದಿಂದ ಸಂಪೂರ್ಣ ಹೊರ ಬಂದಿಲ್ಲʼʼ ಎಂದು ಹೇಳಿಕೆ ನೀಡಿದ್ದಾರೆ. ಜನವರಿ 27ರ ಶುಕ್ರವಾರ ತಾರಕ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿನಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.