ಬೆಂಗಳೂರು: ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ನಂತರ ಬಾಲಿವುಡ್ ನಟಿ ಕಾಜೋಲ್ ಅವರ ಡೀಪ್‌ಫೇಕ್ ವಿಡಿಯೊ ಇಂಟರ್‌ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಕ್ಲಿಪ್‌ನಲ್ಲಿ, ಕಾಜೋಲ್‌ನ ಮುಖವನ್ನು ಬಳಸಿಕೊಂಡು ಮಹಿಳೆಯೊಬ್ಬರು ಕ್ಯಾಮೆರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವಂತೆ ಕಂಡಿದೆ. “ಗೆಟ್ ರೆಡಿ ವಿತ್ ಮಿ’ ಎನ್ನುವ ಟಿಕ್‌ಟಾಕ್‌ನ ಟ್ರೆಂಡ್‌ಗಾಗಿ ಇಂಗ್ಲಿಷ್ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ನರ್ ರೋಸಿ ಬ್ರಿನ್ ಅವರ ವಿಡಿಯೊಗೆ ಕಾಜೋಲ್ ಅವರ ಮುಖವನ್ನು ಡೀಪ್‌ಫೇಕ್ ಮಾಡಲಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ನಟ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೊ ಆತಂಕ ಸೃಷ್ಟಿಸಿತ್ತು. “ಗೆಟ್ ರೆಡಿ ವಿತ್ ಮಿ’ ಎನ್ನುವ ಟಿಕ್‌ಟಾಕ್‌ನ ಟ್ರೆಂಡ್‌ಗಾಗಿ ಇಂಗ್ಲಿಷ್ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ನರ್ ರೋಸಿ ಬ್ರಿನ್ ಅವರ ವಿಡಿಯೊಗೆ ಕಾಜೋಲ್ ಅವರ ಮುಖವನ್ನು ಡೀಪ್‌ಫೇಕ್ ಮಾಡಲಾಗಿದೆ. ಇದು ತಮ್ಮದೇ ವಿಡಿಯೊ ಎಂದು ರೋಸಿ ಅವರು ಖಚಿತಪಡಿಸಿದ್ದಾರೆ ಎಂದು ‘ದಿ ಕ್ಮಿಂಟ್’ ಹಾಗೂ “ಬೂಮ್‌ಲೈವ’ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಕಾಜೋಲ್ ನಟಿ ಕ್ಯಾಮೆರಾದಲ್ಲಿ ತನ್ನ ಡ್ರೆಸ್ ಬದಲಾಯಿಸುತ್ತಿರುವಂತೆ ಕಾಣುವಂತೆ ಮಾಡಲಾಗಿದೆ.
ಇತ್ತೀಚೆಗೆ, ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವೀಡಿಯೊ ಬಗ್ಗೆ ನಟರಾದ ಅಮಿತಾಭ್ ಬಚ್ಚನ್, ಕೀರ್ತಿ ಸುರೇಶ್, ಮೃಣಾಲ್ ಠಾಕೂರ್, ಇಶಾನ್ ಖಟ್ಟರ್ ಮತ್ತು ನಾಗ ಚೈತನ್ಯ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆಂಗ್ಲೋ ಇಂಡಿಯನ್ ಯುವತಿ ಝರಾ ಪಟೇಲ್ (Zara Patel) ಅವರ ಹಾಟ್ ವಿಡಿಯೊಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗಿತ್ತು.
ಇದನ್ನೂ ಓದಿ: ಪ್ರೀತಿ ಒಪ್ಪದ ಯುವತಿ ಫೋಟೊ ಅಶ್ಲೀಲವಾಗಿ ಎಡಿಟ್ ಮಾಡಿದ ಬೆಳಗಾವಿ ಯುವಕ; ಡೀಪ್‌ಫೇಕ್ ಕೇಸ್!
ಕೇಂದ್ರ ಸಚಿವರಿಂದಲೂ ವಿರೋಧ
ವೈರಲ್ ಆಗುತ್ತಿರುವ ರಶ್ಮಿಕಾ ಅವರ ಡೀಪ್‌ಫೇಕ್ ವಿಡಿಯೊ ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಪ್ರತಿಕ್ರಿಯಿಸಿದ್ದರು. ʼʼಇಂಥ ಅಪಾಯಕಾರಿ ಮತ್ತು ಹಾನಿಕಾರಕ ತಪ್ಪು ಮಾಹಿತಿಗಳನ್ನು ಈ ವೇದಿಕೆಗಳ ಮೂಲಕ ಎದುರಿಸಬೇಕಾಗಿದೆʼʼ ಎಂದು ಅವರು ಹೇಳಿದ್ದರು. ಜತೆಗೆ ರಶ್ಮಿಕಾ ಅವರ ಅಭಿಮಾನಿಗಳೂ ನಟಿಯ ಬೆಂಬಲಕ್ಕೆ ನಿಂತಿದ್ದರು
ಡೀಪ್‌ಫೇಕ್ ಅಂದರೇನು?
‘ಡೀಪ್‌ಫೇಕ್’ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಿದ ವಿಡಿಯೊಗಳು. ಇವು ನೈಜವಾಗಿಯೇ ಕಾಣಿಸುತ್ತವೆ. ಡೀಪ್‌ಫೇಕ್ ವೀಡಿಯೊದಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ವ್ಯಕ್ತಿಗಳ ದೇಹ ಮತ್ತು ಮುಖವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಿ ಜೋಡಿಸಿ ಒರಿಜಿನಲ್ ಆಗಿ ಕಾಣುವಂತೆ ಮಾಡಲಾಗುತ್ತದೆ.