Site icon Vistara News

Aishwarya Rai: ಅತ್ತೆ, ನಾದಿನಿ ಕ್ರಾಪ್‌ ಮಾಡಿ ಫೋಟೊ ಹಂಚಿಕೊಂಡ ಐಶ್ವರ್ಯಾ ರೈ; ಕುಟುಂಬದಲ್ಲಿ ಬಿರುಕು?

amitabh Family

ಬೆಂಗಳೂರು: ಅಕ್ಟೋಬರ್ 11ರಂದು (Aishwarya Rai) ಅಮಿತಾಭ್‌ ಬಚ್ಚನ್ ತಮ್ಮ 81ನೇ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಂಡರು. ಮಧ್ಯರಾತ್ರಿಯೇ ಸಂಭ್ರಮಾಚರಣೆಯಲ್ಲಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಭಾಗಿಯಾಗಿ ವಿಶಸ್‌ ಕೂಡ ತಿಳಿಸಿದ್ದರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಜಯಾ ಬಚ್ಚನ್, ಆರಾಧ್ಯಾ ಬಚ್ಚನ್ ಮತ್ತು ಅಗಸ್ತ್ಯ ನಂದಾ ಅಮಿತಾಭ್‌ ಅವರ ಜತೆ ಇರುವ ಫೋಟೊ ಕೂಡ ಶೇರ್‌ ಮಾಡಿಕೊಂಡಿದ್ದರು. ಇದೇ ಫೋಟೊವನ್ನು ಅಕ್ಟೋಬರ್ 12ರಂದು ಐಶ್ವರ್ಯಾ ರೈ ಫೋಟೊ ಹಂಚಿಕೊಂಡಿದ್ದಾರೆ. ಆದರೆ ಅತ್ತೆ ಜಯಾ ಬಚ್ಚನ್‌, ನವ್ಯಾ ನವೇಲಿ ನಂದಾ ಅವರನ್ನು ಹೊರಗಿಟ್ಟು, ಅಮಿತಾಭ್​ ಬಚ್ಚನ್​ ಜತೆ ಆರಾಧ್ಯಾ ಬಚ್ಚನ್ ಮಾತ್ರ ಕಾಣುವಂತೆ ಕ್ರಾಪ್‌ ಮಾಡಿ ಫೋಟೊ ಪೋಸ್ಟ್‌ ಮಾಡಿದ್ದಾರೆ. ಇದೀಗ ಐಶ್ವರ್ಯಾ ರೈ ಬಚ್ಚನ್‌ ಕುಟಂಬದಲ್ಲಿ ಏನೋ ಕಿರಿಕ್‌ ಇದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ನವ್ಯಾ ನವೇಲಿ ನಂದಾ ಹಂಚಿಕೊಂಡ ಫೋಟೊದಲ್ಲಿ ಅಮಿತಾಭ್​ ಬಚ್ಚನ್​ ಜತೆ ಆರಾಧ್ಯಾ ಬಚ್ಚನ್​, ಜಯಾ ಬಚ್ಚನ್​, ನವ್ಯಾ ನವೇಲಿ ನಂದಾ, ಅಗಸ್ತ್ಯ ನಂದಾ ಕೂಡ ಇದ್ದರು. ಆದರೆ ಆ ಫೋಟೊವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವಾಗ ಜಯಾ, ನವ್ಯಾ ಮತ್ತು ಅಗಸ್ತ್ಯ ಅವರನ್ನು ಐಶ್ವರ್ಯಾ ರೈ ಕ್ರಾಪ್​ ಮಾಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣ ಆಗಿದೆ. ನೆಟ್ಟಗರು ಇದೀಗ ನಟಿಯ ಕಾಲೆಳೆಯಲು ಶುರು ಮಾಡಿದ್ದಾರೆ.

ನೆಟ್ಟಿಗರೊಬ್ಬರು ʻʻಐಶ್ವರ್ಯಾ ಬೇಕು ಅಂತಲೇ ಫೋಟೊ ಕ್ರಾಪ್‌ ಮಾಡಿದ್ದಾರೆʼʼ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻನನಗೆ ಐಶ್ವರ್ಯಾ ಅವರ ಈ ನಡವಳಿಕೆ ತುಂಬಾ ಇಷ್ಟವಾಯಿತುʼʼಎಂದು ಕಮೆಂಟ್‌ ಮಾಡಿದ್ದಾರೆ. ʻʻಕ್ರಾಪ್‌ ಮಾಡಿದ್ದು ಸರಿ ಇದೆʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಹಲವು ಜನ ಐಶ್ವರ್ಯ ಅವರ ಈ ನಡೆಗೆ ಸಾಥ್‌ ಕೊಟ್ಟಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ.

ಇದನ್ನೂ ಓದಿ: Aishwarya Rai : ಐಶ್ವರ್ಯಾ ರೈಯಂತ ಕಣ್ಣು ಬೇಕೇ? ಮೀನು ತಿನ್ನಿ; ಮಹಾರಾಷ್ಟ್ರದ ಸಚಿವನ ವಿವಾದಾತ್ಮಕ ಹೇಳಿಕೆ

ಪ್ಯಾರಿಸ್ ಫ್ಯಾಷನ್ ವೀಕ್‌ ಪೋಸ್ಟ್‌

ಪ್ಯಾರಿಸ್ ಫ್ಯಾಶನ್ ವೀಕ್‌ ಫೋಟೊವನ್ನು ಈ ಹಿಂದೆ ನವ್ಯಾ ನವೇಲಿ ನಂದಾ ಹಂಚಿಕೊಂಡಿದ್ದರು. ಅದರಲ್ಲಿ ಐಶ್ವರ್ಯಾ ಕೂಡ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ನವ್ಯಾ ಮತ್ತು ಅವರ ತಾಯಿ ಶ್ವೇತಾ ಬಚ್ಚನ್​ ಅವರು ಅದೇ ಇವೆಂಟ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಫೋಟೊ ಶೇರ್‌ ಮಾಡುವಾಗ ಐಶ್ವರ್ಯಾ ಅವರನ್ನು ಡ್ಯಾಗ್‌ ಮಾಡಿರಲಿಲ್ಲ. ಈ ನಡೆಗೆ ಬಹಳ ಚರ್ಚೆಗಳು ಆಗಿತ್ತು. ಇದರಿಂದಾಗಿ ಈಗ ಐಶ್ವರ್ಯಾ ಅವರು ನವ್ಯಾ ಅವರಿಗೆ ತಿರುಗೇಟು ನೀಡಿದ್ದಾರೆ ಎನ್ನಲಾಗುತ್ತಿದೆ.

Exit mobile version