ಬೆಂಗಳೂರು: `ದಿ ಆರ್ಚೀಸ್’ ಸಿನಿಮಾ (The Archies) ಬಳಿಕ ಅಗಸ್ತ್ಯ ನಂದಾ (Agastya Nanda) ಅವರ ಮುಂಬರುವ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಚರ್ಚೆಗಳು ಆಗಿತ್ತು. ಇದೀಗ ಅಗಸ್ತ್ಯ ನಂದಾ ಅವರ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಎಕ್ಕಿಸ್’ ಚಿತ್ರದ (Ekkis) ಮೂಲಕ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಜನವರಿ 2024ರಲ್ಲಿ ನಡೆಯಲಿದೆ ಎನ್ನಲಾಗಿದೆ. ಶ್ರೀರಾಮ್ ರಾಘವನ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. 1971ರ ವೀರ, ಭಾರತೀಯ ಸೇನೆಯ ಅಧಿಕಾರಿ ಅರುಣ್ ಖೇತರ್ಪಾಲ್ ಅವರ ಜೀವನಚರಿತ್ರೆಯ ಸಿನಿಮಾ ಆಗಿದೆ ಎಂದು ವರದಿಯಾಗಿದೆ. ಹಿರಿಯ ನಟ ಧರ್ಮೇಂದ್ರ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಶ್ರೀರಾಮ್ ರಾಘವನ್ ಅವರ ಥ್ರಿಲ್ಲರ್ ಸಿನಿಮಾ ‘ಮೆರ್ರಿ ಕ್ರಿಸ್‌ಮಸ್ʼಗೆ ಬಿಡುಗಡೆಗೆ ಸಜ್ಜಾಗುತ್ತಿದೆ. ಇದೀಗ ಅಗಸ್ತ್ಯ ನಂದಾ ಅವರೊಂದಿಗೆ ‘ಎಕ್ಕಿಸ್’ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಧರ್ಮೇಂದ್ರ ಅವರು ಅರುಣ್ ಖೇತರ್ಪಾಲ್ ತಂದೆ ಎಂಎಲ್ ಖೇತರ್‌ಪಾಲ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ.
ಅಭಿಮಾನಿಗಳಿಗೆ ಕೈ ಬೀಸಿದ್ದ ಅಗಸ್ತ್ಯ
ಪ್ರತಿ ಭಾನುವಾರ ಅಮಿತಾಭ್ (Amitabh Bachchan) ಅವರು ಮುಂಬೈನ ಜುಹುದಲ್ಲಿರುವ ತಮ್ಮ ಮನೆಯಲ್ಲಿ ಅಭಿಮಾನಿಗಳನ್ನು ಆಗಾಗ ಭೇಟಿ ಮಾಡುತ್ತಲೇ ಇರುತ್ತಾರೆ. ಅಮಿತಾಭ್ ಜತೆಗೆ ಮೊಮ್ಮಗ ಅಗಸ್ತ್ಯ ನಂದಾ ಕೂಡ ಅಭಿಮಾನಿಗಳಿಗೆ ಕೈ ಬೀಸಿ ಸಾಕಷ್ಟು ಸುದ್ದಿಯಾಗಿದ್ದರು. ಅಗಸ್ತ್ಯ ಅವರ ಚೊಚ್ಚಲ ಚಿತ್ರ ದಿ ಆರ್ಚೀಸ್ ಟ್ರೇಲರ್ ಬಿಡುಗಡೆಯಾದ ಬಳಿಕ ಕೂಡ, ಅಮಿತಾಭ್ ಬಚ್ಚನ್ ಅವರು ʻʻನನ್ನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿದೆʼʼಎಂದು ಬರೆದುಕೊಂಡಿದ್ದರು. ಈ ಸಿನಿಮಾದಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ ಮುಂತಾದವರು ನಟಿಸಿದ್ದಾರೆ. ಅಗಸ್ತ್ಯ ನಂದ ಅವರ ಚೊಚ್ಚಲ ಈ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಇಡೀ ಬಚ್ಚನ್ ಕುಟುಂಬವು ಹಾಜರಿತ್ತು ಡಿಸೆಂಬರ್ 7 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು.
ಇದನ್ನೂ ಓದಿ: Suhana Khan: ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಗಸ್ತ್ಯ-ಸುಹಾನಾ; ಡೇಟಿಂಗ್ ಜೋರಾ?
Agastya Nanda to start shoots for Sriram Raghavan’s ‘EKKIS’ in January.
— justSP 🍿 ☉ (@SakshamPateria) December 14, 2023
It’s the biopic of 1971 War Hero, Lt. Arun Khetarpal.
It also stars #Dharmendra as M.L. Khetarpal. Produced by Dinesh Vijan under Maddock Films. #Ekkis
(via @pinkvilla) pic.twitter.com/S6SQTgG1fu
ಮತ್ತೊಂದೆಡೆ, ಶ್ರೀರಾಮ್, ‘ಬದ್ಲಾಪುರ್’, ‘ಏಕ್ ಹಸೀನಾ ಥಿ’ ಮತ್ತು ‘ಅಂಧಾಧುನ್’ ಸೇರಿದಂತೆ ಇತರ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಶ್ರೀರಾಮ್ ನಿರ್ದೇಶನ, ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಅಭಿನಯದ ‘ಮೆರ್ರಿ ಕ್ರಿಸ್ಮಸ್’ ಜನವರಿ 2024 ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಅವರ ಡೈನಾಮಿಕ್ ಜೋಡಿಯನ್ನು ಒಳಗೊಂಡ ಶ್ರೀರಾಮ್ ರಾಘವನ್ ನಿರ್ದೇಶನದ ‘ಮೆರ್ರಿ ಕ್ರಿಸ್ಮಸ್’ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆದಿದೆ. ಹಿಂದಿ ಮತ್ತು ತಮಿಳಿನ ವಿವಿಧ ಕಲಾವಿದರ ನಟನೆಯ ಜತೆಗೆ ಎರಡು ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆ. ಕತ್ರಿನಾ ಕೈಫ್ ಮತ್ತು ಶ್ರೀರಾಮ್ ರಾಘವನ್ ಅವರ ಮೊದಲ ತಮಿಳು ಚಿತ್ರ ಇದಾಗಿರಲಿದೆ.ಹಿಂದಿ ಚಿತ್ರದಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ಟಿನ್ನು ಆನಂದ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನಲ್ಲಿ ರಾಧಿಕಾ ಶರತ್ ಕುಮಾರ್, ಷನ್ಮುಖರಾಜ, ಕೆವಿನ್ ಜೈ ಬಾಬು ಮತ್ತು ರಾಜೇಶ್ ವಿಲಿಯಮ್ಸ್ ಈ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಧಿಕಾ ಆಮ್ಟೆ ಮತ್ತು ಅಶ್ವಿನಿ ಕಲ್ಶೇಖರ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.