Site icon Vistara News

Ajay Devgn: ಅಜಯ್ ದೇವಗನ್ ಅಭಿನಯದ ʻರೈಡ್‌ 2ʼ ಶೂಟಿಂಗ್‌ ಶುರು

Ajay Devgn begins Raid 2 shooting

ಬೆಂಗಳೂರು: 2018ರಲ್ಲಿ ಅಜಯ್ ದೇವಗನ್ (Ajay Devgn) ಅಭಿನಯದ ʻರೈಡ್‌ʼ (Raid Movie) ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್‌ ಕಂಡಿತ್ತು. ಇದೀಗ ಅಜಯ್ ದೇವಗನ್ ಅವರು ʻರೈಡ್‌ 2ʼ ಸಿನಿಮಾ ಮಾಡಲು ಮುಂದಾಗಿದ್ದಾರೆ. ನಿರ್ದೇಶಕ ರಾಜ್‌ಕುಮಾರ್ ಗುಪ್ತಾ ಅವರೊಂದಿಗೆ ‘ರೇಡ್ 2’ ಸಿನಿಮಾಗಾಗಿ ಕೈ ಜೋಡಿಸುತ್ತಿದ್ದಾರೆ. ಜನವರಿ 6 ರಂದು ಸಿನಿಮಾದ ಶೂಟಿಂಗ್‌ ಪ್ರಾರಂಭಗೊಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಅಜಯ್ ದೇವಗನ್ ಅವರ ವಿಮರ್ಶಾತ್ಮಕ ಮೆಚ್ಚುಗೆ ಪಡೆದ ಚಿತ್ರ ‘ರೈಡ್‌ʼ ಮುಂದಿನ ಭಾಗಕ್ಕೆ ಸಿದ್ಧವಾಗಿದೆ. ಜನವರಿ 6 ರಂದು ಮುಂಬೈನಲ್ಲಿ ಚಿತ್ರೀಕರಣ ಪ್ರಾರಂಭವಾಗಿದ್ದು, ಮುಂಬೈ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಚಿತ್ರೀಕರಣ ನಡೆಯಲಿದೆ. ಭೂಷಣ್ ಕುಮಾರ್, ಕುಮಾರ್ ಮಂಗತ್ ಪಾಠಕ್, ಅಭಿಷೇಕ್ ಪಾಠಕ್ ಮತ್ತು ಕ್ರಿಶನ್ ಕುಮಾರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ʻರೈಡ್‌ 2ʼ ಸಿನಿಮಾ 2024ರ ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೊಸ ಪೋಸ್ಟರ್‌ ಮೂಲಕ ಮಾಹಿತಿ ಹಂಚಿಕೊಂಡಿದೆ. ಮೊದಲ ಭಾಗ 1980 ದಶಕದಲ್ಲಿ ಸರ್ದಾರ್ ಇಂದರ್ ಸಿಂಗ್ ಮೇಲೆ ಐಟಿ ಇಲಾಖೆ ದಾಳಿ ನಡೆಸಿದ್ದ ಘಟನೆ ಒಳಗೊಂಡಿತ್ತು.

ಇದನ್ನೂ ಓದಿ: Ajay Devgn: ಜನುಮದಿನದ ಸಂಭ್ರಮಾಚರಣೆಯಲ್ಲಿ ಅಭಿಮಾನಿಯಿಂದ ಅಜಯ್ ದೇವಗನ್ ತಪ್ಪಿಸಿಕೊಂಡದ್ದು ಹೇಗೆ?

ʻಸಿಂಗಂ ಅಗೇನ್ʼ ಸಿನಿಮಾ

ಅಲ್ಲು ಅರ್ಜುನ್ (Allu Arjun) ಅಭಿನಯದ ಪುಷ್ಪ 2 ಸಿನಿಮಾ 2024ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎಂದು ಪುಷ್ಪ 2 ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಅದೇ ದಿನ ರೋಹಿತ್ ಶೆಟ್ಟಿ ನಿರ್ದೇಶನ, ಅಜಯ್ ದೇವಗನ್ (Ajay Devgn) ನಾಯಕನಾಗಿ ನಟಿಸಿರುವ ʻಸಿಂಗಂ ಅಗೇನ್ʼ ಸಿನಿಮಾ ರಿಲೀಸ್‌ ಆಗಲಿದೆ. ಒಂದೇ ದಿನ ಈ ಬಿಗ್​ ಬಜೆಟ್​ ಸಿನಿಮಾಗಳು ರಿಲೀಸ್​ ಆಗಲಿವೆ.

‘ಸಿಂಗಂ ಅಗೇನ್​’ ಸಿನಿಮಾಗೆ ರೋಹಿತ್​ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಜಯ್​ ದೇವಗನ್​ ಮಾತ್ರವಲ್ಲದೇ ಅನೇಕ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕರೀನಾ ಕಪೂರ್​ ಖಾನ್​, ದೀಪಿಕಾ ಪಡುಕೋಣೆ ಸಹ ಮುಖ್ಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಇದೇ ಚಿತ್ರದಲ್ಲಿ ಟೈಗರ್​ ಶ್ರಾಫ್​ ಮತ್ತು ಅಕ್ಷಯ್​ ಕುಮಾರ್​ ಅವರು ಅತಿಥಿ ಪಾತ್ರ ಮಾಡುತ್ತಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಹಾಗಾಗಿ ಹಿಂದಿ ಪ್ರೇಕ್ಷಕರ ವಲಯದಲ್ಲಿ ಈ ಚಿತ್ರದ ಬಗ್ಗೆ ಹೈಪ್​ ಹೆಚ್ಚುತ್ತಿದೆ. ಅಜಯ್ ದೇವಗನ್ ‘ಮೈದಾನ್‌’ ಬಿಡುಗಡೆಗೆ ಸಿದ್ಧವಾಗಿದೆ.

Exit mobile version