Site icon Vistara News

Ajay Devgan | ಅಜಯ್ ದೇವಗನ್ ಅಭಿನಯದ ʻಭೋಲಾʼ ಟೀಸರ್‌ ರಿಲೀಸ್‌ ಡೇಟ್‌ ಅನೌನ್ಸ್‌

Ajay Devgan Starrer ``Bholaa'' Teaser Release Date Announced

ಬೆಂಗಳೂರು : ಅಜಯ್ ದೇವಗನ್ (Ajay Devgan) ಅವರ ʻದೃಶ್ಯಂʼ ಸಿನಿಮಾ ಸಕ್ಸೆಸ್‌ ಬೆನ್ನಲ್ಲೇ ಇದೀಗ ಅವರ ನಟನೆ ಹಾಗೂ ನಿರ್ದೇಶನದ ʻಭೋಲಾʼ ಟೀಸರ್ (Bholaa Teaser) ಜನವರಿ 24ರಂದು ಬಿಡುಗಡೆಗೊಳ್ಳುತ್ತಿದೆ. ನಟ ಕೈಯಲ್ಲಿ ತ್ರಿಶೂಲ ಹಿಡಿದಿರುವ ಫಸ್ಟ್‌ ಲುಕ್‌ ಈ ಹಿಂದೆ ಬಿಡುಗಡೆಯಾಗಿತ್ತು. ಇದೀಗ ಟೀಸರ್‌ ಬಿಡುಗಡೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಜತೆ ಅಜಯ್‌ ದೇವಗನ್‌ ಸಂತಸ ಹಂಚಿಕೊಂಡಿದ್ದಾರೆ.

ʻಭೋಲಾʼ ಸಿನಿಮಾ 2019ರಲ್ಲಿ ಬಿಡುಗಡೆಯಾದ ತಮಿಳಿನ ʻಕೈದಿʼ ಚಿತ್ರದ ರಿಮೇಕ್ ಆಗಿದೆ. ತಮಿಳಿನಲ್ಲಿ ಕಾರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ದೇವಗನ್ ನಿರ್ದೇಶನದ ʻಭೋಲಾʼ ಮಾರ್ಚ್ 30ರಂದು ಥಿಯೇಟರ್‌ಗಳಿಗೆ ಬರಲಿದೆ. ಟಬು ಕೂಡ ಈ ಯೋಜನೆಯ ಭಾಗವಾಗಿದ್ದಾರೆ. ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರತಂಡ ಪೋಸ್ಟರ್ ಅನ್ನು ಹಂಚಿಕೊಂಡಿದ್ದು ʻʻಒಬ್ಬ ಪೊಲೀಸ್ ಅಧಿಕಾರಿ. 100 ಅಪರಾಧಿಗಳುʼʼ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಭೋಲಾ ಚಿತ್ರವು ಅಜಯ್ ದೇವಗನ್ ಮತ್ತು ನಟಿ ಟಬು ಅವರ ಒಂಬತ್ತನೇ ಚಿತ್ರವಾಗಿದೆ. ಇವರಿಬ್ಬರು ಕೊನೆಯದಾಗಿ ದೃಶ್ಯಂ 2ದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Drishyam 2 | ʻಭೇಡಿಯʼಚಿತ್ರ ಹಿಂದಿಕ್ಕಿದ ದೃಶ್ಯಂ-2: 12ನೇ ದಿನ ಭರ್ಜರಿ ಕಲೆಕ್ಷನ್‌!

ಇದನ್ನೂ ಓದಿ: Drishyam 2 | ಒಂದೇ ವಾರದಲ್ಲಿ 100 ಕೋಟಿ ಬಾಚಿದ ದೃಶ್ಯಂ-2 ! ಕಲೆಕ್ಷನ್‌ ವಿವರ ಇಲ್ಲಿದೆ

ದೃಶ್ಯಂ-2 ಸಿನಿಮಾ 2022ರಲ್ಲಿ 200 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದ ಏಕೈಕ ಮೂರನೇ ಹಿಂದಿ ಚಲನಚಿತ್ರವಾಗಿದೆ. ಮಲಯಾಳಂ ನಟ ಮೋಹನ್‌ಲಾಲ್‌ ಅಭಿನಯದ ʻದೃಶ್ಯಂ 2ʼ ಸಿನಿಮಾ ಹಲವು ಭಾಷೆಗಳಲ್ಲಿ ರಿಮೇಕ್‌ ಆಗಿದೆ.ದೃಶ್ಯಂ ಮೊದಲನೇ ಭಾಗದಲ್ಲಿಯೂ ಅಜಯ್‌ ದೇವಗನ್‌ ನಟಿಸಿದ್ದರು. 2015ರಲ್ಲಿ ಮೊದಲನೇ ಭಾಗ ತೆರೆ ಕಂಡಿತ್ತು. ಇದೀಗ ಈ ಚಿತ್ರ ಮುಂದುವರಿದ ಭಾಗವಾಗಿದೆ.

Exit mobile version