Site icon Vistara News

Ajay Devgn: ಜನುಮದಿನದ ಸಂಭ್ರಮಾಚರಣೆಯಲ್ಲಿ ಅಭಿಮಾನಿಯಿಂದ ಅಜಯ್ ದೇವಗನ್ ತಪ್ಪಿಸಿಕೊಂಡದ್ದು ಹೇಗೆ?

Ajay Devgn hand away from fan at his birthday

ಬೆಂಗಳೂರು: ಏಪ್ರಿಲ್ 2ರಂದು ಅಜಯ್ ದೇವಗನ್ (Ajay Devgn) ಅವರ 54ನೇ ಜನುಮದಿನವಾಗಿದ್ದು ಅಭಿಮಾನಿಗಳು ವಿಶೇಷ ರೀತಿಯಲ್ಲಿ ಆಚರಿಸಿದರು. ನಟನನ್ನು ನೋಡಲು ನೂರಾರು ಅಭಿಮಾನಿಗಳು ಅವರ ಮನೆಯ ಹೊರಗೆ ಜಮಾಯಿಸಿದ್ದರು. ಆದರೆ, ಅಭಿಮಾನಿಯೊಬ್ಬ ಒಪ್ಪಿಗೆ ಇಲ್ಲದೇ ಇದ್ದಕ್ಕಿದ್ದ ಹಾಗೆ ಅಜಯ್ ದೇವಗನ್ ಅವರ ಕೈ ಹಿಡಿದುಕೊಂಡಿದ್ದಾನೆ. ನಟ ಅಜಯ್‌ ದೇವಗನ್‌ ಯಾವುದೇ ಪ್ರತಿಕ್ರಿಯೆ ನೀಡದೆ, ನಿಧಾನವಾಗಿ ತಪ್ಪಿಸಿಕೊಂಡು ಪರಿಸ್ಥಿಯನ್ನು ನಿಭಾಯಿಸಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮಾಧ್ಯಮಗಳು ಹಂಚಿಕೊಂಡ ವಿಡಿಯೊದಲ್ಲಿ, ಅಜಯ್ ದೇವಗನ್ ತನ್ನ ಹುಟ್ಟುಹಬ್ಬದಂದು ಸರಳವಾದ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್‌ನಲ್ಲಿ ತನ್ನ ಮನೆಯಿಂದ ಹೊರಬರುವುದನ್ನು ಕಾಣಬಹುದು. ಅವರು ಹಳದಿ ಸನ್‌ಗ್ಲಾಸ್‌ ಸಹ ಧರಿಸಿದ್ದಾರೆ. ತಮ್ಮ ಅಭಿಮಾನಿಗಳನ್ನು ಕಂಡೊಡನೆ ಮುಗುಳ್ನಕ್ಕು ಸ್ವಾಗತಿಸಿದ್ದಾರೆ. ಕೆಲವು ಅಭಿಮಾನಿಗಳು ಸೆಲ್ಫಿಗಾಗಿ ಅವರನ್ನು ಸುತ್ತುವರೆದಿದ್ದಾರೆ. ಅಭಿಮಾನಿಯೊಬ್ಬ ಅಜಯ್‌ ಅವರ ಕೈ ಹಿಡಿದು ಗೊಂದಲಕ್ಕೀಡಾಗುವಂತಹ ಸ್ಥಿತಿ ಕೂಡ ನಿರ್ಮಾಣವಾಗಿತ್ತು. ನಟ ಅಜಯ್‌ ದೇವಗನ್‌ ಯಾವುದೇ ಪ್ರತಿಕ್ರಿಯೆ ನೀಡಿದೆ, ನಿಧಾನವಾಗಿ ತಪ್ಪಿಸಿಕೊಂಡು ಪರಿಸ್ಥಿಯನ್ನು ನಿಭಾಯಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; Bhola Movie: ಅಜಯ್‌ ದೇವಗನ್‌ ಅಭಿನಯದ ʻಭೋಲಾʼ ಚಿತ್ರ ಮೊದಲ ದಿನದ ಗಳಿಕೆ ಎಷ್ಟು?

ಅಜಯ್‌ ದೇವಗನ್‌ ಮನೆಯ ಮುಂದೆ ಅಭಿಮಾನಿಗಳ ದಂಡು

ಭೋಲಾ ಬಗ್ಗೆ

ʻಯುʼ, ʻಮಿ ಔರ್ ಹಮ್ʼ, ʻಶಿವಾಯ್ʼ ಮತ್ತು ʻಮೇಡೇʼ ನಂತರ ಅಜಯ್ ದೇವಗನ್ ಅವರ ನಾಲ್ಕನೇ ನಿರ್ದೇಶನ ಭೋಲಾ. ಈ ಚಿತ್ರ ಲೋಕೇಶ್ ಕನಕರಾಜ್ ಅಭಿನಯದ ಕೈದಿ ಚಿತ್ರದ ರಿಮೇಕ್ ಆಗಿದೆ. ಅಜಯ್ ಮತ್ತೊಮ್ಮೆ ಟಬು ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ದೀಪಕ್ ಡೊಬ್ರಿಯಾಲ್, ಸಂಜಯ್ ಮಿಶ್ರಾ, ಅಮಲಾ ಪೌಲ್ ಮತ್ತು ವಿನೀತ್ ಕುಮಾರ್ ಸೇರಿದಂತೆ ಇತರರು ನಟಿಸಿದ್ದಾರೆ. ಭೋಲಾ ಮಾರ್ಚ್ 30ರಂದು ತೆರೆ ಕಂಡಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿದೆ.

Exit mobile version