ನಟಿ-ನಿರ್ಮಾಪಕಿ ನಿಹಾರಿಕಾ ಕೊನಿಡೇಲಾ (Niharika Konidela) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಚೈತನ್ಯ ಜೊನ್ನಲಗಡ್ಡ ಅವರನ್ನು ವಿವಾಹವಾದ ಎರಡು ವರ್ಷಗಳ ನಂತರ, ದಂಪತಿ ಇತ್ತೀಚೆಗೆ ವಿಚ್ಛೇದನ ಪಡೆದುಕೊಂಡಿದ್ದರು. ಈ ಸುದ್ದಿ ಟ್ರೆಂಡಿಂಗ್ ವಿಷಯವಾಗಿತ್ತು. ಬೇರೆಯಾಗಿರುವುದರ ಬಗ್ಗೆ ಇವರು ನಿಖರವಾದ ಕಾರಣವನ್ನು ಬಹಿರಂಗಪಡಿಸಲಾಗಿಲ್ಲವಾದರೂ, ವಿಚ್ಛೇದನದ ಬಳಿಕ ನಿಹಾರಿಕಾ ತಮ್ಮ ಕೆಲಸಗಳಲ್ಲಿ ಗಮನ ಹರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದೀಗ ಸಿನಿಮಾ ಕಡೆ ನಟಿ ಆಸಕ್ತಿ ವಹಿಸಿದ್ದಾರೆ.
ವರದಿಗಳ ಪ್ರಕಾರ ನಟಿ ಮುಂಬರುವ ಚಿತ್ರಕ್ಕಾಗಿ ಯುವ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ನಿರ್ಮಾಪಕಿಯಾಗಿಯೂ ತನ್ನ ಛಾಪು ಮೂಡಿಸಿರುವ ನಟಿ, ಹಲವಾರು ವೆಬ್ ಸಿರೀಸ್‌ನಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ನಟಿ ಹೊಸ ಪ್ರಾಜೆಕ್ಟ್‌ಗೆ ಒಪ್ಪಿಗೆ ಸೂಚಿಸಿದ್ದು, ಸ್ಕ್ರಿಪ್ಟ್ ಕೂಡ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಇನ್ನೊಂದು ವರದಿ ಪ್ರಕಾರ ನಟಿ ಮತ್ತೊಮ್ಮೆ ಕ್ಯಾಮೆರಾ ಮುಂದೆ ಬರಲು ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ವಿರೋಧದ ವದಂತಿಗಳ ನಡುವೆಯೂ, ನಿಹಾರಿಕಾ ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವಂತೆ ತೋರುತ್ತಿದೆ.
ಚಿರಂಜೀವಿ ಸಹೋದರ ನಾಗಬಾಬು ಅವರ ಪುತ್ರಿ ನಿಹಾರಿಕಾ ಮತ್ತು ಚೈತನ್ಯ ಜೋನ್ನಲಗಡ್ಡ ಅವರ ಮದುವೆ 2020ರಲ್ಲಿ ನಡೆದಿತ್ತು. ಮದುವೆಯಾದ ಎರಡು ವರ್ಷಕ್ಕೆ ಸಂಸಾರವು ಹಾಳಾಗಿತ್ತು. ಅವರಿಬ್ಬರು ಪರಸ್ಪರ ಡಿವೋರ್ಸ್ ಬಯಸಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಲವು ದಿನಗಳಿಂಗದ ನಿಹಾರಿಕಾ ಕೊನಿಡೆಲಾ ಹಾಗೂ ಚೈತನ್ಯ ಜೋನ್ನಲಗಡ್ಡ ಅವರು ಪರಸ್ಪರ ದೂರವಾಗಿದ್ದರು. ಜೂನ್ 5ರಂದು ಕೋರ್ಟ್ ಇವರಿಬ್ಬರಿಗೂ ಡಿವೋರ್ಸ್ ನೀಡಿದೆ.
ಇದನ್ನೂ ಓದಿ: Niharika Konidela: ನಿಹಾರಿಕಾ ದಾಂಪತ್ಯದಲ್ಲಿ ಬಿರುಕು ಪಕ್ಕಾ ಅಂದ್ರು ನೆಟ್ಟಿಗರು; ಫೋಟೊದಿಂದಾಗಿ ಹೆಚ್ಚಾಯ್ತು ಗಾಸಿಪ್!
‘ಒಕ ಮನಸು’, ‘ಸೂರ್ಯಕಾಂತಂ’, ‘ಹ್ಯಾಪಿ ವೆಡ್ಡಿಂಗ್’ ಮುಂತಾದ ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ. 2015ರಲ್ಲಿ ಅವರು ‘ಪಿಂಕ್ ಎಲಿಫೆಂಟ್ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದರು. ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಮುಖ್ಯವಾದೊಂದು ಪಾತ್ರ ಮಾಡುತ್ತಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಸಾಯಿ ಪಲ್ಲವಿ ಬಣ್ಣ ಹಚ್ಚುತ್ತಾರೆ ಎಂದು ಈ ಮೊದಲು ಗಾಸಿಪ್ ಹಬ್ಬಿತ್ತು. ಆದರೆ ಆ ಪಾತ್ರ ಮಾಡಲು ಸಾಯಿ ಪಲ್ಲವಿ ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಈಗ ಅದೇ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.