ಮುಂಬೈ: ಬಾಲಿವುಡ್ ನಟಿ ಐಶ್ವರ್ಯ ರೈ (Aishwarya Rai) ಅವರಿಗೆ ಇದೀಗ ಕಂದಾಯ ಇಲಾಖೆಯ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ. ನಾಸಿಕ್‌ನಲ್ಲಿ ಅವರಿಗಿರುವ ಆಸ್ತಿಗೆ ನಟಿ ತೆರಿಗೆಯನ್ನು ಕಟ್ಟಿಲ್ಲ ಎನ್ನುವ ದೂರು ಕೇಳಿಬಂದಿದೆ.
ಇದನ್ನೂ ಓದಿ: Actor Rajinikanth | ಪುತ್ರಿ ಐಶ್ವರ್ಯಾ ಜತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ರಜನಿಕಾಂತ್: ವಿಡಿಯೊ ವೈರಲ್!
ಐಶ್ವರ್ಯ ಅವರು ನಾಸಿಕ್‌ನ ಸಿನ್ನಾರ್‌ನ ಅದ್ವದಿ ಪ್ರದೇಶದಲ್ಲಿ ಒಂದು ಹೆಕ್ಟೇರ್ (2.47 ಎಕರೆ) ಜಾಗಕ್ಕೆ ಮಾಲೀಕರಾಗಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿರುವ ಈ ಆಸ್ತಿಯನ್ನು ತೆರಿಗೆ ಮೌಲ್ಯ 22,000 ರೂ. ಇದೆ. ಆದರೆ ನಟಿ ತೆರಿಗೆ ಹಣವನ್ನು ಇನ್ನೂ ಕಟ್ಟಿಲ್ಲವಂತೆ.
ನಾಸಿಕ್‌ನ ಕಂದಾಯ ಇಲಾಖೆಯು ಮಾರ್ಚ್ ತಿಂಗಳೊಳಗಾಗಿ ಎಲ್ಲ ತೆರಿಗೆ ಹಣವನ್ನು ಕಟ್ಟಿಸಿಕೊಳ್ಳುವ ಗುರಿ ಹೊಂದಿದ್ದು, ಅದರಂತೆ ಈಗಾಗಲೇ ತೆರಿಗೆ ಕಟ್ಟದ ಹಲವರಿಗೆ ನೋಟಿಸ್ ನೀಡಲಾಗಿದೆ. ನಟಿಗೂ ಕೂಡ ಸಾಕಷ್ಟು ಬಾರಿ ಈ ಬಗ್ಗೆ ಮಾಹಿತಿ ನೀಡಲಾಗಿದೆಯಾದರೂ ನಟಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ನೋಟಿಸ್ ಜಾರಿ ಮಾಡಲಾಗಿದೆ.
ಐಶ್ವರ್ಯ ಜತೆಯಲ್ಲಿ ಒಟ್ಟು 1200ಕ್ಕೂ ಅಧಿಕ ಮಂದಿಗೆ ಈ ರೀತಿಯ ನೋಟಿಸ್ ಅನ್ನು ನಾಸಿಕ್‌ನ ತಹಸೀಲ್ದಾರ್ ಕಚೇರಿ ನೀಡಿದೆ. ಗಮ್ ಪ್ರೈ. ಲಿ., ಎಲ್.ಬಿ.ಕುಂಜಿರ್ ಎಂಜಿನಿಯರ್ಸ್, ಐಟಿಸಿ ಮರಾಠಾ ಲಿ., ಹೋಟೆಲ್ ಲೀಲಾ ವೆಂಚುರ್ ಲಿ., ಕುಕ್ರೆಜಾ ಡೆವಲಪರ್ ಕಾರ್ಪೋರೇಷನ್, ರಮಾ ಹ್ಯಾಂಡಿಕ್ರಾಫ್ಟ್, ಒಪಿ ಎಂಟರ್‌ಪ್ರೈಸಸ್ ಕಂಪನಿ, ಬಿಂದು ವಾಯು ಉರ್ಜಾ ಲಿ., ಏರ್ ಕಂಟ್ರೋಲ್ ಪ್ರೈ ಲಿ., ಮೆಟ್ಕಾನ್ ಇಂಡಿಯಾ ಪ್ರೈ ಲಿ., ಚೋಟಾಭಾಯ್ ಚೇಠಾಭಾಯ್ ಪಟೇಲ್ ಆ್ಯಂಡ್ ಕಂಪನಿ ಸೇರಿ ಅನೇಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎಲ್ಲರೂ ತೆರಿಗೆ ಪಾವತಿಸಿದಲ್ಲಿ ನಾಸಿಕ್ ತೆಹಸೀಲ್ದಾರ್ ಕಚೇರಿಯಲ್ಲಿ ಒಟ್ಟು 1.1 ಕೋಟಿ ರೂ. ತೆರಿಗೆ ಸಂಗ್ರಹವಾಗುವುದಾಗಿ ಮಾಹಿತಿಯಿದೆ.
ಇದನ್ನೂ ಓದಿ: Aishwarya Rai Bachchan | ಮಗಳು ಆರಾಧ್ಯಳಿಗೆ ಐಶ್ವರ್ಯಾ ರೈ ಪ್ರೀತಿಯಿಂದ ಸಿಹಿ ಮುತ್ತು: ʻನಾಚಿಕೆಗೇಡುʼಅಂದ್ರು ನೆಟ್ಟಿಗರು!