ಚೆನ್ನೈ: ಅಲ್ಲು ಅರ್ಜುನ್ ಅವರ ಪುಷ್ಪಾ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಮಿಂಚಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಆ ಸಿನಿಮಾ ರಶ್ಮಿಕಾ ಅವರ ಫೇಮ್ ಅನ್ನು ಇನ್ನಷ್ಟು ಹೆಚ್ಚಿಸಿದ್ದಂತೂ ಸುಳ್ಳಲ್ಲ. ಆದರೆ ಇದೀಗ ರಶ್ಮಿಕಾ ಅವರಿಗಿಂತಲೂ ಚೆನ್ನಾಗಿ ಶ್ರೀವಲ್ಲಿ ಪಾತ್ರವನ್ನು ನಾನು ಮಾಡುತ್ತಿದ್ದೆ ಎಂದು ನಟಿ ಐಶ್ವರ್ಯ ರಾಜೇಶ್ (Aishwarya Rajesh) ಹೇಳಿಕೊಂಡಿದ್ದಾರೆ.
ನಟಿ ಐಶ್ವರ್ಯ ಅವರು ತಮ್ಮ ಫರ್ಹಾನಾ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಈ ಮಾತುಗಳನ್ನು ಆಡಿದ್ದಾರೆ. “ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ ಆ ಪಾತ್ರ ಅವರಿಗಿಂತ ನನಗೇ ಹೆಚ್ಚು ಸೂಕ್ತವಾಗುತ್ತಿತ್ತು. ನಾನು ಅವರಿಗಿಂತ ಚೆನ್ನಾಗಿ ಆ ಪಾತ್ರವನ್ನು ನಿಭಾಯಿಸಬಲ್ಲೆಯಾಗಿದ್ದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Rashmika Mandanna: ʻನಾನ್‌ವೆಜ್ ತಿನ್ನಲ್ಲʼ ಎಂದು ಸಿಕ್ಕಿಹಾಕಿಕೊಂಡ ರಶ್ಮಿಕಾ; ನೆಟ್ಟಿಗರಿಂದ ತರಾಟೆ
ಐಶ್ವರ್ಯ ಅವರು ಸಿನಿಮಾ ರಂಗದಲ್ಲಿ ತಮಿಳಿನ ಕಾಕ ಮುಟ್ಟಾಯ್ ಸಿನಿಮಾ ಮೂಲಕ ಖ್ಯಾತಿ ಪಡೆದುಕೊಂಡವರು. ಅಲ್ಲಿಂದ ಅವರು ಬಹುಬೇಡಿಕೆಯ ನಟಿಯಾಗಿ ಬದಲಾಗಿದ್ದಾರೆ. ತಮಿಳಿನ ಭೂಮಿಕಾ, ಡ್ರೈವರ್ ಜಮುನಾ, ದಿ ಗ್ರೇಟ್ ಇಂಡಿಯನ್ ಕಿಚನ್, ಸೊಪ್ಪನ ಸುಂದರಿ, ರನ್ ಬೇಬಿ ರನ್ ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಹಿಂದಿಯಲ್ಲಿ ಫಿಲಂ, ಡ್ಯಾಡಿ ಸಿನಿಮಾಗಳಲ್ಲೂ ನಟಿಸಿದ್ದಾರೆ.
ಇದೀಗ ಫರ್ಹಾನಾ ಸಿನಿಮಾದಲ್ಲಿ ಈ ನಟಿ ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಮಗುವಿನ ತಾಯಿಯಾದ ಅವರು ಕುಟುಂಬದ ಬಡತನ ತಾಳಲಾರದೆ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡಲಾರಂಭಿಸುತ್ತಾರೆ. ಅಲ್ಲಿ ಪ್ರತಿ ಕರೆಗಳು ನಟಿಯ ಜೀವನವನ್ನೇ ಬದಲಿಸುವ ಕುರಿತಾಗಿ ಕಥೆಯಿದೆ.