ಬೆಂಗಳೂರು: ಸುನೀಲ್ ಶೆಟ್ಟಿ ಅವರ ಪುತ್ರ, ನಟ ಅಹಾನ್ ಶೆಟ್ಟಿ ಅವರು ತಮ್ಮ ಬಹುಕಾಲದ ಗೆಳತಿ ತಾನಿಯಾ ಶ್ರಾಫ್ ಅವರೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅಹಾನ್ ಶೆಟ್ಟಿ ಹಾಗೂ ತಾನಿಯಾ ಶ್ರಾಫ್ 11 ವರ್ಷಗಳಿಂದ ಪ್ರೀತಿಯಲ್ಲಿ ಇದ್ದರು. ವರದಿಯ ಪ್ರಕಾರ, ಅಹಾನ್ ಮತ್ತು ತಾನಿಯಾ ಬೇರ್ಪಟ್ಟು ಒಂದೂವರೆ ತಿಂಗಳಾಗಿದೆ. ತಾನಿಯಾ ಮಾಡೆಲ್, ಡಿಸೈನರ್ ಮತ್ತು ಉದ್ಯಮಿ ಜೈದೇವ್ ಅವರ ಪುತ್ರಿ.
ಅಹಾನ್ ಮತ್ತು ತಾನಿಯಾ ಶ್ರಾಫ್ ಬಾಲ್ಯದಿಂದಲೂ ಪ್ರೀತಿಯಲ್ಲಿದ್ದರು. ಒಂದೇ ಸ್ಕೂಲ್‌ನಲ್ಲಿ ಓದುತ್ತಿರುವುದಾಗಿ ಅದೆಷ್ಟೋ ಬಾರಿ ಹೇಳಿಕೊಂಡಿದ್ದರು. ತಾನಿಯಾ-ಅಹಾನ್ ಶೆಟ್ಟಿ ಜೋಡಿ ಕಳೆದ 11 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಅಹಾನ್ ಕುಟುಂಬದ ಕಾರ್ಯಕ್ರಮಗಳಲ್ಲಿ ತಾನಿಯಾ ಭಾಗಿಯಾಗುತ್ತಿದ್ದರು. ಅಥಿಯಾ-ಕೆ.ಎಲ್ ರಾಹುಲ್ ಮದುವೆಯಲ್ಲೂ ಅಹಾನ್ ಶೆಟ್ಟಿ ಜತೆ ತಾನಿಯಾ ಮಿಂಚಿದ್ದರು. ಆದರೀಗ ಜೋಡಿ ಬ್ರೇಕಪ್ ಮಾಡಿಕೊಂಡಿದೆ ಎನ್ನಲಾಗಿದೆ. ಅಹಾನ್ ಶೆಟ್ಟಿ ಸದ್ಯ ಒಂಟಿಯಾಗಿದ್ದಾರೆ ಎನ್ನಲಾಗಿದೆ. ಜೋಡಿಯ ಬ್ರೇಕಪ್ ಬಗ್ಗೆ ಇದುವರೆಗೆ ಕಾರಣ ತಿಳಿದು ಬಂದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಅನ್‌ಫಾಲೋ ಕೂಡ ಮಾಡಿಲ್ಲ.
ಇದನ್ನೂ ಓದಿ: K L Rahul : ಮನೆಯಲ್ಲಿ ರಾಹುಲ್ ಜತೆ ಕ್ರಿಕೆಟ್ ಬಗ್ಗೆ ಮಾತನಾಡುವುದೇ ಇಲ್ಲ ಎಂದಿದ್ದಾರೆ ಮಾವ ಸುನೀಲ್ ಶೆಟ್ಟಿ
ಅಹಾನ್ ಅವರು ನಟ ಸುನೀಲ್ ಶೆಟ್ಟಿ ಅವರ ಮಗ. ‘ತಡಪ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ಅಹಾನ್. ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ‘ತಡಪ್’ನ ಪ್ರಥಮ ಪ್ರದರ್ಶನದಲ್ಲಿ ಒಟ್ಟಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ರಾಹುಲ್ ಮತ್ತು ಅಥಿಯಾ ಶೆಟ್ಟಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಬಳಿಕ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.