Site icon Vistara News

Viral News : ಮಿಸ್‌ ವರ್ಲ್ಡ್‌ ಕಿರೀಟದೊಂದಿಗೆ ನೆಲದ ಮೇಲೆ ಕುಳಿತು ಊಟ ಮಾಡಿದ್ದ ಐಶ್ವರ್ಯ ರೈ! ಫೋಟೊ ವೈರಲ್‌

#image_title

ಮುಂಬೈ: ಅಹಂಕಾರ ಮನುಷ್ಯನ ಕೆಟ್ಟ ಗುಣ. ಸಾಧನೆಯ ಮೆಟ್ಟಿಲೇರಿದ ತಕ್ಷಣ ಅಹಂಕಾರದಿಂದ ಮೆರೆಯುವ ಎಷ್ಟೋ ಜನರನ್ನು ನಾವು ನೋಡಿರುತ್ತೇವೆ. ಆದರೆ ಎಲ್ಲರೂ ಹಾಗೆಯೇ ಅಲ್ಲ. ಕೆಲವು ಮಂದಿ ಅದೆಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮತನವನ್ನು ಬಿಟ್ಟುಕೊಡುವುದಿಲ್ಲ. ಅಂಥವರಲ್ಲಿ ಒಬ್ಬರು ಬಾಲಿವುಡ್‌ನ ಪ್ರಸಿದ್ಧ ನಟಿ ಐಶ್ವರ್ಯ ರೈ. ಮಿಸ್‌ ವರ್ಲ್ಡ್‌ ಕಿರೀಟವನ್ನೂ ಗೆದ್ದಿರುವ ಈ ನಟಿಯ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು (Viral News) ಮಾಡುತ್ತಿದೆ.

ಅದು 1994ರ ಕಾಲ. ಮಿಸ್‌ ಇಂಡಿಯಾ ಕಿರೀಟವನ್ನು ತನ್ನದಾಗಿಸಿಕೊಂಡಿದ್ದ ಐಶ್ವರ್ಯ ರೈ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ಆಗಿನ್ನೂ 22 ವರ್ಷದವರಾಗಿದ್ದ ಅವರಿಗೆ ಆ ವರ್ಷ ಅದೃಷ್ಟ ಖುಲಾಯಿಸಿ ಬಂದಿತ್ತು. ಮಿಸ್‌ ವರ್ಲ್ಡ್‌ ಕಿರೀಟ ಕೂಡ ಐಶ್ವರ್ಯ ಅವರ ಪಾಲಿಗೇ ದಕ್ಕಿತ್ತು. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಐಶ್ವರ್ಯ ಕಿರೀಟದೊಂದಿಗೆ ದೇಶಕ್ಕೆ ಮರಳಿದ್ದರು.

ಇದನ್ನೂ ಓದಿ: Stars Makeup: ಐಶ್ವರ್ಯಾ ರೈ ಪರ್ಪಲ್‌ ಲಿಪ್‌ಸ್ಟಿಕ್‌ ನೆನಪಿಸಿದ ನಟಿ ಊರ್ವಶಿ ರೌತೇಲಾ ಟೀಲ್‌ ಬ್ಲ್ಯೂ ಲಿಪ್‌ಸ್ಟಿಕ್‌ ಲುಕ್‌!
ಅದೇ ಸಮಯದ ಫೋಟೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ನಟಿ ಮಿಸ್‌ ವರ್ಲ್ಡ್‌ ಕಿರೀಟ ಧರಿಸಿರುವುದನ್ನು ಕಾಣಬಹುದು. ಕಿರೀಟ ಹೊತ್ತ ನಟಿ ನೆಲದ ಮೇಲೆ ಕುಳಿತುಕೊಂಡು ಊಟ ಮಾಡುತ್ತಿದ್ದಾರೆ. ಅವರ ಪಕ್ಕದಲ್ಲಿ ಅವರ ತಾಯಿ ಕುಳಿತುಕೊಂಡು ಊಟ ಮಾಡುತ್ತಿದ್ದಾರೆ. ಕೆಂಪು ಬಣ್ಣದ ಸೀರೆಯುಟ್ಟ ಐಶ್ವರ್ಯ ಎಲ್ಲರಂತೆ ತಾವೂ ಒಬ್ಬರಾಗಿ ನೆಲದ ಮೇಲೆ ಕುಳಿತಿರುವ ಫೋಟೋ ಅದಾಗಿದೆ.

ಈ ಫೋಟೋ ಹಂಚಿಕೊಳ್ಳುತ್ತಿರುವ ನೆಟ್ಟಿಗರು ಐಶ್ವರ್ಯ ಅವರ ಸರಳತೆ ಬಗ್ಗೆ ಮಾತನಾಡುತ್ತಿದ್ದಾರೆ. ಅಹಂಕಾರವಿಲ್ಲದ ನಟಿ ಎಂದು ಹಾಡಿ ಹೊಗಳುತ್ತಿದ್ದಾರೆ. ಹಾಗೆಯೇ ಅವರ ಬಗ್ಗೆ ಹಲವಾರು ರೀತಿಯ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ನಟಿ ಐಶ್ವರ್ಯಾ ರಾಜೇಶ್ ಜತೆಗಿನ ವಿವಾದಕ್ಕೆ ಅಂತ್ಯ ಹಾಡಿದ ರಶ್ಮಿಕಾ ಮಂದಣ್ಣ
ಐಶ್ವರ್ಯ ಅವರು ಸದ್ಯ ಪೊನ್ನಿಯಿನ್‌ ಸೆಲ್ವನ್‌ 2ರ ಯಶಸ್ಸಿನ ಕುಂಗಿನಲ್ಲಿದ್ದಾರೆ. ಈ ಸಿನಿಮಾ ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರವಾಗಿದೆ. ಚೋಳ ರಾಜವಂಶದ ಕಥೆಯಾಗಿರುವ ಈ ಸಿನಿಮಾದಲ್ಲಿ ಐಶ್ವರ್ಯ ರೈ ಸೇರಿದಂತೆ ದೊಡ್ಡ ತಾರಾಬಣವೇ ಇದೆ.

Exit mobile version