ಬೆಂಗಳೂರು: ನಟಿ ಶ್ರುತಿ ಹಾಸನ್ ‘ಸಲಾರ್’ ಸಿನಿಮಾ (Salaar Movie) ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಮಾರ್ಚ್ 3 ರಿಂದ ಇಡೀ ಚಿತ್ರತಂಡ ಯುರೋಪ್‌ನತ್ತ ಪ್ರಯಾಣ ಬೆಳೆಸಲಿದೆ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಶನ್ ಈ ಸಿನಿಮಾ ಹಲವು ದಿನಗಳ ಕಾಲ ಯುರೋಪ್‌ನಲ್ಲಿ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಹೈದರಾಬಾದ್ ಸೇರಿದಂತೆ ಹಲವು ಕಡೆ ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಯುರೋಪ್‌ನಲ್ಲಿ ಮಹತ್ವದ ದೃಶ್ಯಗಳನ್ನು ಸೆರೆ ಹಿಡಿಯಲಿದೆ.
ಈಗಾಗಲೇ ತಮ್ಮ ಭಾಗದ ಶೂಟಿಂಗ್ನ ಪೂರ್ಣಗೊಳಿಸಿರುವ ಬಗ್ಗೆ ಶ್ರುತಿ ಹಾಸನ್ ಮಾಹಿತಿ ನೀಡಿದ್ದಾರೆ. ಸೆಟ್‌ನಲ್ಲಿರುವ ಫೋಟೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡು ಸಿನಿಮಾ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.ಶ್ರುತಿ ಹಾಸನ್ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಸಿನಿಮಾಟೋಗ್ರಾಫರ್ ಭುವನ್ ಗೌಡ ಜತೆಗಿನ ಫೋಟೊ ವೈರಲ್ ಆಗಿದೆ.
ʻಸಲಾರ್’ನಲ್ಲಿ ಶ್ರುತಿ ಹಾಸನ್ ಅವರು ಆದ್ಯ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಪ್ರಭಾಸ್ ಜೊತೆ ಅವರು ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಜಗಪತಿ ಬಾಬು ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.
ಶ್ರುತಿ ಹಾಸನ್ ಪೋಸ್ಟ್ ಹಂಚಿಕೊಂಡಿದ್ದು ʻʻಸಲಾರ್‌ನಲ್ಲಿ ನನ್ನ ಭಾಗದ ಶೂಟಿಂಗ್ ಪೂರ್ಣಗೊಂಡಿದೆ. ಈ ವಿಶೇಷ ತಂಡದೊಂದಿಗೆ ಕೆಲಸ ಮಾಡಿರುವುದು ತುಂಬಾ ಸಂತೋಷಕರವಾಗಿತ್ತು, ಅದು ಸಕಾರಾತ್ಮಕತೆಯಿಂದ ತುಂಬಿತ್ತು ಮತ್ತು ಕೊನೆಯಲ್ಲಿ ಕುಟುಂಬದಂತೆ ಭಾಸವಾಗಿದೆʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Actor Prabhas | ʻಸಲಾರ್ʼ ಬಗ್ಗೆ ಹೊಸ ಅಪ್‌ಡೇಟ್: ನಿಜಾನಾ ಅಂತಿದ್ದಾರೆ ಫ್ಯಾನ್ಸ್!
‘ಸಲಾರ್’ ಸಿನಿಮಾ ಕನ್ನಡದ ‘ಉಗ್ರಂ’ ಚಿತ್ರದ ರಿಮೇಕ್ ಎಂದು ಹೇಳಲಾಗಿತ್ತು. ಆದರೆ, ಇದನ್ನು ಪ್ರಶಾಂತ್ ನೀಲ್ ಒಪ್ಪಿಕೊಂಡಿಲ್ಲ. ಪ್ರಭಾಸ್ ಅವರು ‘ಸಲಾರ್’ ಮಾತ್ರವಲ್ಲದೆ ಇನ್ನೂ ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಇದ್ದಾರೆ. ಪ್ರಭಾಸ್ ಜೊತೆ ಕನ್ನಡದ ಮತ್ತೋರ್ವ ನಾಯಕ ಪ್ರಮೋದ್ ಕೂಡ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೇ, ಯಶ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.