Site icon Vistara News

Aishwarya Rai Bachchan | ಮಗಳು ಆರಾಧ್ಯಳಿಗೆ ಐಶ್ವರ್ಯಾ ರೈ ಪ್ರೀತಿಯಿಂದ ಸಿಹಿ ಮುತ್ತು: ʻನಾಚಿಕೆಗೇಡುʼಅಂದ್ರು ನೆಟ್ಟಿಗರು!

Aishwarya Rai Bachchan

ಬೆಂಗಳೂರು: ಕಾಲಿವುಡ್‌ ಚಿತ್ರ ‘ಪೊನ್ನಿಯನ್ ಸೆಲ್ವನ್'(Ponniyan Selvan) ಯಶಸ್ಸಿನ ಬಳಿಕ ಹಲವು ಸಿನಿಮಾಗಳಲ್ಲಿ ಬಾಲಿವುಡ್‌ ನಟಿ ಐಶ್ವರ್ಯಾ ರೈ (Aishwarya Rai Bachchan) ತುಂಬ ಆ್ಯಕ್ಟೀವ್ ಆಗಿದ್ದಾರೆ. ನವೆಂಬರ್‌ 16ರಂದು ಐಶ್ವರ್ಯಾ ರೈ ಅವರ ಮಗಳು ಆರಾಧ್ಯ ಅವರ ಜನುಮದಿನವಾಗಿದ್ದು, ವಿಶೇಷವಾಗಿ ನಟಿ ಶುಭಕೋರಿದ್ದಾರೆ. ಈಗ ನಟಿ ಶುಭಕೋರಿರುವ ರೀತಿಗೆ ನೆಟ್ಟಿಗರಿಂದ ತರಾಟೆ ಶುರುವಾಗಿದೆ.

ತಾಯಿ-ಮಗಳ ಮುದ್ದಾದ ಫೋಟೊಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 11ನೇ ವರುಷಕ್ಕೆ ಕಾಲಿಟ್ಟ ಆರಾಧ್ಯ ಅವರಿಗೆ ಐಶ್ವರ್ಯಾ ರೈ ಅವರು ಮಗಳ ತುಟಿಗೆ ಮುತ್ತು ನೀಡಿದ್ದಾರೆ. ಮುತ್ತು ನೀಡುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ನಟಿ ಶೇರ್‌ ಮಾಡಿಕೊಂಡಿದ್ದು, “ಮೈ ಲವ್, ಮೈ ಲೈಫ್‌, ಐ ಲವ್ ಯು, ಮೈ ಆರಾಧ್ಯ” ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಇದೀಗ ಐಶ್ವರ್ಯಾ ರೈ ಅವರ ಈ ಫೋಟೊಗೆ ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದು, ʻಇದು ಅತಿಯಾಯಿತು, ತುಟಿಗೆ ಕಿಸ್ ಮಾಡುವುದು ಸರಿಯಲ್ಲ, ನಾಚಿಕೆಗೇಡುʼʼಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ | Actor Rajinikanth | ನಿರ್ದೇಶನದತ್ತ ಐಶ್ವರ್ಯಾ ರಜನಿಕಾಂತ್‌: ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ ಸೂಪರ್‌ ಸ್ಟಾರ್‌!

ಹಲವರು ಐಶ್ವರ್ಯಾ ಅವರಿಗೆ ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಐಶ್ವರ್ಯಾ ರೈ ಅವರ ಮನಸ್ಥಿತಿ ಸರಿಯಿಲ್ಲ ಎಂದು ಕಮೆಂಟ್‌ ಮಾಡಿದ್ದಾರೆ. ಐಶ್ವರ್ಯಾ ಅವರ ಅಭಿಮಾನಿಯೊಬ್ಬರು ʻʻಐಶ್ವರ್ಯಾ ಅವರು ಮಗಳಿಗೆ ಮುತ್ತು ನೀಡಿರುವುದರಲ್ಲಿ ತಪ್ಪೇನಿದೆ? ತಾಯಿ ಮಗುವಿಗೆ ಮುತ್ತು ನೀಡುವುದು ತಪ್ಪೇ? ಮಗುವಿಗೆ ಜನ್ಮ ನೀಡಲು ತಾಯಿ ಸಾಕಷ್ಟು ನೋವನ್ನು ಸಹಿಸಿಕೊಳ್ಳಬಹುದಾದರೆ, ತುಟಿಗೆ ಚುಂಬಿಸುವದರಲ್ಲಿ ತಪ್ಪೇನಿಲ್ಲ. ಇದು ತಾಯಿ ಪ್ರೀತಿʼʼಎಂದು ಕಮೆಂಟ್‌ ಮೂಲಕ ಹೇಳಿದ್ದಾರೆ.

2007ರಲ್ಲಿ ಅಭಿಷೇಕ್ ಬಚ್ಚನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಐಶ್ವರ್ಯಾ ರೈ. ನಟಿ ಐಶ್ವರ್ಯಾ ಅವರು ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಮುಂಬರುವ ʻಜೈಲರ್‌ʼ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಜತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್, ಪ್ರಿಯಾಂಕಾ ಅರುಲ್ ಮೋಹನ್ ಮತ್ತು ಶಿವ ರಾಜಕುಮಾರ್ ತಾರಾಗಣ ಇದೆ.

ಇದನ್ನೂ ಓದಿ | 49ನೇ ವರ್ಷಕ್ಕೆ ಕಾಲಿಡುತ್ತಿರುವ 1994ರ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್

Exit mobile version