Site icon Vistara News

Pathaan Movie: ʻಪಠಾಣ್‌ʼ ಸಕ್ಸೆಸ್‌ ಬೆನ್ನಲ್ಲೇ ಇಬ್ಬರು ಸೂಪರ್‌ ಸ್ಟಾರ್ಸ್‌ ಬಾಲ್ಯದ ಫೋಟೊ ವೈರಲ್‌!

Pathaan Movie

ಬೆಂಗಳೂರು: ಪಠಾಣ್‌ ಸಿನಿಮಾ (Pathaan Movie) ಈಗಾಗಲೇ 700 ಕೋಟಿ ರೂ. ಗಡಿ ದಾಟಿದೆ. ಜಾನ್‌ ಅಬ್ರಹಾಂ ಪಠಾಣ್‌ ಸಕ್ಸೆಸ್‌ ಬೆನ್ನಲ್ಲೇ ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಇಬ್ಬರು ಸೂಪರ್‌ ಸ್ಟಾರ್ಸ್‌ಗಳ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅದುವೇ ಹೃತಿಕ್‌ ರೋಷನ್‌ ಹಾಗೂ ಜಾನ್‌ ಅಬ್ರಹಾಂ.

ಮುಂದಿನಿಂದ 2ನೇ ಸಾಲಿನಲ್ಲಿ ಎಡಕ್ಕೆ ಮೊದಲು ನಿಂತಿರುವುದು ಜಾನ್ ಅಬ್ರಹಾಂ. ಅದೇ ರೀತಿ 3ನೇ ಸಾಲಿನಲ್ಲಿ ಎಡದಿಂದ 3ನೇಯವನಾಗಿ ನಿಂತಿರುವ ಹುಡುಗ ಹೃತಿಕ್ ರೋಷನ್. ಈ ಫೋಟೊ ನೋಡಿ ಇಬ್ಬರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಇದನ್ನೂ ಓದಿ: Pathaan Movie: ಪಠಾಣ್ ಸಿನಿಮಾ ಸೋತಿದ್ದರೆ ಅಡುಗೆ ಬಾಣಸಿಗ ಆಗುತ್ತಿದ್ದೆ; ಶಾರುಖ್‌ ಖಾನ್‌

ಇದನ್ನೂ ಓದಿ: Pathaan Movie : 600 ಕೋಟಿ ರೂ. ಗಳಿಕೆಯತ್ತ ‘ಪಠಾಣ್’ ಸಿನಿಮಾ, ಬಾಕ್ಸ್‌ಆಫೀಸ್ ದಾಖಲೆ!

ಮುಂಬೈನ ಸ್ಕಾಟಿಷ್ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಪಠಾಣ್‌ ಸಿನಿಮಾ (Pathaan Movie) ಹಲವಾರು ದಾಖಲೆಗಳನ್ನು ಬರೆಯುತ್ತ ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣಲಾರಂಭಿಸಿದೆ. ಸಿನಿಮಾ ಗುರುವಾರದ ಅಂತ್ಯಕ್ಕೆ ವಿಶ್ವಾದ್ಯಂತ 700 ಕೋಟಿ ರೂ.ಗೂ ಅಧಿಕ ಹಣ ಗಳಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ.ಪಠಾಣ್‌ ಸಿನಿಮಾವು ವೈಆರ್‌ಎಫ್‌ನ ನಾಲ್ಕನೇ ಪತ್ತೇದಾರಿ ಸಿನಿಮಾವಾಗಿದೆ. ʼಏಕ್‌ ತಾ ಟೈಗರ್‌ʼ, ʼಟೈಗರ್‌ ಜಿಂದಾ ಹೈʼ ಮತ್ತು ʼವಾರ್‌ʼ ಸಿನಿಮಾದ ನಂತರ ಈ ಸಿನಿಮಾ ಬಿಡುಗಡೆಯಾಗಿದೆ. ಈ ಎಲ್ಲ ಸಿನಿಮಾಗಳು ಗಳಿಸಿರುವುದಕ್ಕಿಂತ ಹೆಚ್ಚು ಹಣವನ್ನು ಪಠಾಣ್‌ ಬಾಚಿಕೊಂಡಿದೆ.

Exit mobile version