ಬೆಂಗಳೂರು: ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ, ನಟ ಆದಿತ್ಯ ಸಹೋದರಿ ರಿಷಿಕಾ ಸಿಂಗ್ (Rishika Singh) ಎರಡು ವರ್ಷಗಳ ಹಿಂದೆ ಜುಲೈ 28,2020 ರಂದು ಮಾವಳ್ಳಿಪುರ ಸಮೀಪದಲ್ಲಿ ಫಾರ್ಚೂನರ್ ಕಾರ್, ರಸ್ತೆ ಪಕ್ಕದಲ್ಲಿ ಇದ್ದ ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು. ನಟಿ ರಿಷಿಕಾ ಸಿಂಗ್ ಬೆನ್ನುಮೂಳೆಗೆ (spine) ಬಲವಾಗಿ ಪೆಟ್ಟಾಗಿತ್ತು. ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡು ಕಾಲುಗಳ ಸ್ವಾಧೀನವನ್ನೂ ಅವರು ಕಳೆದುಕೊಂಡಿದ್ದರು. ಇದೀಗ ನಟಿ ತಮ್ಮ ಆರೋಗ್ಯದ ಕುರಿತು ಇನ್‌ಸ್ಟಾ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
”ನಾನು ಗುಣಮುಖಳಾದ ಕಥೆಯಿದು. ನನ್ನ ಬೆನ್ನಿಗೆ ಗಾಯವಾದ ನಂತರ, 1.5 ವರ್ಷಗಳ ಹಿಂದೆ ದೇವರು ನನಗೆ ದಯೆ ತೋರಿದ್ದಾನೆ. ಐರನ್ ಮಹಿಳೆಯನ್ನಾಗಿ ಮಾಡಿದ್ದಕ್ಕಾಗಿ, ನನ್ನ ವೈದ್ಯರಿಗೆ ಧನ್ಯವಾದಗಳು. ಡಾ.ಮಹೇಶ್ವರಪ್ಪ ಅವರು ನನಗೆ ಟ್ರೀಟ್‌ಮೆಂಟ್ ನೀಡಿದ ವೈದ್ಯರು. ನನ್ನ ಕುಟುಂಬ ನನ್ನ ಬೆನ್ನೆಲುಬಾಯಿತು. ಮತ್ತು ನನ್ನ ಫಿಸಿಯೋಥೆರಪಿಸ್ಟ್ ನನ್ನ ತರಬೇತುದಾರ ಮತ್ತು ಶಕ್ತಿಯಾದರು. ನೀವು ಇಲ್ಲದೆ ಇದು ಸಾಧ್ಯವಿಲ್ಲ. ನನ್ನ ಸಂಪೂರ್ಣ ಚೇತರಿಕೆಯು ನಿಮಗೆ ಸಮರ್ಪಿತವಾಗಿದೆ. ನಿಮ್ಮ ತರಬೇತಿಯು ಮುಖ್ಯವಾಗಿದೆ. ಹಾಗೆಯೇ ಯಾವಾಗಲೂ ನನ್ನ ಭಯಕ್ಕಿಂತ ನನ್ನ ನಂಬಿಕೆ ಬಲವಾಗಿತ್ತು. ಅದು ಚೇತರಿಕೆಗೆ ದಾರಿ ಮಾಡಿಕೊಟ್ಟಿತುʼʼಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Actress Ramya | ರಮ್ಯಾ ನಿರ್ಮಾಣದ ಸಿನಿಮಾಗೆ ಸಂಕಷ್ಟ: ಟೈಟಲ್ ಕುರಿತಾಗಿ ರಾಜೇಂದ್ರ ಸಿಂಗ್ ಬಾಬು ನೀಡಿದ ಪತ್ರವೇನು?
ಇದನ್ನೂ ಓದಿ: Actress Haripriya | ಸ್ಯಾಂಡಲ್‌ವುಡ್ ತಾರೆಯರಿಗೆ ಮದುವೆಯ ಕರೆಯೋಲೆ ನೀಡಿದ ʻಸಿಂಹಪ್ರಿಯಾʼ: ಫೋಟೊಗಳು ಇಲ್ಲಿವೆ!
ವೈದ್ಯರ ಸತತ ಪ್ರಯತ್ನ ಮತ್ತು ರಿಷಿಕಾ ಅವರ ಧೈರ್ಯದ ಕಾರಣದಿಂದಾಗಿ ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವ್ಹೀಲ್ ಚೇರ್ ಸಹಾಯದಿಂದ ಓಡಾಡುತ್ತಿದ್ದ ಅವರು, ಇದೀಗ ಎರಡು ಕೋಲುಗಳ ಆಶ್ರಯ ಪಡೆದುಕೊಂಡು ನಡೆದಾಡುವಂತಹ ಚೇತರಿಕೆಯನ್ನು ಕಂಡಿದ್ದಾರೆ. ʻʻಕಳ್ಳ ಮಳ್ಳ ಸುಳ್ಳʼʼ, ʻʻಕಂಠೀರವʼʼ, ʻʻಕಠಾರಿ ವೀರʼʼ ʻʻಸುರಸುಂದರಾಂಗಿʼʼ, ಕಿರೀಟ, ದೇವಯಾನಿ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಬಿಗ್ ಬಾಸ್ ಶೋನಲ್ಲೂ ಅವರು ಸ್ಪರ್ಧಿಯಾಗಿ ಭಾಗಿಯಾಗಿದ್ದರು. ‘ರಗಳೆ ವಿಥ್ ರಿಷಿಕಾ’ ಎನ್ನುವ ಶೋ ನಿರೂಪಣೆ ಕೂಡ ಮಾಡುತ್ತಿದ್ದರು.