ಬೆಂಗಳೂರು : ಬಹುಭಾಷಾ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ತಮ್ಮ ಅಭಿನಯದ ಮೂಲಕ ಚಿತ್ರರಸಿಕರನ್ನು ರಂಜಿಸುವಲ್ಲಿ ಯಾವತ್ತೂ ಹಿಂದುಳಿಯದ ಅರ್ಜುನ್ ಸರ್ಜಾ ಇದೀಗ ಮಗಳ (Aishwarya Arjun) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ʼಪ್ರೇಮ ಬರಹʼ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಐಶ್ವರ್ಯ ಸರ್ಜಾ ಪಾದಾರ್ಪಣೆ ಮಾಡಿದರು. ಈ ಸಿನಿಮಾಗೆ ಅರ್ಜುನ್ ಸರ್ಜಾ ನಿರ್ದೇಶನದ ಜತೆಗೆ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅದಾದ ಬಳಿಕ ಐಶ್ವರ್ಯ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಈಗ ಮತ್ತೆ ಅರ್ಜುನ್ ಸರ್ಜಾ ಮಗಳ ಸಿನಿಮಾಗೆ ನಿರ್ದೇಶನದ ಜತೆ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ | Vikrant Rona Trailer | ಕ್ಯೂರಿಯಾಸಿಟಿ ಕೆರಳಿಸಿದ ʼಗರ ಗರ ಗರ ಗಗ್ಗರ ಜರ್ಬ, ಪಿರ ನಲ್ಕುರಿ ನೆತ್ತರ ಪರ್ಬʼ
ಅರ್ಜುನ್ ತಮ್ಮದೇ ಶ್ರೀ ರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಲಿರುವ ೧೫ನೇ ಸಿನಿಮಾದ ಮೂಲಕ ಮಗಳು ಐಶ್ವರ್ಯ ಅರ್ಜುನ್ ಅವರನ್ನು ತೆಲುಗಿನಲ್ಲಿ ನಾಯಕ ನಟಿಯಾಗಿ ಪರಿಚಯಿಸುತ್ತಿದ್ದಾರೆ. ಐಶ್ವರ್ಯಾ ಅರ್ಜುನ್ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಯುವ ಮತ್ತು ಭರವಸೆಯ ನಟ ವಿಶ್ವಕ್ ಸೇನ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ವಿಶ್ವಕ್ ಸೇನ್ ನಿರ್ದೇಶನ ಫಲಕ್ನುಮಾ ದಾಸ್ ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿದ್ದು, ಸದ್ಯ ದಾಸ್ ಕಾ ಧಮ್ಕಿ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ಜತೆಯಲ್ಲಿ ಹೊಸ ಚಿತ್ರವನ್ನು ವಿಶ್ವಕ್ ಸೇನ್ ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ವಿಲನ್ ಗೆಟಪ್ ನಲ್ಲಿ ಜಗಪತಿ ಬಾಬು ನಟಿಸಲಿದ್ದಾರೆ.
ಇದೊಂದು ರೋಡ್ ಟ್ರಿಪ್ ಸಿನಿಮಾವಾಗಿದ್ದು, ಶೀಘ್ರದಲ್ಲಿಯೇ ಶೂಟಿಂಗ್ ಶುರುವಾಗಲಿದೆ. ಬಳಿಕ ಉಳಿದ ಪಾತ್ರ ವರ್ಗವನ್ನು ಚಿತ್ರತಂಡ ಪರಿಚಯಿಸಲಿದೆ. ಇತ್ತೀಚೆಗಷ್ಟೇ ಸಿನಿಮಾದ ಮುಹೂರ್ತ ಸಮಾರಂಭ ಜರುಗಿದ್ದು, ಪವನ್ ಕಲ್ಯಾಣ್ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ರಾಘವೇಂದ್ರ ರಾವ್ ಉಪಸ್ಥಿತರಿದ್ದರು.
ಇದನ್ನೂ ಓದಿ | Vikrant Rona Movie | ರಕ್ತಕ್ಕೆ ರಕ್ತ, ಕ್ರಾಂತಿಯ ಬೆಂಕಿ : Trailer ಇವೆಂಟ್‌ನಲ್ಲಿ ನಿರ್ದೇಶಕರ ದಂಡು