ಬೆಂಗಳೂರು: ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ ಏಪ್ರಿಲ್ 20ರಂದು ತಮ್ಮ 16ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಅಭಿಷೇಕ್ ಜತೆಗಿನ ಸೆಲ್ಫಿ ಹಂಚಿಕೊಂಡು ಐಶ್ವರ್ಯಾ ರೈ ಅವರು “ಸ್ವೀಟ್ 16” ಎಂದು ಕ್ಯಾಪ್ಷನ್ ನೀಡಿದ್ದಾರೆ. ಅವರ ಅಭಿಮಾನಿಗಳು ಹಾಗೂ ಸಿನಿ ತಾರೆಯರಿಂದ ಸಾಕಷ್ಟು ವಿಶಸ್‌ಗಳು ಹರಿದು ಬಂದಿವೆ.
2007 ಏಪ್ರಿಲ್ 20ರಂದ ಮುಂಬೈನ ಬಚ್ಚನ್ ನಿವಾಸ ಪ್ರತೀಕ್ಷಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಜೋಡಿ. ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಮಾಜಿ ವಿಶ್ವ ಸುಂದರಿ ಕಂಜೀವರಂ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರೆ, ಅಭಿಷೇಕ್ ಬಿಳಿ ಶೆರ್ವಾನಿ ಧರಿಸಿದ್ದರು. ಇಬ್ಬರೂ ಸಾಕಷ್ಟು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ʻಧೈ ಅಕ್ಷರ್ ಪ್ರೇಮ್ ಕೆʼ (2000), ʻಕುಚ್ ನಾ ಕಹೋʼ (2003), ʻಉಮ್ರಾವ್ ಜಾನ್ʼ ಮತ್ತು ʻಧೂಮ್ 2ʼ (2006), ʻಗುರುʼ (2007), ʻರಾವನ್ ʼ(2010) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಮದುವೆಗೆ ಸುಮಾರು 6-7 ಕೋಟಿ ಖರ್ಚು ಮಾಡಲಾಗಿದೆ. ಮದುವೆಯ ನಂತರ, ಐಶ್ವರ್ಯಾ ಮತ್ತು ಅಭಿಷೇಕ್ ಅವರಿಗೆ ಆರಾಧ್ಯ ಎಂಬ ಮುದ್ದಾದ ಮಗಳು ಜನಿಸಿದಳು.
ಇದನ್ನೂ ಓದಿ: Aishwarya Rai | ತೆರಿಗೆ ಕಟ್ಟದ ಐಶ್ವರ್ಯ ರೈ ಬಚ್ಚನ್; ನೋಟಿಸ್ ಕೊಟ್ಟ ತೆರಿಗೆ ಇಲಾಖೆ ಅಧಿಕಾರಿಗಳು
ಐಶ್ವರ್ಯಾ ರೈ ಪೋಸ್ಟ್
ಐಶ್ವರ್ಯ ರೈ ಸದ್ಯ ಪೊನ್ನಿಯನ್ ಸೆಲ್ವನ್-ಭಾಗ 2ದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಪೊನ್ನಿಯನ್ ಸೆಲ್ವನ್ ಸಿನಿಮಾ ಮಾಡಬೇಕೆಂಬುದು ತಮಿಳುನಾಡಿನಲ್ಲಿ ಎಂಜಿಆರ್ ಕಾಲದಿಂದಲೂ ಕನಸಾಗಿತ್ತು. ಮಣಿರತ್ನಂ ಈಗ ಇದನ್ನು ನನಸಾಗಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ತ್ರಿಷಾ, ಜಯಂ ರವಿ, ಕಾರ್ತಿ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜಯರಾಮ್, ಶರತ್‌ಕುಮಾರ್, ಪ್ರಭು, ಐಶ್ವರ್ಯಾ ಲಕ್ಷ್ಮೀ, ವಿಕ್ರಮ್ ಪ್ರಭು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಸಂಗೀತವನ್ನು ಎ.ಆರ್ ರೆಹಮಾನ್ ಸಂಯೋಜಿಸಿದ್ದಾರೆ. ಅಭಿಷೇಕ್ ಕೊನೆಯದಾಗಿ ಅಜಯ್ ದೇವಗನ್ ಅವರ ಭೋಲಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.
ಆದಿತ್ಯ ಚೋಪ್ರಾ ಅವರ ತಾಯಿ ಪಮೇಲಾ ಚೋಪ್ರಾ ಅವರ ಹಠಾತ್ ನಿಧನದ ನಂತರ ಐಶ್ವರ್ಯಾ ರೈ ದಂಪತಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.