Site icon Vistara News

KL Rahul- Athiya Shetty Wedding: ಹಸೆಮಣೆ ಏರಲಿರುವ ಅಥಿಯಾ-ಕೆಎಲ್ ರಾಹುಲ್ ಜೋಡಿಗೆ ಶುಭ ಹಾರೈಸಿದ ಅಜಯ್‌ ದೇವಗನ್‌!

Ajay Devgan wishes KL Rahul- Athiya Shetty Wedding

ಬೆಂಗಳೂರು : ನಟಿ ಅಥಿಯಾ ಶೆಟ್ಟಿ ಅವರು 2019ರಲ್ಲಿ ಕ್ರಿಕೆಟಿಗ ಕೆಎಲ್ ರಾಹುಲ್‌ ಅವರನ್ನು ಭೇಟಿಯಾದರು. ಅಲ್ಲಿಂದ ಅವರಿಬ್ಬರ ಮಧ್ಯೆ ಪ್ರೀತಿ ಬೆಳೆದು ಸೋಷಿಯಲ್‌ ಮೀಡಿಯಾದಲ್ಲಿ ಫೋಟೊ ಶೇರ್‌ ಮಾಡುವುದರ ಮೂಲಕ ತಮ್ಮ ಪ್ರೀತಿಯ ಬಗ್ಗೆ ಅಧಿಕೃತಗೊಳಿಸಿದರು. ಇದೀಗ ಜೋಡಿ ಜನವರಿ 23ರಂದು ಹಸೆಮಣೆ ಏರಲು ಸಜ್ಜಾಗಿದೆ. ಪೂರಕ ಎಂಬಂತೆ ಅಜಯ್‌ ದೇವಗನ್‌ ಅಥಿಯಾ ಮತ್ತು ರಾಹುಲ್‌ (KL Rahul- Athiya Shetty Wedding) ಜೋಡಿಗೆ ಶುಭ ಹಾರೈಸಿದ್ದಾರೆ. ಅಜಯ್‌ ದೇವಗನ್‌ ಮಾಡಿರುವ ಟ್ವೀಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಜನವರಿ 23 ರಂದು ಸಂಜೆ 4 ಗಂಟೆ ಸುಮಾರಿಗೆ ಸುನೀಲ್ ಶೆಟ್ಟಿ ಅವರ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ವಿವಾಹದ ಪ್ರತಿಜ್ಞೆ ವಿನಿಮಯ ಮಾಡಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ, ಅಜಯ್ ದೇವಗನ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಶೀಘ್ರದಲ್ಲೇ ವಿವಾಹವಾಗಲಿರುವ ದಂಪತಿಗೆ ಮತ್ತು ಅವರ ಸ್ನೇಹಿತ ಸುನೀಲ್ ಶೆಟ್ಟಿಗೆ ಶುಭ ಹಾರೈಸಿದ್ದಾರೆ. ಅಜಯ್ ಟ್ವೀಟ್‌ನಲ್ಲಿ “ನನ್ನ ಆತ್ಮೀಯ ಸ್ನೇಹಿತರಾದ ಸುನೀಲ್‌ ಶೆಟ್ಟಿ ಹಾಗೂ ಅಥಿಯಾ ಶೆಟ್ಟಿ, ಕೆ.ಎಲ್‌ ರಾಹುಲ್‌ ನನ್ನ ಶುಭ ಹಾರೈಕೆ. ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ಅವರಿಗೆ ಸುಖಮಯ ದಾಂಪತ್ಯ ಜೀವನಕ್ಕಾಗಿ ಹಾರೈಸುತ್ತೇನೆ. ಅಣ್ಣಾ, ಸುನೀಲ್‌ ಶೆಟ್ಟಿ ಅವರೇ ಈ ಶುಭ ಸಂದರ್ಭದಲ್ಲಿ ನಿಮಗಾಗಿ ಒಂದು ವಿಶೇಷ ಘೋಷಣೆ ಇಲ್ಲಿದೆ” ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: Athiya Shetty-KL Rahul | ಅಥಿಯಾ-ರಾಹುಲ್‌ ಕುರಿತು ಪಾಪರಾಜಿಗಳಿಗೆ ವಿನಯತೆಯಿಂದ ಭರವಸೆ ಕೊಟ್ಟ ಸುನೀಲ್‌ ಶೆಟ್ಟಿ!

ಅಥಿಯಾ, ಕೆಎಲ್ ರಾಹುಲ್ ಅವರ ಮದುವೆಗೆ ಕೇವಲ 100 ಅತಿಥಿಗಳು

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರು ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಜನವರಿ 23 ರಂದು ಸುನೀಲ್ ಶೆಟ್ಟಿ ಅವರ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ (kl rahul athiya Shetty marriage venue) ವಿವಾಹ ಜರುಗಲಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮದುವೆಯಲ್ಲಿ ಸುಮಾರು 100 ಗೆಸ್ಟ್‌ಗಳು (Athiya kl rahul marriage) ಇರಲಿದ್ದಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವಿವಾಹದ ನಿಯಮಗಳಂತೆ ಮೊಬೈಲ್ ಫೋನ್‌ ಸಮಾರಂಭದಲ್ಲಿ ನಿಷೇಧಿಸಲಾಗಿದೆ. ಅತಿಥಿಗಳ ಪಟ್ಟಿಯಲ್ಲಿ ಜಾಕಿ ಶ್ರಾಫ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.

ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಶ್ರಾಫ್ ಮತ್ತು ಬಾಲಿವುಡ್ ಛಾಯಾಗ್ರಾಹಕ ರೋಹನ್ ಶ್ರೇಷ್ಠ ಭಾಗಿಯಾಗಲಿದ್ದಾರೆ (Athiya Shetty KL Rahul wedding guest list) ಎನ್ನಲಾಗಿದೆ. ಅಥಿಯಾ ಮತ್ತು ಕೆಎಲ್ ರಾಹುಲ್ ಸೋಮವಾರ ಜನವರಿ 23ರಂದು ಸಂಜೆ 4 ಗಂಟೆಗೆ ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಿ ವಿಧಾನಗಳನ್ನು ಅನುಸರಿಸಿ, ಅವರು ಸಂಜೆ 6:30 ಕ್ಕೆ ಪಾಪರಾಜಿಗಳಿಗೆ ಪೋಸ್ ನೀಡಲಿದ್ದಾರೆ.

ಪ್ರೀ ವೆಡ್ಡಿಂಗ್‌ ಫಂಕ್ಷನ್‌

ಜನವರಿ 21 ರ ಸಂಜೆ ಆತ್ಮೀಯ ಕಾಕ್‌ಟೈಲ್ ಪಾರ್ಟಿಯೊಂದಿಗೆ (kl rahul athiya Shetty latest news) ಮದುವೆಯ ಪ್ರಿ ವೆಡ್ಡಿಂಗ್‌ ಕಾರ್ಯಗಳು ಪ್ರಾರಂಭವಾದವು ಎಂದು ವರದಿಯಾಗಿದೆ. ಇದರ ನಂತರ ಜನವರಿ 22 ರಂದು ಮೆಹಂದಿ ಮತ್ತು ಹಳದಿ ಕಾರ್ಯಕ್ರಮವು ಸುನೀಲ್‌ ಶೆಟ್ಟಿ ಅವರ ಖಂಡಾಲಾ ಮನೆಯಲ್ಲಿ ನಡೆದಿದೆ (kl rahul athiya wedding schedule,). ಎರಡೂ ಕುಟುಂಬಗಳು ಮತ್ತು ಜೋಡಿ ಮುಂಬೈ ಮತ್ತು ಬೆಂಗಳೂರಿನಲ್ಲಿ ತಮ್ಮ ಸ್ನೇಹಿತರಿಗೆ ಹಾಗೂ ಆತ್ಮೀಯರಿಗಾಗಿ ಆರತಕ್ಷತೆಯನ್ನು ಆಯೋಜಿಸಲಿದೆ ಎಂದು ವರದಿಯಾಗಿದೆ. ಆದರೆ ಮದುವೆ ಬಗ್ಗೆ ರಾಹುಲ್ ಹಾಗೂ ​ಅಥಿಯಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: KL Rahul- Athiya Shetty Wedding: ಕೆ.ಎಲ್​. ರಾಹುಲ್​-ಅಥಿಯಾ ಶೆಟ್ಟಿ ಮದುವೆ ಸಮಾರಂಭದ ವಿಶೇಷತೆಗಳೇನು?

Exit mobile version