Site icon Vistara News

Dhirubhai Ambani School: ಶಾಲಾ ವಾರ್ಷಿಕೋತ್ಸವದಲ್ಲಿ ಬಾಲಿವುಡ್‌ ಸ್ಟಾರ್‌ಗಳ ಭರ್ಜರಿ ಸ್ಟೆಪ್ಸ್‌!

Aishwarya, Abhishek dance with SRK annual day event Dhirubhai Ambani

ಬೆಂಗಳೂರು: ಡಿಸೆಂಬರ್ 15ರಂದು ಧೀರೂಭಾಯಿ ಅಂಬಾನಿ (Dhirubhai Ambani School) ಶಾಲೆಯಲ್ಲಿ ವಾರ್ಷಿಕ ದಿನವನ್ನು ಆಚರಿಸಿಲಾಗಿತ್ತು. ವಿಶೇಷ ದಿನದಂದು, ಹಲವಾರು ಬಾಲಿವುಡ್ ತಾರೆಯರು ಮಕ್ಕಳೊಂದಿಗೆ ಹಾಜರಾಗಿದ್ದರು. ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಅಮಿತಾಭ್‌ ಬಚ್ಚನ್, ಕರಣ್ ಜೋಹರ್, ಶಾರುಖ್ ಖಾನ್ ಮತ್ತು ಮಗಳು ಸುಹಾನಾ ಸೇರಿದಂತೆ ಹಲವಾರು ತಾರೆಯರು ಭಾಗಿಯಾಗಿದ್ದರು.

ಕರಣ್ ಜೋಹರ್ ಜತೆಗೆ ಅಭಿಷೇಕ್, ಅಮಿತಾಭ್‌ ಬಚ್ಚನ್ ಜತೆ ಐಶ್ವರ್ಯ ಕೂಡ ಡ್ಯಾನ್ಸ್ ಮಾಡಿರುವ ವಿಡಿಯೊ ವೈರಲ್‌ ಆಗಿದೆ. ಅಬ್ರಾಮ್ ಮತ್ತು ಆರಾಧ್ಯ ಬಚ್ಚನ್ ಸೇರಿದಂತೆ ಹಲವಾರು ಬಾಲಿವುಡ್ ಸ್ಟಾರ್ ಮಕ್ಕಳು ಈ ಶಾಲೆಯಲ್ಲೇ ಓದುತ್ತಿದ್ದಾರೆ. ವೇದಿಕೆಯಲ್ಲಿ ಶಾರುಖ್‌ ಮಗ ಕೂಡ ಪ್ರದರ್ಶನ ಕೊಟ್ಟಿರುವ ವಿಡಿಯೊ ವೈರಲ್‌ ಆಗಿದೆ. ಶಾರುಖ್ ಖಾನ್, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮಕ್ಕಳನ್ನು ಹುರಿದುಂಬಿಸಿರುವ ಸಾಕಷ್ಟು ಫೋಟೊಗಳು ವೈರಲ್‌ ಆಗಿವೆ. ಮಕ್ಕಳ ಕಾರ್ಯಕ್ರಮದ ಆದ ಬಳಿಕ ‘ಓಂ ಶಾಂತಿ ಓಂ’ ಚಿತ್ರದ ‘ದೀವಾಂಗಿ ದೀವಾಂಗಿ’ ಹಾಡಿಗೆ ಎಲ್ಲಾ ತಾರೆಯರು ನೃತ್ಯ ಮಾಡಿದರು.

ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಮತ್ತು ಕರಣ್ ಜೋಹರ್ ಅವರೊಂದಿಗೆ ಅವರ ಚಿತ್ರದ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಸಮಾರಂಭದಲ್ಲಿ ಕರೀನಾ ಕಪೂರ್ ಖಾನ್ ಸಹ ಉಪಸ್ಥಿತರಿದ್ದರು.ಅವರ ಮಗ ತೈಮೂರ್ ಅಲಿ ಖಾನ್ ವೇದಿಕೆಯಲ್ಲಿ ಹೋಗಿ ಪ್ರದರ್ಶನ ನೀಡುತ್ತಿರುವಾಗ ಅವರನ್ನು ಹುರಿದುಂಬಿಸುತ್ತಿರುವುದು ಕಂಡುಬಂದಿದೆ. ಗೌರಿ ಖಾನ್ ಅವರು ಮಕ್ಕಳು ಪ್ರದರ್ಶನ ನೀಡುತ್ತಿದ್ದಂತೆ ಉತ್ಸಾಹದಿಂದ ಚಪ್ಪಾಳೆ ತಟ್ಟಿದರು.

ಇದನ್ನೂ ಓದಿ: Power Cut: ವೀಕೆಂಡ್‌ನಲ್ಲಿ ಬೆಸ್ಕಾಂನಿಂದ ಕರೆಂಟ್‌ ಶಾಕ್‌!

ಈ ಶಾಲೆ ಮುಂಬೈನ ಬಾಂದ್ರಾದಲ್ಲಿ ಇದೆ. ಧೀರೂಭಾಯಿ ಅಂಬಾನಿ ಶಾಲೆ ವಿಶ್ವದ ಟಾಪ್ 10 ಶಾಲೆಗಳಲ್ಲಿ ಒಂದಾಗಿದೆ. ಶಾಲೆಯಲ್ಲಿ ಪ್ರತಿ 10 ವಿದ್ಯಾರ್ಥಿಗಳಿಗೆ 1 ಶಿಕ್ಷಕರಿದ್ದಾರೆ. ಇಲ್ಲಿ ಅಧ್ಯಯನ ಮಾಡಿದರೆ ಭವಿಷ್ಯದಲ್ಲಿ ಸುಲಭವಾಗಿ ವಿದೇಶದಲ್ಲಿ ಅಧ್ಯಯನ ಮಾಡುವ ರೀತಿಯ ವ್ಯವಸ್ಥೆ ಇಲ್ಲಿದೆ. ಈ ಕಾರಣಕ್ಕೆ ಇಲ್ಲಿ ಹೆಚ್ಚಿನ ಪ್ರವೇಶ ಶುಲ್ಕ ಪಡೆಯಲಾಗುತ್ತದೆ. ಈ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ 1ರಿಂದ 1.5 ಲಕ್ಷ ರೂ. ಇದೆ ಎನ್ನಲಾಗಿದೆ. ಪ್ರೌಢ ಶಿಕ್ಷಣ 8ರಿಂದ 10ನೇ ತರಗತಿವರೆಗೆ ಸುಮಾರು 4ರಿಂದ 5 ಲಕ್ಷ ಶುಲ್ಕ ವಿಧಿಸಲಾಗುತ್ತದೆ.

Exit mobile version