ಬೆಂಗಳೂರು: ದೃಶ್ಯಂ-1 ಹಾಗೂ ದೃಶ್ಯಂ-2ರ ರೀಮೇಕ್‌ಗಳು ಹಿಟ್ ಕಂಡಿವೆ. ದೃಶ್ಯಂ 3 (Drishyam 3 Movie)ಯನ್ನು ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗುವುದು ಎಂದು ಚಿತ್ರತಂಡ ಈ ಹಿಂದೆಯೇ ನಿರ್ಧಾರ ಕೈಗೊಂಡಿತ್ತು. ಇತ್ತೀಚಿನ ಬೆಳವಣಿಗೆಯ ಪ್ರಕಾರ ದೃಶ್ಯಂ 3 ಸ್ಕ್ರಿಪ್ಟಿಂಗ್ ಕೆಲಸಗಳು ಶುರುವಾಗಿದೆ. 2024ರಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ ಎಂದು ವರದಿಯಾಗಿದೆ. ಹಿಂದಿ ಮತ್ತು ಮಲಯಾಳಂ ಎರಡೂ ಆವೃತ್ತಿಗಳನ್ನು ಒಟ್ಟಿಗೆ ಬಿಡುಗಡೆ ಮಾಡುವ ಯೋಜನೆಯಿದೆ ಎಂದು ವರದಿಯಾಗಿದೆ.
2013ರಲ್ಲಿ ಮೋಹನ್‌ಲಾಲ್ ಮತ್ತು ಜೀತು ಜೋಸೆಫ್ ಮಲಯಾಳಂನಲ್ಲಿ ದೃಶ್ಯಂ ಸಿನಿಮಾ ನಿರ್ಮಿಸಿದ್ದರು. ಬಳಿಕ ಇದೇ ಸಿನಿಮಾ ತಮಿಳು, ತೆಲುಗು, ಹಿಂದಿ, ಕನ್ನಡದಲ್ಲಿ ರಿಮೇಕ್ ಆಯಿತು. ಕಮಲ್ ಹಾಸನ್, ವೆಂಕಟೇಶ್ ಮತ್ತು ಅಜಯ್ ದೇವಗನ್, ರವಿಚಂದ್ರನ್ ನಾಯಕರಾಗಿ ನಟಿಸಿದರು. ಮಲಯಾಳಂ ಮತ್ತು ತೆಲುಗು ಆವೃತ್ತಿಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮ್ ಆಗಿದ್ದರೆ, ಹಿಂದಿ ರಿಮೇಕ್ ಎರಡನೇ ಭಾಗವು 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್ ಹಿಟ್ ಆಯಿತು.
ಹಿಂದಿ ಮತ್ತು ಮಲಯಾಳಂ ಚಿತ್ರತಂಡಗಳು ಏಕಕಾಲದಲ್ಲಿ ಚಿತ್ರೀಕರಿಸುವ ಸಲುವಾಗಿ ಒಟ್ಟಿಗೆ ಕೆಲಸ ಮಾಡುತ್ತಿವೆ ಎಂದು ವರದಿಯಾಗಿದೆ. ಭಾರತದಾದ್ಯಂತ ಒಟ್ಟಿಗೆ ಬಿಡುಗಡೆ ಮಾಡುವ ಆಲೋಚನೆ ಇದೆ ಎಂದು ತಿಳಿದುಬಂದಿದೆ. ಕೇರಳದ ವೀಕ್ಷಕರು ಮೋಹನ್ ಲಾಲ್ ಅವರ ಸಿನಿಮಾ ನೋಡಿದರೆ, ಇತರರು ಅಜಯ್ ದೇವಗನ್ ಅವರ ಹಿಂದಿ ಆವೃತ್ತಿಯನ್ನು ಆನಂದಿಸಬಹುದು. ಚಿತ್ರಕಥೆಯನ್ನು ಅಂತಿಮಗೊಳಿಸಿದ ನಂತರ ಮಲಯಾಳಂ ಹಾಗೂ ಹಿಂದಿ ವರ್ಷನ್ ಒಟ್ಟಿಗೆ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.
ಹಿಂದಿ ಪ್ರೇಕ್ಷಕರಿಗೆ ಕಥೆಯಲ್ಲಿ ಫ್ರೆಶ್ ನೆಸ್ ಇರುತ್ತದೆ. ಮಲಯಾಳಂ ಆವೃತ್ತಿಯು ಮೊದಲು ಬಿಡುಗಡೆಯಾದರೆ ಅನೇಕರು ಅದಾಗಲೇ ನೋಡಿ ಬಿಡುತ್ತಾರೆ. ಹಾಗಾಗಿ ಏಕಕಾಲದಲ್ಲಿ ಬಿಡುಗಡೆಗೊಂಡರೆ ಹಿಂದಿ ಪ್ರೇಕ್ಷಕರಿಗೂ ಹೊಸತನವಿರುತ್ತದೆ ಎಂಬ ಅಭಿಪ್ರಾಯವಿದೆ.
ಇದನ್ನೂ ಓದಿ: Drishyam 3: ಮಲಯಾಳಂ, ಹಿಂದಿಯಲ್ಲಿ ಏಕಕಾಲದಲ್ಲಿ ದೃಶ್ಯಂ 3 ಶೂಟಿಂಗ್?
ಜೀತು ಜೋಸೆಫ್ ನಿರ್ದೇಶಿಸಿದ ಈ ಚಿತ್ರ ಮಲಯಾಳಂ ಚಿತ್ರರಂಗದಿಂದ ಬಂದ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ಇತರ ಭಾಷೆಗಳಲ್ಲಿ ರೀಮೇಕ್ ಆಗಿ ಯಶಸ್ವಿ ಪ್ರದರ್ಶನ ಕಂಡಿದೆ. ಹಿಂದಿಯಲ್ಲಿ ಅಜಯ್ ದೇವಗನ್ ನಟಿಸಿ ದೃಶ್ಯಂ 2 ಬಾಕ್ಸ್ ಆಫೀಸ್‌ನಲ್ಲಿ ಸುಮಾರು 350 ಕೋಟಿ ರೂ. ಗಳಿಕೆ ಕಂಡು ಸೈ ಎನಿಸಿಕೊಂಡಿತು. ಹಿಂದಿ ಆವೃತ್ತಿಯನ್ನು ಅಭಿಷೇಕ್ ಪಾಠಕ್ ನಿರ್ದೇಶಿಸಿದ್ದಾರೆ.