Site icon Vistara News

Aindrila Sharma | ನಟಿ ಐಂದ್ರಿಲಾ ಕಾಲಿಗೆ ಮುತ್ತಿಟ್ಟು ಅಂತಿಮ ವಿದಾಯ ಹೇಳಿದ ಬಾಯ್‌ಫ್ರೆಂಡ್‌: ವಿಡಿಯೊ ವೈರಲ್‌

Aindrila Sharma BF, Sabyasachi Kisses Her Feet

ಬೆಂಗಳೂರು: ಬೆಂಗಾಳಿ ನಟಿ ಐಂದ್ರಿಲಾ ಶರ್ಮಾ (Aindrila Sharma) ಹೃದಯ ಸ್ತಂಭನದಿಂದ ನವೆಂಬರ್‌ 20ರಂದು ನಿಧನರಾಗಿದ್ದಾರೆ. ನಟಿಯ ಅಂತ್ಯಕ್ರಿಯೆ ವೇಳೆ ಅವರ ಗೆಳೆಯ ಸಬ್ಯಸಾಚಿ ಚೌಧರಿ ಅವರು ಐಂದ್ರಿಲಾ ಶರ್ಮಾ ಮುಂದೆ ಮಂಡಿಯೂರಿ, ನಟಿಯ ಪಾದಕ್ಕೆ ಚುಂಬಿಸಿದ ಭಾವುಕ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನವೆಂಬರ್‌ 1ರಂದು ಬ್ರೇನ್​ ಸ್ಟ್ರೋಕ್​​ಗೆ ಒಳಗಾಗಿದ್ದ ಐಂದ್ರಿಲಾ ಅವರಿಗೆ ನವೆಂಬರ್​ 14ರಂದು ಹಲವು ಬಾರಿ ಹೃದಯಸ್ತಂಭನ ಆಗಿತ್ತು. ಹೀಗಾಗಿ ಉಸಿರಾಟ ಕ್ಷೀಣವಾಗಿತ್ತು. ಅವರಿಗೆ ಸಿಪಿಆರ್​ (Cardiopulmonary Resuscitation) ಚಿಕಿತ್ಸೆ ನೀಡಲಾಗಿತ್ತು. ವೆಂಟಿಲೇಟರ್​​ನಲ್ಲಿ ಇಡಲಾಗಿತ್ತು. ಆರು ದಿನ ಇದೇ ಸ್ಥಿತಿಯಲ್ಲಿದ್ದ ಐಂದ್ರಿಲಾ ಕೊನೆಗೂ ಬಾರದ ಲೋಕಕ್ಕೆ ತೆರಳಿದ್ದಾರೆ. ಅಂತ್ಯಕ್ರಿಯೆ ವೇಳೆ ಗೆಳೆಯ ಸಬ್ಯಸಾಚಿ ಚೌಧರಿ ಅವರು ಐಂದ್ರಿಲಾ ಶರ್ಮಾ ಅವರ ಕಾಲಿಗೆ ಮುತ್ತಿಟ್ಟು, ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ | Aindrila Sharma | ಬದುಕುಳಿಯಲಿಲ್ಲ ನಟಿ ಐಂದ್ರಿಲಾ ಶರ್ಮಾ; 2 ಬಾರಿ ಕ್ಯಾನ್ಸರ್​ ಗೆದ್ದಿದ್ದಾಕೆ, ಹೃದಯ ಸ್ತಂಭನದಿಂದ ಸಾವು

ಐಂದ್ರಿಲಾ ಶರ್ಮಾ ಈ ಹಿಂದೆ ಕ್ಯಾನ್ಸರ್​ಗೆ ತುತ್ತಾಗಿದ್ದರು. ಎರಡೆರಡು ಬಾರಿ ಈ ರೋಗ ಅವರನ್ನು ಕಾಡಿತ್ತು. ಅದನ್ನು ಯಶಸ್ವಿಯಾಗಿ ಮಣಿಸಿದ್ದ ಐಂದ್ರಿಲಾ ಈಗ ಇಂಟ್ರಾಕ್ರೇನಿಯಲ್​ ಹೆಮ್ರೇಜ್​ (ಮಿದುಳಿನಲ್ಲಿ ರಕ್ತನಾಳ ಒಡೆಯುವುದು)ನಿಂದ ಬಳಲುತ್ತಿದ್ದರು. ಹೀಗಾಗಿ ಅವರು ಒಂದು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.

ಐಂದ್ರಿಲಾ ಪಶ್ಚಿಮ ಬಂಗಾಳದ ಬರ್ಹಾಂಪೋರ್​ನವರಾಗಿದ್ದು, ಝುಮುರ್​ ಟಿವಿ ಶೋ ಮೂಲಕ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ್ದರು. ಅದಾದ ಬಳಿಕ ಮಹಾಪೀಠ್ ತಾರಾಪೀಠ್​, ಜೀವನ್​ ಜ್ಯೋತಿ, ಜಿಯೋನ್ ಕತಿ ಎಂಬಿತ್ಯಾದಿ ಹಲವು ಪ್ರಮುಖ ಟಿವಿ ಶೋಗಳಲ್ಲಿ ನಟಿಸಿ, ಜನಪ್ರಿಯತೆಗಳಿಸಿದ್ದರು. ಅಮಿ ದೀದಿ ನಂಬರ್​ 1, ಲವ್​ ಕೆಫೆ ಎಂಬ ಸಿನಿಮಾಗಳಲ್ಲೂ ನಟಿಸಿದ್ದರು. ಕ್ಯಾನ್ಸರ್ ಗೆದ್ದ ಬಳಿಕವೂ ಅವರು ಟಿವಿ ಶೋಗಳಲ್ಲಿ ನಟಿಸುತ್ತಿದ್ದರು.

ಇದನ್ನೂ ಓದಿ | Aindrila Sharma | ಬೆಂಗಾಲಿ ನಟಿ ಐಂದ್ರಿಲಾ ಶರ್ಮಾಗೆ ಹೃದಯಾಘಾತ: ಆರೋಗ್ಯ ಸ್ಥಿತಿ ಗಂಭೀರ

Exit mobile version